ಸಂಜೆ ಹೊತ್ತು ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸಿದ್ರೆ, ಬಜ್ಜಿ ಬೋಂಡಾ ಮಾಡೋದು ಕಾಮನ್. ಆದ್ರೆ ನೀವು ಕಡಲೆ ಹಿಟ್ಟನ್ನ ಬಳಸಿ, ಪೂರಿನೂ ಮಾಡಬಹುದು. ಹಾಗಾದ್ರೆ ಕಡಲೆ ಹಿಟ್ಟಿನೊಂದಿಗೆ ಏನೇನು ಸೇರಿಸಿ, ಪೂರಿ ಮಾಡ್ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಅರ್ಧ ಸ್ಪೂನ್ ಖಾರದ ಪುಡಿ, ಕೊಂಚ ಅರಶಿನ ಪುಡಿ, ಅರ್ಧ ಸ್ಪೂನ್ ವೋಮ, ಕಾಲು ಕಪ್ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ರವಾ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ, ಕಾಲು ಕಪ್ ಮೈದಾ.
ಮಾಡುವ ವಿಧಾನ: ಮೊದಲು ಕಡಲೆ ಹಿಟ್ಟು, ಖಾರದ ಪುಡಿ, ಅರಿಶಿನ ಪುಡಿ, ವೋಮ, ಕೊತ್ತೊಂಬರಿ ಸೊಪ್ಪು, ಉಪ್ಪು ಇವಿಷ್ಟನ್ನ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿನ ಹದಕ್ಕೆ ಈ ಹಿಟ್ಟನ್ನ ಮಿಕ್ಸ್ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎರಡು ಸ್ಪೂನ್ ಎಣ್ಣೆ ಹಾಕಿ, ಈ ಹಿಟ್ಟನ್ನ ಅದರಲ್ಲಿ ಹಾಕಿ, ಗಂಟು ಬರದಂತೆ ಕೈಯಾಡಿಸಿ. ಇದು ಹಲ್ವಾದ ಹದಕ್ಕೆ ಬಂದ ಬಳಿಕ, ಗ್ಯಾಸ್ ಆಫ್ ಮಾಡಿ. ಇದಕ್ಕೆ ರವಾ ಮತ್ತು ಮೈದಾ ಹಾಕಿ, ಪೂರಿ ಹಿಟ್ಟನ್ನ ಕಲಿಸಿ. ಇದಕ್ಕೆ ಎಣ್ಣೆ ಸವರಿ 15 ನಿಮಿಷ ಕಾಟನ್ ಬಟ್ಟೆಯಲ್ಲಿ ಮುಚ್ಚಿಡಿ. ನಂತರ ಪೂರಿಯಂತೆ ಇದನ್ನ ಲಟ್ಟಿಸಿ, ಬಿಸಿ ಮಾಡಿದ ಎಣ್ಣೆಯಲ್ಲಿ ಕರಿದರೆ, ಕಡಲೆ ಹಿಟ್ಟಿನ ಪೂರಿ ರೆಡಿ..