Sandalwood News: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಈ ಕೇಸ್ನಲ್ಲಿ ಭಾಗಿಯಾಗಿದಂತೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹ್ಮದ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಸಚಿವ ಜಮೀರ್ ಇಬ್ಬರೂ ಆಪ್ತರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ. ಜಮೀರ್ ಪುತ್ರನ ಸಿನಿಮಾ ಪ್ರಮೋಷನ್ಗೆ ಡಿಬಾಸ್ ಸಹಾಯ ಮಾಡಿದ್ದರು. ರೇಣುಕಾಸ್ವಾಮಿ ಕೇಸ್ನಲ್ಲಿ ಇನ್ವಾಲ್ ಆಗಬೇಡ. ದರ್ಶನ್ ವಿರುದ್ಧ ಸೀರಿಯಸ್ ಅಲಿಗೇಷನ್ ಇದೆ ಎಂದು ಸಿದ್ದರಾಮಯ್ಯ ಅವರು ಜಮೀರ್ಗೆ ತಿಳಿಸಿದ್ದಾರೆ.
ಒಂದು ವೇಳೆ ಈ ಕೇಸ್ನಲ್ಲಿ ನಿನ್ನ ಹೆಸರು ಬಂದರೆ, ಬಳ್ಳಾರಿ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವ ನಾಗೇಂದ್ರನಿಗೆ ಬಂದ ಗತಿ ನಿನಗೂ ಬರುತ್ತದೆ. ದರ್ಶನ್ ಹಾಗೂ ನಿನ್ನ ಸ್ನೇಹ ನನಗೂ ಗೊತ್ತಿದೆ. ಆದರೆ, ಈ ಕೇಸ್ನಿಂದ ದೂರ ಇರು ಎಂದು ಸಿಎಂ ಸಿದ್ದರಾಮಯ್ಯ ಅವರು ಖಡಕ್ ಆಗಿ ಜಮೀರ್ಗೆ ಹೇಳಿದ್ದಾರೆ.
ಸಿಎಂ ಸೂಚನೆಗೆ ಜಮೀರ್ ಅವರು ಮರು ಮಾತನಾಡದೇ ಆಯ್ತು ಸರ್ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆ ವಹಿಸು. ನಿನ್ನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಜಮೀರ್ಗೆ ಸಿಎಂ ಸಲಹೆ ನೀಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್