Friday, April 11, 2025

Latest Posts

ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..

- Advertisement -

ಪತಿ- ಪತ್ನಿ ಸಂಬಂಧ ಹೇಗಿರಬೇಕು ಅಂದ್ರೆ ಹಾಲು, ಜೇನಿನ ರೀತಿ ಇರಬೇಕು ಎನ್ನುತ್ತಾರೆ ಹಿರಿಯರು. ಅಂದ್ರೆ, ಎಲ್ಲ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ, ಕಾಳಜಿಯಿಂದ, ಇರಬೇಕು. ಯಾವುದೇ ವಿಷಯವನ್ನು ಮುಚ್ಚುಮರೆ ಮಾಡದೇ, ಎಲ್ಲ ವಿಷಯವನ್ನ ಚರ್ಚೆ ಮಾಡಿ, ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆಗಲೇ ಜೀವನ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಚಾಣಕ್ಯರ ಪ್ರಕಾರ, ಪತಿ ತನ್ನ ಪತ್ನಿಗೆ ಕೆಲ ವಿಷಯಗಳನ್ನು ಹೇಳಲೇಬಾರದು. ಹಾಗಾದ್ರೆ ಯಾವ ವಿಷಯವನ್ನ ಪತಿ ಪತ್ನಿಯ ಬಳಿ ಹೇಳಲೇಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಿಚಾರ, ನಿಮ್ಮ ಜೀವನದಲ್ಲಿ ನಡೆದ ಹಳೇ ಘಟನೆಗಳನ್ನು ಪತ್ನಿಯಲ್ಲಿ ಹೇಳಬೇಡಿ. ಪತಿ- ಪತ್ನಿ ಪ್ರೀತಿಯಿಂದ ಇರುವಾಗ ಕೆಲವೊಮ್ಮೆ ನಿಮ್ಮ ಹಳೆಯ ವಿಷಯಗಳನ್ನ ನೀವು ಶೇರ್ ಮಾಡಿಕೊಳ್ಳಬಹುದು. ಆದ್ರೆ ಆ ಮಾತನ್ನ ಆಕೆಗೆ ಹೇಳಿದ್ರೆ, ಮುಂದೊಂದು ದಿನ ಅದೇ ವಿಷಯವನ್ನಿಟ್ಟುಕೊಂಡು, ಆಕೆ ನಿಮ್ಮ ಹಂಗಿಸಬಹುದು. ಹೊರಗಿನವರ ಎದುರಿಗೆ ಆ ವಿಷಯವನ್ನು ಹೇಳಿ, ನಿಮ್ಮನ್ನು ಅವಮಾನಿಸಬಹುದು. ಹಾಗಾಗಿ ನಿಮ್ಮ ಜೀವನದಲ್ಲಿ ನಡೆದ ಕೆಲ ಕಹಿ ಘಟನೆಗಳ ಬಗ್ಗೆ ಯಾರಲ್ಲಿಯೂ ಚರ್ಚಿಸದಿದ್ದರೆ ಒಳ್ಳೆಯದು.

