Spiritual Story: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಮನುಷ್ಯನಿಗೆ ಬುದ್ಧಿ ಬಂದಾಗಿನಿಂದ ಹಿಡಿದು, ಆತನ ಮರಣದವರೆಗೂ ಅವರು ಹೇಗಿರಬೇಕು..? ಹೇಗೆ ವ್ಯವಹರಿಸಬೇಕು..? ಯಾವ ರೀತಿ ನಡೆಸಬೇಕು..? ಹೇಗೆ ಬುದ್ಧಿ ಉಪಯೋಗಿಸಬೇಕು..? ಇಂಥ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು, ಯಾರಿಗೆ ಈ 5 ಗುಣಗಳು ಇರುತ್ತದೆಯೋ, ಅವರು ಬುದ್ಧಿವಂತರು ಎಂದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯೋಚಿಸಿ ನಿರ್ಧಾರ ತೆಗೆದುಕೊಳ್ಳುವವರು. ಯಾವುದೇ ಕೆಲಸ ಮಾಡುವಾಗ, ಎಲ್ಲಿಯಾದರೂ ಕೆಲಸಕ್ಕೆ ಸೇರುವಾಗ, ಯಾವುದೇ ಉದ್ಯಮ ಮಾಡುವಾಗ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ, ಆ ಬಗ್ಗೆ ಸರಿಯಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಬೇಕು. ಅದನ್ನು ಬುದ್ಧಿವಂತಿಕೆ ಎಂದು ಹೇಳುತ್ತಾರೆ. ಯೋಚಿಸದೇ, ಯಾವುದೇ ನಿರ್ಧಾರ ತೆಗೆದುಕೊಂಡರೂ, ಕೆಲಸ ಮಾಡಿದರೂ, ಆ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಇಲ್ಲ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನು ಅರಿತವರು. ಕೆಲವರು ತಾನೋಬ್ಬನೇ ಸಾಧನೆ ಮಾಡುತ್ತೇನೆ ಎಂದು ಹೊರಡುತ್ತಾರೆ. ಒಬ್ಬರೇ ಸಾಧನೆ ಮಾಡುತ್ತೇನೆ ಎನ್ನುವುದು ತಪ್ಪಲ್ಲ. ಕೆಲವೊಂದು ವಿಷಯವನ್ನು ಬೇರೆಯವರಲ್ಲಿ ಹೇಳದೇ, ನಮ್ಮ ಕೆಲಸವನ್ನು ನಾವು ಮಾಡಬೇಕು. ಆದರೆ ಕಚೇರಿಗಳಲ್ಲಿ, ಅಥವಾ ಮನೆಯಲ್ಲಿ ಎಲ್ಲರೂ ಸೇರಿದಾಗಲೇ, ಕೆಲಸ ಸರಾಗವಾಗಿ, ಪರ್ಫೆಕ್ಟ್ ಆಗಿ ಆಗುತ್ತದೆ ಎಂದಾರೆ, ಒಗ್ಗಟ್ಟಾಗಿ ಕೆಲಸ ಮಾಡಬೇಕು.
ಸಲಹೆ ನೀಡಲು ಯೋಗ್ಯವಾದವರು. ಸಲಹೆ ನೀಡಲು ಯೋಗ್ಯವಾಗಬೇಕು ಅಂದ್ರೆ, ನಮ್ಮ ಮಾತು ಸರಿಯಾಗಿ, ಪ್ರಬುದ್ಧವಾಗಿರಬೇಕು. ಮಾತಿನಲ್ಲಿ ಸ್ಪಷ್ಟತೆ, ಪ್ರೌಢತ್ವವಿದ್ದರೆ, ಆಗ ನಾವು ಇನ್ನೊಬ್ಬರಿಗೆ ಉತ್ತಮ ಸಲಹೆ ನೀಡಬಹುದು. ಇನ್ನು ಉತ್ತಮ ಸಲಹೆ ನೀಡಲು ಯಾರು ಯೋಗ್ಯವಾಗಿರುತ್ತಾರೋ, ಅವರು ಬುದ್ಧಿವಂತರು.
ಸಾಮಾನ್ಯ ಜ್ಞಾನ ಹೊಂದಿರುವವನು. ನಾವೇನಾದ್ರೂ ತಪ್ಪು ಮಾಡಿದಾಗ, ಎದುರಿಗೆ ಇರುವವರು ಕೇಳುವ ಪ್ರಶ್ನೆ ಅಂದ್ರೆ ಕಾಮನ್ ಸೆನ್ಸ್ ಇಲ್ವಾ ಅಂತಾ. ಯಾಕಂದ್ರೆ ಕಾಮನ್ ಸೆನ್ಸ್ ಇದ್ದಿದ್ದರೆ ನಾವು ಜೀವನದಲ್ಲಿ ಹೆಚ್ಚು ತಪ್ಪು ಮಾಡುವುದಿಲ್ಲ. ಹಾಗಾಗಿ ನಾವು ಎಲ್ಲ ವಿಷಯದಲ್ಲೂ ಕಾಮನ್ ಸೆನ್ಸ್ ಹೊಂದಿರಬೇಕು. ಕಾಮನ್ ಸೆನ್ಸ್ ಹೊಂದಿದವರು ಬುದ್ಧಿವಂತ ಅಂತಾರೆ ಚಾಣಕ್ಯ.
ಹಿರಿಯರೊಂದಿಗೆ ಇದ್ದಾಗಲೇ ಜೀವನ ಚೆನ್ನಾಗಿರುತ್ತದೆ ಎಂಬುದನ್ನು ಅರಿತವರು. ಕೆಲವರು ವಿವಾಹವಾಗುವ ಮುನ್ನ, ನನಗೆ ಅತ್ತೆ ಮಾವ ಇರಬಾರದು ಅನ್ನೋ ಪೀಠಿಕೆ ಹಾಕಿಬಿಡುತ್ತಾರೆ. ಇನ್ನು ಕೆಲವರು ನನಗೆ ಸ್ವಾತಂತ್ರ್ಯ ಬೇಕು. ಹಾಗಾಗಿ ನಾನು ಮತ್ತು ನನ್ನ ಪತಿಯಷ್ಟೇ ಬೇರೆ ಮನೆಯಲ್ಲಿರಬೇಕು ಎಂದು ಹೇಳುತ್ತಾರೆ. ಆದರೆ ಬುದ್ಧಿವಂತರಾದವರು, ಹಿರಿಯರು ಮನೆಯಲ್ಲಿರಬೇಕು. ನಾವು ತಪ್ಪು ಮಾಡಿದಾಗ, ಅದನ್ನು ತಿದ್ದಿ ಬುದ್ಧಿ ಹೇಳಬೇಕು. ನಮ್ಮ ಮಕ್ಕಳಿಗೂ ಅವರ ಸಲಹೆ ಅತ್ಯಗತ್ಯ ಎನ್ನುವ ಯೋಚನೆ ಇರುವವರು, ಹಿರಿಯರಿಗೆ ಗೌರವಿಸುವವರು ಬುದ್ಧಿವಂತರು ಅಂತಾರೆ ಚಾಣಕ್ಯರು.
ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