Wednesday, July 2, 2025

Latest Posts

ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..

- Advertisement -

Spiritual : ಶ್ರೀಮಂತಿಕೆ ಇದ್ದು, ಬಳಿಕ ಬಡತನ ಬಂದವರನ್ನು ನೀವು ನೋಡಿರುತ್ತೀರಿ. ಬಡತನದಲ್ಲಿ ಬೆಳೆದು, ಕಷ್ಟಪಟ್ಟು ದುಡಿದು ಶ್ರೀಮಂತರಾದವರನ್ನು ನೀವು ನೋಡಿರುತ್ತೀರಿ. ಬಡವ, ಶ್ರೀಮಂತನಾದರೆ, ಅದು ಉತ್ತಮ ಬೆಳವಣಿಗೆ. ಆದರೆ ಶ್ರೀಮಂತ, ಬಡವನಾಗುವುದು ಅತ್ಯಂತ ದರಿದ್ರ ಸ್ಥಿತಿ. ಇಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ. ಇಂಥ ಸ್ಥಿತಿ ಶ್ರೀಮಂತನಿಗೆ ಬರಬಾರದು ಅಂದ್ರೆ, ಮನುಷ್ಯ ತನ್ನ ಬಳಿ ಹಣವಿರುವಾಗಲೂ, ಕೆಲ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರು ಹೇಳಿದ, ಆ ಚಾಣಕ್ಯ ನೀತಿ ಯಾವುದು ಅಂತಾ ತಿಳಿಯೋಣ ಬನ್ನಿ..

ಶ್ರೀಮಂತಿಕೆ ಇರುವಾಗ ಮಾಡಬಾರದ ಮೊದಲ ತಪ್ಪು ಅಂದ್ರೆ, ದುಂದು ವೆಚ್ಚ. ಹೇಗೂ ದುಡ್ಡಿದೆ, ಮಜಾ ಮಾಡೋಣವೆಂದು, ಶಾಪಿಂಗ್‌ ಮಾಡುವುದು, ಆಹಾರಕ್ಕೆ, ಕುಡಿತಕ್ಕೆ, ಕೆಟ್ಟ ಚಟಗಳಿಗೆ ಹಣ ಖರ್ಚು ಮಾಡುವುದನ್ನು ಮಾಡಿದಾಗಲೇ, ಶ್ರೀಮಂತನಿಗೆ ದರಿದ್ರ ಆವರಿಸುತ್ತದೆ. ಹಾಗಾಗಿ ಚಾಣಕ್ಯರು, ಶ್ರೀಮಂತಿಕೆ ಇದ್ದಾಗಲೂ, ಅವಶ್ಯಕ್ಕೆ ತಕ್ಕಂತೆ ಖರ್ಚು ಮಾಡಿ. ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡಬೇಡಿ. ಮಿತವಾಗಿ, ಜೀವನದಲ್ಲಿ ಆನಂದವಾಗಿರಿ ಎಂದಿದ್ದಾರೆ.

ಶ್ರೀಮಂತಿಕೆ ಇರುವಾಗ ಮಾಡಬಾರದ ಎರಡನೇಯ ತಪ್ಪು ಅಂದ್ರೆ ಅಹಂಕಾರ ತೋರಿಸುವುದು. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ, ಮನುಷ್ಯನಿಗೆ ಕೆಟ್ಟ ಕಾಲ ಬಂದಾಗಲೇ, ಅವನಲ್ಲಿ ಅಹಂಕಾರ ಬರುತ್ತದೆ. ಹಾಗಾಗಿ ಎಂದಿಗೂ ಅಹಂಕಾರ ತೋರಿಸಬೇಡಿ ಎಂದಿದ್ದಾರೆ ಚಾಣಕ್ಯರು. ಅದರಲ್ಲೂ ನಿಮ್ಮ ಶ್ರೀಮಂತಿಕೆಯ ಬಗ್ಗೆ ನಿಮಗೆಂದೂ ಅಹಂಕಾರವಿರಬಾರದು.

ಶ್ರೀಮಂತಿಕೆ ಇರುವಾಗ ಮಾಡಬಾರದ ಮೂರನೇಯ ತಪ್ಪು ಅಂದ್ರೆ, ಇನ್ನಬ ಹೆಚ್ಚಿನ ಶ್ರೀಮಂತಿಕೆಗೆ ಆಸೆ ಪಡುವುದು. ಇದ್ದಷ್ಟು ಸಾಲದೆಂಬಂತೆ, ಮತ್ತೂ ದುಡ್ಡು ಮಾಡಲು, ಅಡ್ಡ ದಾರಿ ಹಿಡಿಯುವುದು. ಅಥವಾ ಮನೆ ಜನರನ್ನೆಲ್ಲ ಮರೆತು, ಕತ್ತೆಯ ರೀತಿ ದುಡಿಯುವುದು. ಹೀಗೆ ದುರಾಸೆಯಿಂದ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಲು, ನಿಯತ್ತು ಮರೆತರೆ, ಅಂಥ ಶ್ರೀಮಂತಿಕೆ ನಿಮ್ಮ ಬಳಿ ಎಂದಿಗೂ ಉಳಿಯುವುದಿಲ್ಲ ಎನ್ನುತ್ತಾರೆ ಚಾಣಕ್ಯರು.

ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

- Advertisement -

Latest Posts

Don't Miss