Wednesday, December 4, 2024

Latest Posts

ರೆಸ್ಟೋರೆಂಟ್ ರೀತಿಯ ಚೀಸ್ ಸ್ಯಾಂಡ್‌ವಿಚ್ ಮನೆಯಲ್ಲೇ ತಯಾರಿಸಿ..

- Advertisement -

ಸ್ಯಾಂಡವಿಚ್‌ ಅಂದ್ರೆ ಎಲ್ಲರಿಗೂ ಅಚ್‌ಚು ಮೆಚ್ಚಾಗಿರುವ ತಿಂಡಿ. ಆದ್ರೆ ನೀವು ಪದೇ ಪದೇ ಹೊರಗಡೆ ಹೋಗಿ, ಪೇ ಮಾಡಿ ಸ್ಯಾಂಡ್‌ವಿಚ್ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ, ಚೀಸ್ ಬಳಸಿ ಮಾಡಿರುವ ಸ್ಯಾಂಡ್‌ವಿಚ್‌ಗೆ ಹೆಚ್ಚು ರೇಟ್ ಇರತ್ತೆ. ಹಾಗಾಗಿ ನಾವಿಂದು ಚೀಸ್ ಬಳಸಿ, ಮನೆಯಲ್ಲೇ ಸುಲಭ ವಿಧಾನದಲ್ಲಿ, ಮತ್ತು ಹೊಟೇಲ್‌ಗಿಂತಲೂ ರುಚಿಯಾಗಿ ಸ್ಯಾಂಡವಿಚ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ..

ಬೇಕಾಗುವ ಸಾಮಗ್ರಿ: ಒಂದು ಪ್ಯಾಕೇಟ್ ಬ್ರೆಡ್, ನಾಲ್ಕೈದು ಸ್ಲೀಸ್ ಚೀಸ್, ಟೊಮೆಟೋ ಸಾಸ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಕ್ಯಾರೆಟ್ ಮಿಶ್ರಣ, ಚಿಕ್ಕ ತುಂಡು ಹಸಿ ಶುಂಠಿ, ಹಸಿ ಮೆಣಸು, ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, ಬೆಣ್ಣೆ, ಬೇಯಿಸಿದ ಸ್ವೀಟ್ ಕಾರ್ನ್, ಖಾರಾ ಪುಡಿ, ಚಾಟ್‌ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪುದೀನಾ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಹಸಿ ಶುಂಠಿ, ಜೀರಿಗೆ, ಕೊಂಚ ಉಪ್ಪು ಸೇರಿಸಿ ಮಿಕ್ಸಿ ಮಾಡಿ, ಚಟ್ನಿ ತಯಾರಿಸಿಕೊಳ್ಳಿ.  ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಕ್ಯಾರೆಟ್ ಮಿಶ್ರಣವನ್ನು ಒಂದು ಚಿಕ್ಕ ಬೌಲ್‌ಗೆ ಹಾಕಿ, ಅದಕ್ಕೆ ಉಪ್ಪು, ಚಾಟ್‌ ಮಸಾಲೆ, ಖಾರದ ಪುಡಿ ಸೇರಿಸಿ, ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿದ ಸ್ವೀಟ್ ಕಾರ್ನ್ ಸೇರಿಸಿ.

ಈ ಬ್ರೆಡ್‌ನ ಒಂದು ಬದಿಗೆ ಪುದೀನಾ ಚಟ್ನಿ, ಸಲಾಡ್ ಮಿಶ್ರಣ, ಚೀಸ್ ಹಾಕಿ. ಇನ್ನೊಂದು ಬ್ರೆಡ್ ತೆಗೆದುಕೊಂಡು ಅದಕ್ಕೆ ಸಾಸ್ ಹಚ್ಚಿ, ಎರಡೂ ಬ್ರೆಡ್ ಜೋಡಿಸಿ, ತವಾ ಬಿಸಿ ಮಾಡಿ, ಬೆಣ್ಣೆ ಹಾಕಿ ಮಂದ ಉರಿಯಲ್ಲಿ ಕಾಯಿಸಿ. ಹೀಗೆ ಮಾಡಿದ್ರೆ, ಟೇಸ್ಟಿ ಗರಿ ಗರಿಯಾದ ಚೀಸ್ ಸ್ಯಾಂಡ್‌ವಿಚ್ ರೆಡಿ. ಸಾಸ್‌ ಜೊತೆ ಇದನ್ನು ಸವಿಯಿರಿ.

- Advertisement -

Latest Posts

Don't Miss