Sunday, October 13, 2024

Latest Posts

ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ಕ್ಲೈಮ್ಯಾಕ್ಸ್..!

- Advertisement -

ಬೆಂಗಳೂರು: ಕಳೆದೆರಡು ವಾರಗಳಿಂದ ಎದುರಾಗಿರುವ ರಾಜ್ಯ ರಾಜಕೀಯ ಬಿಕ್ಕಿಟ್ಟಿಗೆ ಇದೀಗ ತೆರೆ ಎಳೆಯಲು ರಾಜಕೀಯ ನಾಯಕರು ರೆಡಿಯಾಗಿದ್ದಾರೆ. ದೋಸ್ತಿ ಸರ್ಕಾರ ಉಳಿಯುತ್ತಾ, ಉರುಳುತ್ತಾ ಅನ್ನೋ ಪ್ರಶ್ನೆಗೆ ಗುರಾವರ ಉತ್ತರ ಸಿಗಲಿದ್ದು, ವಿಶ್ವಾಸ ಮತಯ ಸಾಬೀತುಪಡಿಸಲು ಮೈತ್ರಿ ನಾಯಕರು ಸಫಲರಾಗ್ತಾರಾ, ಅಥವಾ ಸಾಬೀತುಪಡಿಸದೆ ಬಿಜೆಪಿಗೆ ಅಧಿಕಾರದ ಗದ್ದುಗೆ ಬಿಟ್ಟುಕೊಡ್ತಾರಾ ಅನ್ನೋ ವಿಚಾರ ಕುತೂಹಲ ಮೂಡಿಸಿದೆ.

ವಿಶ್ವಾಸಮತ ಯಾಚನೆ ಮಾಡಲೇಬೇಕು, ಇಲ್ಲದಿದ್ದರೆ ಕಲಾಪ ನಡೆಯಲು ನಾವು ಬಿಡುವುದಿಲ್ಲ ಅಂತ ಪಟ್ಟು ಹಿಡಿದಿದ್ದ ಬಿಜೆಪಿ ಕೊನೆಗೂ ಕಲಾಪ ಮುಂಡೂಡಿಸುವಲ್ಲಿ ಸಫಲವಾಗಿದೆ. ಸಂಪುಟ ಸಚಿವರು ಈಗಾಗಲೇ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಹೀಗಾಗಿ ನಾವು ಕಲಾಪ ನಡೆಯಲು ಬಿಡೋದಿಲ್ಲ, ಅಲ್ಲದೆ ವಿಪಕ್ಷದಲ್ಲಿರೋ ನಾವು ಕಲಾಪದಲ್ಲಿ ಭಾಗಿಯಾಗೋದಿಲ್ಲ ಅಂತ ಕಲಾಪ ಸಲಹಾ ಸಮಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ವಿಪಕ್ಷದ ಗೈರುಹಾಜರಿಯಲ್ಲಿ ಕಲಾಪ ನಡೆಸುವುದು ಸರಿಯಲ್ಲವೆಂದು ಗುರುವಾರದಂದು ವಿಶ್ವಾಸ ಮತಯಾಚನೆ ಮಂಡನೆ ವರೆಗೂ ಕಲಾಪನ್ನು ಮುಂದೂಡಿದ್ದಾರೆ.

ಇನ್ನು ಕಲಾಪ ಸಲಹಾ ಸಮಿತಿಯಲ್ಲಿ ಯಡಿಯೂರಪ್ಪ, ಬುಧವಾರವೇ ವಿಶ್ವಾಸಮತ ಯಾಚನೆ ಮಾಡಬೇಕು ಅಂತ ಪಟ್ಟು ಹಿಡಿದ್ರೆ, ದೋಸ್ತಿಗಳು ಶುಕ್ರವಾರದಂದು ವಿಶ್ವಾಸಮತ ಯಾಚನೆಗೆ ಸ್ಪೀಕರ್ ಗೆ ಮನವಿ ಮಾಡಿದ್ರು. ಆದರೆ ಸ್ಪೀಕರ್ ರಮೇಶ್ ಕುಮಾರ್ ಉಭಯ ನಾಯಕೊರಂದಿಗೆ ಚರ್ಚಿಸಿ ಕೊನೆಗೆ ಗುರುವಾರದಂದು ವಿಶ್ವಾಸಮತಯಾಚನೆಗೆ ದಿನಾಂಕ ನಿಗದಿಪಡಿಸಿದ್ರು. ಇನ್ನು ಕಲಾಪ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಶಾಸಕರನ್ನು ಮರಳಿ ರಮಡ ರೆಸಾರ್ಟ್ ನತ್ತ ಕರೆದೊಯ್ಯಲಿದ್ದು, ಸರ್ಕಾರ ಉಳಿಸಿಕೊಳ್ಳೋದಕ್ಕೆ ದೋಸ್ತಿಗಳ ಸರ್ಕಸ್ ಮುಂದುವರಿದಿದೆ.

ಅತಂತ್ರರಾಗ್ತಾರಾ ಈ ಮೂವರು ಶಾಸಕರು??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=9WRJwFD2tbA
- Advertisement -

Latest Posts

Don't Miss