Spiritual: ಓರ್ವ ವ್ಯಕ್ತಿ ತೃಪ್ತಿದಾಯಕವಾಗಿ ಜೀವನ ನಡೆಸಲು ಏನೇನು ಬೇಕು ಅಂತಾ ಯೋಚಿಸಿದ್ರೆ, ಮನೆಯಲ್ಲಿ ನೆಮ್ಮದಿಯಿಂದಿರುವ ಕುಟುಂಬ ಬೇಕು. ಬದುಕಲು ದುಡ್ಡು ಬೇಕು. ಆರೋಗ್ಯ ಬೇಕು. ಇವಿಷ್ಟು ಇದ್ದರೆ, ಮನುಷ್ಯ ತೃಪ್ತಿಯಿಂದ ಇರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಹಲವರು ಇದೆಲ್ಲ ಇದ್ದರೂ, ಅತೀ ಆಸೆ ಮಾಡಿ, ಇದ್ದದ್ದನ್ನೂ ಕಳೆದುಕೊಳ್ಳುತ್ತಿದ್ದಾರೆ. ಇನ್ನು ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೇಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು., ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಾವ ಪುರುಷನ ಪತ್ನಿ ಪತಿಯೊಂದಿಗೆ ಎಲ್ಲ ಕಷ್ಟ- ಸುಖದಲ್ಲಿ ಭಾಗಿಯಾಗಿ, ಅವನೊಂದಿಗೆ ಹೊಂದಿಕೊಂಡು ಹೋಗುತ್ತಾಳೋ ಅಂಥ ಪತಿ ತೃಪ್ತಿಯಿಂದ ಇರುತ್ತಾನೆ. ಓರ್ವ ಮನುಷ್ಯ ವಿವಾಹವಾಗುವವರೆಗೂ, ತನಗೆ ಇಷ್ಚಬಂದಂತೆ ಇರುತ್ತಾರೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿ ಬರುತ್ತದೆ. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಊಟ, ಬಟ್ಟೆ, ಪ್ರೀತಿ ಎಲ್ಲವನ್ನೂ ಕೊಡಬೇಕು. ಹೀಗೆ ಪತಿ ಕೊಡುವ ಪ್ರೀತಿ, ಕಾಳಜಿ, ಊಟ, ಬಟ್ಟೆಗೆ ತೃಪ್ತಿ ಪಟ್ಟು, ಯಾವ ಹೆಣ್ಣು ಅವನೊಂದಿಗೆ ಹೊಂದಿಕೊಂಡು ಹೋಗುತ್ತಾಳೋ, ಅಂಥ ಪತ್ನಿಯನ್ನು ಪಡೆದ ಪತಿಯ ಜೀವನ ತೃಪ್ತಿದಾಯಕವಾಗಿರುತ್ತದೆ.
ಯಾವ ಮಗ ಅಪ್ಪನಿಗೆ ವಿಧೇಯನಾಗಿರುತ್ತಾನೋ ಅಂಥ ಅಪ್ಪ ತೃಪ್ತಿಯಿಂದಿರುತ್ತಾನೆ. ಈ ಮೊದಲು ಹೇಳಿದಂತೆ, ಯಾವ ಮನುಷ್ಯನಿಗೆ ಹೊಂದಿಕೊಂಡು ಹೋಗುವ ಪತ್ನಿ ಸಿಗುತ್ತಾಳೋ, ಅಂಥವರಿಗೆ ವಿಧೇಯನಾಗಿರುವ ಮಗ ಸಿಕ್ಕಲ್ಲಿ, ಅಂಥ ಅಪ್ಪ ತೃಪ್ತಿಯಿಂದ ಇರುತ್ತಾನೆ. ಇದ್ದುದರಲ್ಲೇ ಖುಷಿಯಿಂದ ಇರುವ ಪತ್ನಿ, ತನಗೆ ಎದುರುತ್ತರ ನೀಡದೇ, ಆಜ್ಞೆ ಪಾಲಿಸುವ ಮಗನಿದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ ಆ ವ್ಯಕ್ತಿಯ ಜೀವನವಿರುತ್ತದೆ.
ಯಾವ ಮನುಷ್ಯ ತನ್ನಲ್ಲಿರುವ ಸಂಪತ್ತಿನಿಂದ ಸುಖವಾಗಿರುತ್ತಾನೋ ಅವರು ತೃಪ್ತಿಯಿಂದಿರುತ್ತಾನೆ. ಇನ್ನು ಉತ್ತಮ ಪತ್ನಿ, ವಿಧೇಯನಾಗಿರುವ ಮಗನೊಂದಿಗೆ, ತನ್ನಲ್ಲಿ ಇರುವಷ್ಟು ಹಣದಲ್ಲೇ, ನೆಮ್ಮದಿಯಿಂದ, ದುರಾಸೆ ಇಲ್ಲದೇ ಯಾವ ಮನುಷ್ಯ ಜೀವನ ಸಾಗಿಸುತ್ತಾನೋ, ಅವನು ಅತ್ಯಂತ ತೃಪ್ತಿದಾಯಕ ಮನುಷ್ಯನಾಗಿರುತ್ತಾನೆ. ಅವನಿಗೆ ಹೆಚ್ಚು ಮಹಾತ್ವಾಕಾಂಕ್ಷೆ ಇಲ್ಲದಿರುವುದೇ ಅವನ ತೃಪ್ತಿದಾಯಕ ಜೀವನಕ್ಕೆ ಕಾರಣವಾಗಿರುತ್ತದೆ ಎನ್ನುತ್ತಾರೆ ಚಾಣಕ್ಯರು.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

