Saturday, July 12, 2025

Latest Posts

ಇಂಥ ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

- Advertisement -

Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು ಯಾವ ವಿಷಯವನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು..? ಅಂಥ ವಿಷಯಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಚಾಣಕ್ಯರು ಏನು ಹೇಳಿದ್ದಾರೆಂಬ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..

ಬುದ್ಧಿವಂತರ ಸಹವಾಸ ನಿರ್ಲಕ್ಷಿಸಬೇಡಿ. ಬುದ್ಧಿವಂತರಿಗೆ ಯಾರ ಬಳಿ ಹೇಗಿರಬೇಕು. ಯಾರ ಬಳಿ ಹೇಗೆ ಮಾತನಾಡಬೇಕು. ಎಷ್ಟು ಮಾತನಾಡಬೇಕೆಂದು ಗೊತ್ತಿರುತ್ತದೆ. ಅವರ ನಡುವಳಿಕೆಯೇ, ಅವರ ಬುದ್ಧಿವಂತಿಕೆಗೆ ಹಿಡಿದ ಕೈಗನ್ನಡಿಯಾಗಿರುತ್ತದೆ. ಅಂಥವರ ಸಹವಾಸ ಮಾಡಿದರೆ, ನಮ್ಮ ನಡುವಳಿಕೆಯೂ ಸರಿಯಾಗುತ್ತದೆ. ಅವರೊಂದಿಗೆ ಮಾತನಾಡುವುದರಿಂದ, ನಮ್ಮ ಜ್ಞಾನವೂ ಹೆಚ್ಚುತ್ತದೆ.

ಖರ್ಚು ಮಾಡುವಾಗ ನಿರ್ಲಕ್ಷ್ಯ ವಹಿಸಬೇಡಿ. ದುಡಿಯುತ್ತಿದ್ದೇನೆ. ಬೇಕಾದ ಹಾಗೆ ಖರ್ಚು ಮಾಡುತ್ತೇನೆ ಎಂದು, ದುಡ್ಡು ಖರ್ಚು ಮಾಡಿದರೆ, ಮುಂದೊಂದು ದಿನ ಕಷ್ಟಕಾಲ ಬಂದಾಗ, ದುಡ್ಡಿನ ಅವಶ್ಯಕತೆ ಇದ್ದಾಗ, ಚಡಪಡಿಸಬೇಕಾಗುತ್ತದೆ. ಹಾಗಾಗಿ ಆದಷ್ಟು ಮಿತವಾಗಿ ದುಡ್ಡು ಖರ್ಚು ಮಾಡಿ, ಉಳಿತಾಯ ಮಾಡುವುದು ಬುದ್ಧಿವಂತರ ಲಕ್ಷಣ.

ಸಂಬಂಧಗಳ ಬಗ್ಗೆ ನಿರ್ಲಕ್ಷ್ಯವೂ ಬೇಡ, ಅತೀಯಾದ ಬಾಂಧವ್ಯವೂ ಬೇಡ. ನಾವು ಜೀವನದಲ್ಲಿ ಯಾವ ಸಂಬಂಧದ ಬಗ್ಗೆಯೂ, ಅಥವಾ ವಸ್ತುವಿನ ಬಗ್ಗೆಯೂ ಹೆಚ್ಚು ಮೋಹ ಹೊಂದಿರಬಾರದು ಅಂತಾರೆ ಚಾಣಕ್ಯರು. ಅದೇ ರೀತಿ ನಿರ್ಲಕ್ಷ್ಯವೂ ಇರಬಾರದು. ಹೆಚ್ಚು ಮೋಹವಿದ್ದರೆ, ಆ ಸಂಬಂಧ ಹಾಳಾದರೆ, ಆ ವಸ್ತು ಹಾಳಾದರೆ, ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇನ್ನು ಯಾವ ಸಂಬಂಧವನ್ನು ನಾವು ನಿರ್ಲಕ್ಷಿಸಿ, ಅದನ್ನು ನಾವೇ ಹಾಳು ಮಾಡಿಕೊಳ್ಳಬಾರದು.

ಸಿಕ್ಕ ಸಿಕ್ಕವರ ಬಗ್ಗೆ ನಿರ್ಲಕ್ಷ್ಯ ಬೇಡ. ಕೆಲವರು ಸಿಕ್ಕ ಸಿಕ್ಕವರ ಬಳಿ ಗೆಳೆತನ ಮಾಡಿಕೊಂಡು, ಅವರೊಂದಿಗೆ ಅನ್ಯೋನ್ಯವಾಗಿ ಇರಲು ಶುರು ಮಾಡುತ್ತಾರೆ. ಅವರ ಸಣ್ಣ ಪುಟ್ಟ ತಪ್ಪುಗಳನ್ನು ಸಹ ನಿರ್ಲಕ್ಷಿಸುತ್ತಾರೆ. ಆದರೆ ಅಂಥವರ ಬಗ್ಗೆ ನಿರ್ಲಕ್ಷ್ಯ ಮಾಡದೇ, ಅವರನ್ನು ಪೂರ್ತಿಯಾಗಿ ನಂಬಿ ಮೋಸಹೋಗಬಾರದು ಅಂತಾರೆ ಚಾಣಕ್ಯರು.

ಇಂಥ ಗುಣವಿದ್ದರೆ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ ಅಂತಾರೆ ಚಾಣಕ್ಯರು

ಶ್ರೀಕೃಷ್ಣ ಹೇಳಿದ 5 ಜೀವನ ಪಾಠಗಳನ್ನು ನೀವೂ ಕಲಿಯಿರಿ..

ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..

- Advertisement -

Latest Posts

Don't Miss