Spiritual: ಜೀವನ ನಡೆಸುವ ಬಗ್ಗೆ, ಹಣದ ವಿಷಯದ ಬಗ್ಗೆ, ಪತಿ-ಪತ್ನಿ ಹೇಗಿರಬೇಕು ಎಂಬ ಬಗ್ಗೆ, ಎಂಥ ಸ್ಥಳದಲ್ಲಿ ಜನ ಬದುಕಬೇಕು ಮತ್ತು ಎಂಥ ಸ್ಥಳದಲ್ಲಿ ಬದುಕಬಾರದು ಅನ್ನೋ ಬಗ್ಗೆ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚಾಣಕ್ಯರು ಜೀವನ ನೀತಿಯನ್ನು ಹೇಳಿದ್ದಾರೆ. ಅದರ ಜೊತೆಗೆ ಹೆಣ್ಣಿನ ಬಗ್ಗೆಯೂ ಹಲವು ವಿಷಯಗಳನ್ನು ಹೇಳಿದ್ದಾರೆ. ಹೆಣ್ಣಿನ ಕೆಲ ಹುಟ್ಟು ಗುಣಗಳು, ಎಂದಿಗೂ ಹೋಗುವುದಿಲ್ಲವೆಂದು ಚಾಣಕ್ಯರು ಹೇಳಿದ್ದಾರೆ. ಅದು ಯಾವ ಗುಣವೆಂದು ತಿಳಿಯೋಣ ಬನ್ನಿ..
ಎಷ್ಟೇ ಬುದ್ಧಿವಂತರಾಗಿದ್ದರೂ ಎಡವಟ್ಟಿನ ಕೆಲಸ ಮಾಡೇ ಮಾಡುತ್ತಾರೆ. ಹೆಣ್ಣು ಮಕ್ಕಳು ಯಾವ ಕೆಲಸ ಮಾಡಿದರೆ, ಯಾವ ಫಲಿತಾಂಶ ಬರುತ್ತದೆ ಎಂದು ಗೊತ್ತಿರುವವರಾಗಿರುತ್ತಾರೆ. ಆದರೆ ಅಷ್ಟು ಬುದ್ಧಿವಂತಿಕೆ ಇದ್ದರೂ ಕೂಡ, ಹೆಣ್ಣು ಮಕ್ಕಳು ಒಂದಲ್ಲ ಒಂದು ಮೂರ್ಖತನದ ಕೆಲಸವನ್ನು ಮಾಡೇ ಮಾಡುತ್ತಾರೆ.
ಹಣವೆಂದರೆ ಬಲು ಪ್ರೀತಿ. ಪುರುಷರಿಗಿಂತ ಹೆಣ್ಣು ಮಕ್ಕಳಿಗೆ ಹಣವೆಂದರೆ ಬಲು ಪ್ರೀತಿ ಎಂದು ಚಾಣಕ್ಯರು ಹೇಳಿದ್ದಾರೆ. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳು ಪತಿಯ ಹಣಕ್ಕಾಗಿ ಆಸೆ ಪಡುವುದಿಲ್ಲ. ಬದಲಾಗಿ ತಾವೇ ತುಡಿದು ಹಣ ಸಂಪಾದಿಸಬೇಕು. ತಮ್ಮ ಆಸೆಯನ್ನು ತಾವೇ ನೆರವೇರಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಇದರ ಜೊತೆ ಪತ್ನಿಯ ಹಣದ ಆಸೆಗಾಗಿ, ಪತಿ ಅಥವಾ ಪ್ರಿಯಕರ ಮಾಡಬಾರದ ಕೆಲಸ ಮಾಡಿದ ಅನ್ನುವ ಸುದ್ದಿಯನ್ನು ಕೂಡ ಕೇಳುತ್ತೇವೆ.
ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳು. ಹೆಣ್ಣು ಮಕ್ಕಳು ಕೆಲವು ಸಮಯದಲ್ಲಿ ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳಾಗಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಭಂಡ ಧೈರ್ಯ ಮಾಡಿಯಾದರೂ, ಕಷ್ಟದಿಂದ ಪಾರಾಗುತ್ತಾರೆ. ಇನ್ನು ಯಾವುದೇ ಪುರುಷ ಎದುರಿಗಿರುವ ಪ್ರತಿಸ್ಪರ್ಧಿ ಮಹಿಳೆ ಎಂದಾದಲ್ಲಿ, ನಿರ್ಲಕ್ಷ್ಯ ಮಾಡದೇ, ಆಕೆಯನ್ನು ಎದುರಿಸುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ ಚಾಣಕ್ಯರು.
ಕೆಲವು ಸಲ ಸುಳ್ಳಿನ ಸಹಾಯ ಪಡೆಯುತ್ತಾರೆ. ಸುಳ್ಳು ಹೇಳುವ ಬುದ್ಧಿ ಎಲ್ಲರಿಗೂ ಇರುವುದಿಲ್ಲ. ಆದರೆ ಹೆಣ್ಣು ಮಕ್ಕಳು ಜೀವನದಲ್ಲಿ ಒಂದು ಸಾರಿಯಾದರೂ ಸುಳ್ಳಿನ ಸಹಾಯ ಪಡೆದು, ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ. ಇನ್ನು ಕೆಲ ಹೆಣ್ಣು ಮಕ್ಕಳು ಮಾತೆತ್ತಿದರೆ, ಬರೀ ಸುಳ್ಳು ಹೇಳುವವರೂ ಇದ್ದಾರೆ, ಇವರು ಸುಳ್ಳು ಹೇಳಿ ಹೇಳಿ ಹಲವು ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ.
ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..
ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..
ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..