Sunday, September 8, 2024

Latest Posts

ಚೀಸ್ ಕಾರ್ನ್ ಬಾಲ್ಸ್ ರೆಸಿಪಿ

- Advertisement -

Recipe: ಮೊದಲೆಲ್ಲ ಸಂಜೆ ತಿಂಡಿ ಎಂದರೆ, ಅವಲಕ್ಕಿ, ಉಪ್ಪಿಟ್ಟು, ಹೆಚ್ಚೆಂದರೆ ಬಜ್ಜಿ ಬೋಂಡವನ್ನು ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳ ಬೇಡಿಕೆಗೆ ತಕ್ಕಂತೆ, ಮಾಡರ್ನ್ ತಿಂಡಿಯನ್ನು ಮಾಡಲು ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ನಾವಿಂದು ಚೀಸ್ ಕಾರ್ನ್ ಬಾಲ್ಸ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ.

ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಒಂದು ಕಪ್ ತುರಿದ ಚೀಸ್‌, ಬೇಯಿಸಿ, ಮ್ಯಾಶ್ ಮಾಡಿದ 1 ಆಲೂಗಡ್ಡೆ, 1 ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಕತ್ತರಿಸಿದ ಅರ್ಧ ಕ್ಯಾಪ್ಸಿಕಂ, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ರೆಡ್ ಚಿಲ್ಲಿ ಫ್ಲೇಕ್ಸ್, ಚಿಟಿಕೆ ಆರೆಗ್ಯಾನೋ, ಚಿಟಿಕೆ ಪೆಪ್ಪರ್ ಪುಡಿ, ಚಿಟಿಕೆ ಬೆಳ್ಳುಳ್ಳಿ ಪೇಸ್ಟ್, 2 ಸ್ಪೂನ್ ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು ಹಾಕಿ. ಈಗಾಗಲೇ ನೀವು ಬಳಸಿರುವ ಚೀಸ್‌ನಲ್ಲಿ ಉಪ್ಪು ಇದೆಯಾ ಇಲ್ಲವಾ ನೋಡಿಕೊಂಡು, ಉಪ್ಪು ಬಳಸಿ.

ಈಗ ಇವನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಬಾಲ್‌ ಮಾಡಿಕೊಳ್ಳಿ. ಈಗ ಕೊಂಚ ಮೈದಾ ಮತ್ತು ಕೊಂಚ ನೀರು ಮಿಕ್ಸ್ ಮಾಡಿ, ಪೇಸ್ಟ್ ಮಾಡಿಕೊಳ್ಳಿ. ಈಗಾಗಲೇ ನೀವು ರೆಡಿ ಮಾಡಿ ಇಟ್ಟುಕೊಂಡ ಬಾಲನ್ನು, ಈ ಮೈದಾ ಪೇಸ್ಟ್‌ಗೆ ಅದ್ದಿ, ಬ್ರೆಡ್ ಕ್ರಂಬ್ಸ್‌ನಲ್ಲಿ ರೋಲ್ ಮಾಡಿ, ಎಣ್ಣೆಯಲ್ಲಿ ಕರೆದರೆ, ಚೀಸ್ ಕಾರ್ನ್ ಬಾಲ್ಸ್ ರೆಡಿ.

ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?

ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

- Advertisement -

Latest Posts

Don't Miss