ಎರಡನೇಯ ವಿಚಾರ, ನಿಮ್ಮ ಆರ್ಥಿಕ ಪರಿಸ್ಥಿತಿ, ನಿಮ್ಮ ಬಳಿ ಇರುವ ದುಡ್ಡಿನ ಬಗ್ಗೆ ಪತ್ನಿಗೆ ಹೇಳಬೇಡಿ. ನೀವು ಪತ್ನಿ, ಮನೆ ಮಕ್ಕಳಿಗೋಸ್ಕರ ದುಡ್ಡು ಮಾಡಿಡಬೇಕು. ಕಷ್ಟಕಾಲಕ್ಕಾಗಿ ಹಣ ಕೂಡಿಡಬೇಕು ಎನ್ನುವುದು ಸತ್ಯ. ಆದ್ರೆ ನಿಮ್ಮ ಬಳಿ ಎಷ್ಟು ದುಡ್ಡು ಇದೆ ಅನ್ನೋ ಬಗ್ಗೆ ಸಂಪೂರ್ಣವಾಗಿ ನಿಮ್ಮ ಪತ್ನಿಗೆ ಹೇಳಬೇಕೆಂದಿಲ್ಲ. ಆದರೆ ಅಪ್ಪಿ ತಪ್ಪಿ ನಿಮ್ಮ ಜೀವಕ್ಕೆ ಅಪಾಯವಾಗುವ ಸೂಚನೆ ಇದ್ದರೆ, ನೀವು ಬ್ಯಾಂಕ್‌ನಲ್ಲಿ ದುಡ್ಡನ್ನ ಸುರಕ್ಷಿತವಾಗಿ ಇಡಬಹುದು. ಅದು ನಿಮ್ಮ ಪತ್ನಿಗೆ ಸೇರುವಂತೆ ವ್ಯವಸ್ಥೆ ಮಾಡಬಹುದು. ಆದರೆ ದುಡ್ಡಿನ ವಿಚಾರವನ್ನೆಲ್ಲ ಪತ್ನಿಯಲ್ಲಿ ಹೇಳಿಬಿಡುವುದು, ಅಷ್ಟು ಉತ್ತಮವಲ್ಲ.

ಮೂರನೇಯ ವಿಚಾರ, ನೀವು ಭವಿಷ್ಯದಲ್ಲಿ ಏನಾದರೂ ಉದ್ಯಮ ಆರಂಭಿಸಬೇಕೆಂದಿದ್ದೀರಿ ಎಂದಿಟ್ಟುಕೊಳ್ಳಿ. ಅದನ್ನು ಆರಂಭಿಸಲು ಸಕಾಲ ಬಂದಾಗಷ್ಟೇ ಅದರ ಬಗ್ಗೆ ಹೇಳಿ. ಅದನ್ನು ಬಿಟ್ಟು ನಾನು ಉದ್ಯಮ ಆರಂಭಿಸುತ್ತೇನೆ, ನಾವು ಶ್ರೀಮಂತರಾಗೋಣ ಎಂದು ಮೊದಲೇ ಪತ್ನಿಗೆ ಆಸೆ ತೋರಿಸಬೇಡಿ. ಆಕೆಯ ಆಸೆ ನಿರಾಸೆಯಾದರೆ, ಆಕೆ ಅದನ್ನೇ ಇಟ್ಟುಕೊಂಡು ನಿಮ್ಮನ್ನು ಅವಮಾನಿಸಬಹುದು.

ಇಲ್ಲಿ ಹೇಳಿದ ವಿಚಾರಗಳು ಪತ್ನಿಯರಿಗೂ ಅವಲಂಬಿಸುತ್ತದೆ. ಕೆಲ ಪುರುಷರು ಕೂಡ, ಹೆಣ್ಣು ಮಕ್ಕಳ ಜೀವನದ ಜೊತೆ ಆಟವಾಡಲು ಶುರು ಮಾಡಬಹುದು. ಹಾಗಾಗಿ ಪತ್ನಿಯಾದವಳು ಕೂಡ ಇಂಥ ತಪ್ಪುಗಳನ್ನು ಮಾಡಬಾರದು.

40 ಮಹಿಳೆಯರಿಗೆ ಒಬ್ಬನೇ ಗಂಡ..? : ಪರಿಶೀಲಿಸಿದಾಗ ತಿಳಿಯಿತು ಸತ್ಯಸಂಗತಿ..

ಈ ಮೂರು ವಿಚಾರಗಳಿಂದ ದೂರವಿದ್ದರೆ ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ..

ಮೈಲಾರಿ ಹೋಟೇಲ್‌ನಲ್ಲಿ ದೋಸೆ ರೆಡಿ ಮಾಡಿದ ಪ್ರಿಯಾಂಕಾ ಗಾಂಧಿ..

- Advertisement -

Latest Posts

Don't Miss