Spiritual: ಕೆಲವೊಮ್ಮೆ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಡುತ್ತದೆ ಅನ್ನೋದು ನಮಗೂ ಗೊತ್ತಿರುವುದಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ನೀರಿನಂತೆ ಖಾಲಿಯಾಗುತ್ತಾ ಬರುತ್ತದೆ. ಸಂಬಳವಾಗಿ ಮೂರು ದಿನಕ್ಕೆ ಅಕೌಂಟ್ ಖಾಲಿಯಾಗಿರುತ್ತದೆ. ಇನ್ನು ಕೆಲವು ಕಡೆಯಿಂದ ಲಕ್ ಬೈ ಚಾನ್ಸ್ ದುಡ್ಡು ಬರುವುದಿದ್ದರೆ, ಅದು ಕೂಡ ತಪ್ಪಿ ಹೋಗುತ್ತದೆ. ಇದ್ಕಕೆ ಕಾರಣ ನಾವು ಕೆಲವರಿಗೆ ಗೌರವಿಸುವುದಿಲ್ಲ ಅನ್ನೋದು ಅಂತಾ ಹೇಳ್ತಾರೆ ಚಾಣಕ್ಯರು. ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ, ಕೆಲವರನ್ನು ಗೌರವಿಸಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ಅವರು ಯಾರು ಅಂತಾ ತಿಳಿಯೋಣ ಬನ್ನಿ..
ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ಐವರು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಅದು ಯಾರು ಅಂದ್ರೆ, ತಾಯಿ, ಅತ್ತೆ, ಸ್ನೇಹಿತನ ಪತ್ನಿ, ಗುರುವಿನ ಪತ್ನಿ, ಮತ್ತು ರಾಜ ಅಥವಾ ಅಧಿಕಾರಿಯ ಪತ್ನಿ. ಈ ಐವರು ಹೆಣ್ಣು ಮಕ್ಕಳನ್ನು ಯಾರು ಗೌರವಿಸುತ್ತಾರೋ, ಅವರ ಆರ್ಥಿಕ ಬಲ ಉತ್ತಮವಾಗಿರುತ್ತದೆ ಎಂದು ಹೇಳಲಾಗಿದೆ.
ತಾಯಿಯನ್ನು ಯಾರು ಗೌರವಿಸುತ್ತಾರೋ, ಅವರು ರಾಜನಂತೆ ಮೆರೆಯುತ್ತಾರೆ. ಅವರು ಆರ್ಥಿಕವಾಗಿ ಸಧೃಡರಾಗುತ್ತಾರೆ. ಏಕೆಂದರೆ, ಓರ್ವ ತಾಯಿ ತನ್ನ ಮಗ ಉತ್ತಮನಾಗಿರಬೇಕು. ಎಲ್ಲರ ಮುಂದೆ ಗೌರವದಿಂದ ಬದುಕಬೇಕು. ಅವನ ಜೀವನ ಉದ್ಧಾರವಾಗಬೇಕು ಎಂದು ಬಯಸುತ್ತಾಳೆ. ಹಾಗಾಗಿ ತಾಯಿಯನ್ನು ಗೌರವಿಸುವವರು, ಪ್ರೀತಿ, ಕಾಳಜಿಯಿಂದ ಕಾಣುವವರು, ಆರ್ಥಿಕವಾಗಿ ಸಧೃಡರಾಗುತ್ತಾರೆ.
ಇನ್ನು ಗುರುವಿನ ಪತ್ನಿ, ಅಧಿಕಾರಿಯ ಪತ್ನಿಯನ್ನು ಗೌರವಿಸಬೇಕು. ಗುರುವಿನ ಪತ್ನಿಯೂ, ಗುರುವಿಗೆ ಸಮವಾಗಿರುತ್ತಾಳೆ. ಹಾಗಾಗಿ ಆಕೆಯನ್ನು ನೀವು ಗೌರವಿಸಬೇಕು. ಇನ್ನು ಅಧಿಕಾರಿ ಅಥವಾ ರಾಜ ಪ್ರಜೆಗಳ ಹಿತವನ್ನು ಬಯಸುವವನು. ಅವನನ್ನು ಗೌರವಿಸಿದರೆ, ನಿಮ್ಮ ಜೀವನ ಉತ್ತಮವಾಗಿರುತ್ತದೆ. ಅವನ ಪತ್ನಿ ಕೂಡ ಗೌರವಕ್ಕೆ ಅರ್ಹಳಾಗಿರುತ್ತಾಳೆ. ಗುರುವಿನ ಪತ್ನಿ ಮತ್ತು ರಾಜನ ಪತ್ನಿಯನ್ನು ಗೌರವಿಸುವುದರಿಂದ ಲಕ್ಷ್ಮೀಯ ಕೃಪಾಕಟಾಕ್ಷ ದೊರೆಯುತ್ತದೆ ಎಂದು ಹೇಳಲಾಗಿದೆ.
ಅತ್ತೆಯನ್ನು ಗೌರವಿಸಬೇಕು. ಪತಿಯಾಗಲಿ, ಪತ್ನಿಯಾಗಲಿ ತಮ್ಮ ಅತ್ತೆಯನ್ನು ಗೌರವದಿಂದ ಕಾಣಬೇಕು. ಪತ್ನಿ ಪತಿಯ ಮನೆಗೆ ಬಂದ ಮೇಲೆ, ಆ ಮನೆಯ ಜವಾಬ್ದಾರಿ ಅವಳದ್ದಾಗಿರುತ್ತದೆ. ಅವಳು ತನ್ನ ಅಪ್ಪ ಅಮ್ಮನನ್ನು ಗೌರವಿಸುವಷ್ಟೇ, ಅತ್ತೆ ಮಾವನನ್ನು ಗೌರವದಿಂದ ಕಾಣಬೇಕು. ಅದೇ ರೀತಿ ಪತಿಯೂ ಕೂಡ ತನ್ನ ಅತ್ತೆ ಮಾವನನ್ನು ಗೌರವಿಸಬೇಕು. ಆಗ ಅವನು ಪತ್ನಿಯೊಡನೆ ಸಂತೋಷವಾಗಿರುತ್ತಾನೆ. ಮತ್ತು ಯಾವ ಹೆಣ್ಣು ಪತಿಯ ಮನೆಯಲ್ಲಿ ಸುಖದಿಂದ ಇರುತ್ತಾಳೋ, ಅಂಥ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸದಾ ಉತ್ತಮವಾಗಿರುತ್ತದೆ.
ಇನ್ನು ಸ್ನೇಹಿತನ ಪತ್ನಿಯನ್ನು ಕೂಡ ಗೌರವದಿಂದ ಕಾಣಬೇಕು ಅಂತಾರೆ ಚಾಣಕ್ಯರು. ಏಕೆಂದರೆ, ಆಕೆ ನಿಮ್ಮ ಸಹೋದರಿಯ ಸಮಾನಳಾಗಿರುತ್ತಾಳೆ. ಈ ಮಾತಿನ ಸಾರಾಂಶವೇನೆಂದರೆ, ಪತ್ನಿ ಬಿಟ್ಟು ಉಳಿದ ಹೆಣ್ಣು ಮಕ್ಕಳಿಗೂ ಸಹೋದರಿಯಂತೆ ನೀವು ಗೌರವಿಸಬೇಕು. ಆಗ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.

