Friday, December 13, 2024

Latest Posts

ಗುರುವಾರ ವಿಶ್ವಾಸಮತ ಯಾಚನೆಗೆ ಮುಹೂರ್ತ ಫಿಕ್ಸ್- ಸರ್ಕಾರ ಉಳಿಯುತ್ತಾ, ಉರುಳುತ್ತಾ..?

- Advertisement -

ಬೆಂಗಳೂರು: ಅತೃಪ್ತರನ್ನು ಒಲಿಸಿಕೊಳ್ಳೋದಕ್ಕೆ ಕಷ್ಟಸಾಧ್ಯವಾಗುತ್ತಿರೋ ಹಿನ್ನೆಲೆಯಲ್ಲಿ ದೋಸ್ತಿಗಳೇನೋ ಬಿಜೆಪಿಯ ಒತ್ತಡಕ್ಕೆ ವಿಶ್ವಾಸಮತ ಯಾಚನೆ ಮಾಡೋದಾಗಿ ತಿಳಿಸಿದ್ರು. ಇನ್ನು ಗುರುವಾರದಂದು ವಿಶ್ವಾಸಮತ ಯಾಚನೆಗೆ ಮುಹೂರ್ತಿ ನಿಗದಿಯಾಗಿದ್ದು, ಇನ್ನು 3 ದಿನಗಳ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ವಿಧಾನಸಭಾ ಅಧಿವೇಶನದಲ್ಲಿ ನಾವು ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಇದೀಗ ಗುರುವಾರ ವಿಶ್ವಾಸಮತಯಾಚನೆಗೆ ರೆಡಿಯಾಗಿದ್ದಾರೆ. ಈ ಬಗ್ಗೆ ಪ್ರತಿಪಕ್ಷ ಬಿಜೆಪಿಯೊಂದಿಗೆ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿರುವ ಸಿಎಂ, 11 ಗಂಟೆಗೆ ವಿಶ್ವಾಸಮತ ಯಾಚಿಸಲಿದ್ದಾರೆ.

ಇನ್ನು ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರನ್ನು ದೋಸ್ತಿಗಳು ಭೇಟಿಯಾಗೋದರಲಿ, ಮಾತನಡುವುದಕ್ಕೂ ಸಾಧ್ಯವಾಗ್ತಿಲ್ಲ. ಈ ಮಧ್ಯೆ ವಿಶ್ವಾಸಭರಿತರಾಗಿ ನಾವು ವಿಶ್ವಾಸಮತ ಸಾಬೀತುಪಡಿಸ್ತೇವೆ ಅನ್ನೋ ದೋಸ್ತಿಗಳ ನಿರ್ಧಾರ ಸಹಜವಾಗಿಯೇ ಆಶ್ಚರ್ಯ ಮೂಡಿಸಿದೆ.

ಅತೃಪ್ತರಲ್ಲಿ ಶುರುವಾಗಿದೆ ಢವಢವ..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=c-9UCskxw2o
- Advertisement -

Latest Posts

Don't Miss