ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ ಬಗ್ಗೆ ಹೇಳಿದ್ದಾರೆ.
ಅವಾರ್ಡ್ ಫಂಕ್ಷನ್‌ಗೆ ಹೋದಾಗ, ಸಂಚಾರಿ ವಿಜಯ್ ಸರ್ ನನ್ನನ್ನು ತುಂಬಾ ಮುದ್ದು ಮಾಡ್ತಿದ್ರು. ಶೂಟಿಂಗ್ ಸಮಯದಲ್ಲಿ ನನಗೆ ಉಸಿರುಗಟ್ಟಿ, ನಾನು ಬಿದ್ದಿದೆ ಆಗ ವಿಜಯ್ ಸರ್ ನನ್ನೊಟ್ಟಿಗೆ ಇದ್ದು, ನನಗೆ ಆರೈಕೆ ಮಾಡ್ತಿದ್ರು. ಅವರು ನನ್ನನ್ನು ತುಂಬಾ ಪ್ರೀತಿ ಮಾಡ್ತಿದ್ರು, ಅವರು ತೀರಿಹೋದಾಗ ನನಗೆ ತುಂಬಾ ಬೇಜಾರಾಯ್ತು, ಅಷ್ಟು ಅಟ್ಯಾಚ್‌ಮೆಂಟ್ ಇತ್ತು ನನಗೆ ಎಂದು ಬೇಬಿ ಆರಾಧ್ಯಾ ಬೇಸರ ವ್ಯಕ್ತಪಡಿಸಿದರು.
ಇನ್ನು ಪುನೀತ್ ಸರ್ ಬಗ್ಗೆ ಮಾತನಾಡಿದ ಬೇಬಿ ಆರಾಧ್ಯಾ, ಜೇಮ್ಸ್ ಸಿನಿಮಾದಲ್ಲಿ ಅಪ್ಪು ಜೊತೆ ಇದ್ದದ್ದನ್ನ ನೆನೆಸಿಕೊಂಡರು. ಆ ಸಿನಿಮಾದಲ್ಲಿ ಪುನೀತ್ ಸರ್ ನನ್ನ ಮಾಮಾ ಕ್ಯಾರೆಕ್ಟರ್ ಮಾಡಿದ್ರು. ಶೂಟಿಂಗ್ ಬಂದಾಗೆಲ್ಲ ನನಗೆ ಸ್ನ್ಯಾಕ್ಸ್, ಕೇಕ್ಸ್ ತಂದುಕೊಡ್ತಿದ್ರು. ನನ್ನ ಜೊತೆ ಇನ್ನಿಬ್ಬರಿದ್ರು, ಪುನೀತ್ ಸರ್ ನಮ್ಮನ್ನೆಲ್ಲ ಕೂರಿಸಿಕೊಂಡು, ಆ್ಯಕ್ಟಿಂಗ್ ಅಂದ್ರೆ ಏನು ಅಂತಾ ಹೇಳಿಕೊಡ್ತಿದ್ರು.
ಈಗ ನಾವು ಫ್ರೆಂಡ್ ಬರ್ತ್ ಡೇ ಪಾರ್ಟಿ ಅಂದ್ರೆ ಎಕ್ಸೈಟ್ ಆಗ್ತೀವಿ. ಅಲ್ಲಿ ಯಾವುದೇ ನಟನೆ ಇರೋದಿಲ್ಲಾ. ಅದೇ ರೀತಿ ನಟನೆ ಅಂತಾ ಬಂದಾಗಾ, ಮುಂದೆ ಕ್ಯಾಮೆರಾ ಇದೆ, ನನ್ನನ್ನು ಯಾರೋ ನೋಡ್ತಿದ್ದಾರೆ. ನಾನು ಆ್ಯಕ್ಟಿಂಗ್ ಮಾಡ್ಬೇಕು ಅಂತಾ ಆ್ಯಕ್ಟಿಂಗ್ ಮಾಡ್ಬಾರ್ದು. ನಮ್ಮ ನಟನೆ ನ್ಯಾಚುರಲ್ ಆಗಿರ್ಬೇಕು. ಧೈರ್ಯವಾಗಿ ನಟನೆ ಮಾಡ್ಬೇಕು ಅಂತಾ ಪುನೀತ್ ಸರ್ ಹೇಳ್ತಿದ್ರು, ಅವರೇ ನನಗೆ ಇನ್ಸ್ಪಿರೇಶನ್ ಅಂತಾ ಬೇಬಿ ಆರಾಧ್ಯಾ ಪುನೀತ್ ಅವರನ್ನ ನೆನೆದಿದ್ದಾರೆ.