Spiritual: ಜೀವನದ ಬಗ್ಗೆ ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯನ್ನು ಯಾರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಾರೋ, ಅಂಥವರ ಜೀವನ ಉತ್ತಮವಾಗಿರುತ್ತದೆ. ಅಂಥವರು ಉದ್ಧಾರವಾಗುತ್ತಾರೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಇಂಥ ಚಾಣಕ್ಯರು ನಾಲ್ಕು ಜನರ ಸಂಗದ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅಂಥವರ ಸಂಗ ವಿಷಸರ್ಪದ ಸಂಗವಿದ್ದಂತೆ ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ ನಾಲ್ಕು ಜನ ಅಂತಾ ತಿಳಿಯೋಣ ಬನ್ನಿ..
ಮೊದಲನೇಯವಳು ದುಷ್ಟ ಹೆಂಡತಿ. ಯಾವ ಪತ್ನಿ ಪತಿಯನ್ನು ಪ್ರೀತಿ, ಕಾಳಜಿಯಿಂದ ಕಾಣುವುದನ್ನು ಬಿಟ್ಟು, ಅವನ ದುಡ್ಡಿಗಾಗಿ ಹಪಹಪಿಸುತ್ತಾಳೋ, ಅವಳು ದುಷ್ಟೆಯಾಗಿರುತ್ತಾಳೆ. ಅವಳಿಗೆ ಅವಳ ಪತಿ ಇದ್ದರೂ, ಸತ್ತರೂ ಯಾವುದೇ ಚಿಂತೆ ಇರುವುದಿಲ್ಲ. ಆಕೆಗೆ ಆಕೆಯ ಸುಖ ಮಾತ್ರ ಮುಖ್ಯವಾಗಿರುತ್ತದೆ. ಹಾಗಾಗಿ ಅಂಥ ಪತ್ನಿಯೊಂದಿಗೆ ಸಂಸಾರ ಮಾಡುವುದು ಕೂಡ ವಿಷ ಸರ್ಪದೊಂದಿಗೆ ಸಂಸಾರ ಮಾಡಿದಂತೆ ಎಂದಿದ್ದಾರೆ ಚಾಣಕ್ಯರು.
ಎರಡನೇಯದು ಸುಳ್ಳು ಹೇಳುವ ಬುದ್ಧಿಯುಳ್ಳ ಸ್ನೇಹಿತ. ಯಾವ ಮನುಷ್ಯನಿಗೆ ಮಾತು ಮಾತಿಗೂ ಸುಳ್ಳು ಹೇಳುವ ಗುಣವಿರುತ್ತದೆಯೋ, ಅಂಥವರ ಸಹವಾಸ ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು. ಅಂಥವರು ನಿಮ್ಮ ಜೀವನವನ್ನೇ ಹಾಳು ಮಾಡಬಲ್ಲರು. ಯಾವಾಗ ಸ್ನೇಹಿತ ತನ್ನೆಲ್ಲ ಮಾತನ್ನು ನಂಬುವಷ್ಟು ದಡ್ಡನೆಂದು ಅವನಿಗೆ ಗೊತ್ತಾಗುತ್ತದೆಯೋ, ಆಗ ಆ ಸುಳ್ಳು ಹೇಳುವ ಸ್ನೇಹಿತ, ಅವನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ.
ಮೂರನೇಯದು ದಡ್ಡ ಸೇವಕ. ಸೇವಕನೆಂದ ಮೇಲೆ ಅವನಿಗೆ ನೀವು ಸಂಬಳವನ್ನು ನೀಡುತ್ತೀರಿ. ಅಂದಮೇಲೆ ಅವನು ಕೊಡುವ ಸಂಬಳಕ್ಕೆ ಸರಿಯಾಗಿ, ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಬೇಕು. ಒಡೆಯ ಹೇಳಿದ ಮಾತನ್ನು ಕೇಳಿ, ಕೆಲಸವನ್ನು ಮಾಡಬೇಕು. ಅದನ್ನು ಬಿಟ್ಟು ಕೊನೆಯ ಪಕ್ಷ ಹೇಳಿಕೊಟ್ಟರೂ, ಕಲಿಯದೇ ಇರುವ ದಡ್ಡ ಸೇವಕನಿದ್ದು ಪ್ರಯೋಜನವಿಲ್ಲ. ಇಂಥ ಸೇವಕರು ಸುಮ್ಮನೆ ಒಡೆಯನ ಹಣವನ್ನು ಲೂಟಿ ಮಾಡುವುದಕ್ಕೆ ಇರುತ್ತಾರೆ. ಇವರಿಂದ ನಷ್ಟವಾಗುವುದಷ್ಟೇ ಹೊರತು ಲಾಭವೇನು ಇಲ್ಲ.
ನಾಲ್ಕನೇಯವರು ವಿಷಕಾರುವ ಮನುಷ್ಯ. ಅಂದರೆ ದ್ವೇಷ ಸಾಧಿಸುವ ಮನುಷ್ಯ ಸರ್ಪಕ್ಕೆ ಸಮ ಎನ್ನುತ್ತಾರೆ ಚಾಣಕ್ಯರು. ಯಾವ ಮನೆಯಲ್ಲಿ ಯಾರನ್ನು ಕಂಡರೂ ಅಸೂಯೆ ಪಡುವ, ದ್ವೇಷ ಸಾಧಿಸುವ ಜನರಿರುತ್ತಾರೋ, ಅಂಥ ಮನೆ ಸರ್ಪ ವಾಸಿಸುವ ಮನೆ ಇದ್ದಂತೆ. ಅಂಥ ಮನೆಯಲ್ಲಿ ಇರುವವರಿಗೆ ಎಂದಿಗೂ ಮಾನಸಿಕ ನೆಮ್ಮದಿ ಇರುವುದಿಲ್ಲ.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

