Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀವನ ನಡೆಸುವ ಬಗ್ಗೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಯಾವ ಮಹಿಳೆಯರಲ್ಲಿ 3 ಗುಣಗಳಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಆ 3 ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ.
ಮೊದಲನೇಯ ಗುಣ: ಯಾವ ಮಹಿಳೆ ದಯಾಮಯಿಯಾಗಿ, ಉದಾರ ಮನಸ್ಸಿನವಳು ಆಗಿರುತ್ತಾಳೋ, ಯಾವ ಮಹಿಳೆಗೆ ಸಹಾಯ ಮಾಡುವ ಗುಣವಿರುತ್ತದೆಯೋ, ಅಂಥ ಮಹಿಳೆಯರು ಶ್ರೇಷ್ಠರು ಎನ್ನಿಸಿಕೊಳ್ಳುತ್ತಾರೆ.
ಎರಡನೇಯ ಗುಣ: ಪೂಜೆ, ಪುನಸ್ಕಾರ, ಧಾರ್ಮಿಕತೆಗೆ ಬೆಲೆ ಕೊಡುವ ಮಹಿಳೆ ಶ್ರೇಷ್ಠ ಮಹಿಳೆ ಎನ್ನಿಸಿಕೊಳ್ಳುತ್ತಾಳೆ. ಏಕೆಂದರೆ ಅಂಥ ಮಹಿಳೆಯರು ಮನೆಯನ್ನು ನಿಭಾಯಿಸುವ ಪರಿ ಅರಿತಿರುತ್ತಾರೆ. ಗುರುಹಿರಿಯರಿಗೆ ಗೌರವ ಮತ್ತು ಮಕ್ಕಳಿಗೆ ಪ್ರೀತಿ ತೋರುವುದನ್ನು ಕಲಿತಿರುತ್ತಾರೆ.
ಮೂರನೇಯ ಗುಣ ಹಣ ಉಳಿಸುವ ಗುಣ: ಮನೆಯಲ್ಲಿ ಪತಿಗಾಗಲಿ, ಮಕ್ಕಳಿಗಾಗಲಿ ಕಷ್ಟ ಬಂದರೆ, ಹಣಕಾಸಿನ ತೊಂದರೆ ಉಂಟಾದರೆ, ಅಂಥ ಸಂದರ್ಭದಲ್ಲಿ ಪತ್ನಿಯ ಬಳಿ ಹಣವಿರಬೇಕು. ಯಾವ ಹೆಣ್ಣು ಮಕ್ಕಳಿಗೆ ಹಣ ಕೂಡಿಡುವ ಅಭ್ಯಾಸವಿರುವುದಿಲ್ಲವೋ, ಅಂಥ ಹೆಣ್ಣು ಮಕ್ಕಳು ಕಷ್ಟಕಾಲಕ್ಕೆ ಯಾರ ಸಹಾಯಕ್ಕೂ ಬರುವವರಲ್ಲ. ಅಲ್ಲದೇ, ಅವರ ಕಷ್ಟ ಕಾಲದಲ್ಲೂ ಅವರು ಬೇರೆಯವರ ಬಳಿ ಕೈ ಚಾಚಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ಹಣ ಉಳಿಸುವ ಬುದ್ಧಿ ಇರುವ ಮಹಿಳೆ ಜಾಣಳು ಎಂದಿದ್ದಾರೆ.

