Spiritual: ಮನುಷ್ಯನೆಂದ ಮೇಲೆ ಅವನಿಗೆ ಕಷ್ಟಗಳು ಬರುತ್ತದೆ. ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಕೆಲವರು ಕಷ್ಟಕ್ಕೆ ಪರಿಹಾರ ಸಿಗದೇ, ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಕಷ್ಟಕ್ಕೆ ಸಹಾಯ ಮಾಡಲು, ಇತರರ ಬಳಿ ಮನವಿ ಮಾಡುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ನಾವು ಕೆಲ ಜನರಲ್ಲಿ ಸಹಾಯ ಕೇಳಬಾರದಂತೆ. ಹಾಗಾದ್ರೆ ಎಂಥವರ ಬಳಿ ನಾವು ಸಹಾಯಕ್ಕಾಗಿ ಕೈ ಚಾಚಬಾರದು ಎಂದು ತಿಳಿಯೋಣ ಬನ್ನಿ..
ಎಲ್ಲದರಲ್ಲೂ ಲಾಭ ನೋಡುವವರ ಬಳಿ ಎಂದಿಗೂ ಸಹಾಯ ಕೇಳಬಾರದು. ಎಲ್ಲ ವಿಷಯದಲ್ಲೂ ಯಾರು ಲಾಭವನ್ನು ನೋಡುತ್ತಾರೋ, ಅಂಥವರು ಸಂಬಂಧವನ್ನು ಕೂಡ ಲಾಭಕ್ಕಾಗಿಯೇ ನಿಭಾಯಿಸುತ್ತಾರೆ. ಅವರ ಮನೆ ಜನ ಅವರಿಗೆ ಹಣ ನೀಡಬೇಕು ಅಥವಾ ಅವರಿಗೆ ಹಲವು ಕೆಲಸಗಳಲ್ಲಿ ಸಹಾಯ ಮಾಡಬೇಕು. ಇಲ್ಲವಾದಲ್ಲಿ, ಇವರು ಸಂಬಂಧಿಕರಿಗೇ ಬೆಲೆ, ಪ್ರೀತಿ, ಗೌರವ ಕೊಡುವುದಿಲ್ಲ. ಇಂಥ ಜನರ ಬಳಿ ಎಂದಿಗೂ ಸಹಾಯ ಕೇಳಬೇಡಿ. ಇಂಥವರು ಸಹಾಯ ಮಾಡಿ, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ, ಬಳಿಕ ನಿಮ್ಮ ಬಳಿ ಚಾಕರಿ ಮಾಡಿಸಿಕೊಳ್ಳುತ್ತಾರೆ.
ಹೊಟ್ಟೆ ಕಿಚ್ಚಿನ ಬುದ್ಧಿ ಇರುವವರ ಬಳಿ ಸಹಾಯ ಕೇಳಬಾರದು. ಹೊಟ್ಟೆಕಿಚ್ಚಿನ ಬುದ್ಧಿ ಇರುವವರ ಬಳಿ ಯಾಕೆ ಸಹಾಯ ಕೇಳಬಾರದು ಅಂದ್ರೆ, ಅಂಥವರು ಮೊದಲು ಸಹಾಯ ಮಾಡುತ್ತಾರೆ. ಬಳಿಕ ನೀವು ಅವರ ಬಳಿ ಸಹಾಯ ಕೇಳಿದ್ದೀರಿ ಎಂದು ನಿಮ್ಮನ್ನು ಎಲ್ಲರ ಮುಂದೆ ಅವಮಾನಿಸುತ್ತಾರೆ. ಹಾಗಾಗಿ ಹೊಟ್ಟೆ ಕಿಚ್ಚಿನ ಬುದ್ಧಿ ಇರುವವರ ಬಳಿ ಸಹಾಯ, ಸಾಲ ಕೇಳಬಾರದು.
ಹಂಗಿಸುವವರ ಬಳಿ ಸಹಾಯ ಕೇಳಬೇಡಿ. ಹಂಗಿಸುವ ಬುದ್ಧಿ ಇರುವವರು ಮೊದಲು ಸಹಾಯ ಮಾಡುತ್ತಾರೆ. ಬಳಿಕ ನಿಮ್ಮ ಹಿಂದಿನಿಂದ, ಇತರರ ಎದುರು ನಿಮ್ಮನ್ನು ಹಂಗಿಸುತ್ತಾರೆ. ಮಾಡಿದ ಸಹಾಯ ಅಥವಾ ಸಾಲ ಮರಳಿ ಕೊಡುವುದು ತಡವಾದರೆ, ಎಲ್ಲರೆದುರು ನಿಮ್ಮನ್ನು ಹಂಗಿಸಬಹುದು. ಹಾಗಾಗಿ ಹಂಗಿಸುವ ಬುದ್ಧಿ ಇರುವವರ ಬಳಿ ಎಂದಿಗೂ ಸಹಾಯ ಕೇಳಬೇಡಿ.
ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?
ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

