Saturday, October 5, 2024

Latest Posts

ಮೋದಿ ಪ್ರಮಾಣವಚನಕ್ಕೆ ಕುಮಾರಣ್ಣ- ಜೆಡಿಎಸ್ ಮರ್ಮವೇನು..?

- Advertisement -

ನೋಡ್ರಿ ಮೋದಿ ಮತ್ತೆ ಪ್ರಧಾನಿಯಾದ್ರೆ ನಾನು ರಾಜಕೀಯ ನಿವೃತ್ತಿ ಪಡೀತೀನಿ ಅಂತ ಫಲಿತಾಂಶಕ್ಕೂ ಮೊದಲು ಹೆಚ್.ಡಿ ರೇವಣ್ಣ ಅಬ್ಬರಿಸಿದ್ರು. ಆದ್ರೆ, ಫಲಿತಾಂಶ ಬಂದ್ಮೇಲೆ ರೇವಣ್ಣ ಮಾಧ್ಯಮದವರ ಹತ್ತಿರನೂ ಸುಳೀತಿಲ್ಲ. ಯಾವಾಗ ಸ್ವಾಮಿ ರಾಜಕೀಯ ನಿವೃತ್ತಿ ತಗೋತೀರಾ ಅಂತ ಕೇಳೋದಕ್ಕೂ ಸಿಗ್ತಿಲ್ಲ. ಇತ್ತ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ದೋಸ್ತಿ ಪಕ್ಷ 22 ಸೀಟ್ ಗೆಲ್ಲುತ್ತೆ. ಬಿಜೆಪಿಯನ್ನ ಒಂದಂಕಿಗೆ ಇಳಿಸ್ತೀನಿ ಅಂತ ಹೇಳ್ತಿದ್ದ ಕುಮಾರಸ್ವಾಮಿ ಸದ್ದಿಲ್ಲದೇ ಮೋದಿ ಪ್ರಮಾಣ ವಚನದಲ್ಲಿ ಹಾಜರಾಗುತ್ತಿದ್ದಾರೆ. ಅಷ್ಟಕ್ಕೂ ಜೆಡಿಎಸ್ ಈ ಜಾಣ ನಡೆಯ ಹಿಂದೆ ಭಾರೀ ಲೆಕ್ಕಾಚಾರವಿದೆ ಅಂತ ಹೇಳಲ್ತಾದೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮೊದಲು ಮಂಡ್ಯದಲ್ಲಿ ನಿಖಿಲ್ ಎರಡೂವರೆ ಲಕ್ಷ ಲೀಡ್ ನಲ್ಲಿ ಗೆಲ್ತಾರೆ. ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಸಚಿವ ಪುಟ್ಟರಾಜು ಹೇಳಿದ್ರು. ನಂತರ ತುಮಕೂರಲ್ಲಿ ಸಚಿವ ಗುಬ್ಬಿ ಶ್ರೀನಿವಾಸ್ ದೇವೇಗೌಡರು ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಅನ್ನೋ ರೀತಿ ಅವರ ಅಭಿಮಾನಿಗಳು ಪೋಸ್ಟ್ ಹಾಕಿದ್ರು. ಇನ್ನೊಂದು ಹಂತಕ್ಕೆ ಮುಂದೆ ಹೋದ ಸಚಿವ ರೇವಣ್ಣ ನೋಡ್ರಿ ಮೋದಿ ಮತ್ತೆ ಪ್ರಧಾನಿಯಾಗಲ್ಲ. ಒಂದು ವೇಳೆ ಆದ್ರೆ, ರಾಜಕೀಯ ನಿವೃತ್ತಿ ಪಡೀತಿನಿ ಅಂತ ಹೇಳಿದ್ರು. ಆದ್ರೆ ಇಂದು ಮೋದಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ ಸಚಿವ ರೇವಣ್ಣ ಮಾಧ್ಯಮಗಳಿಂದ ಕಿಲೋಮೀಟರ್ ಅಂತರ ಕಾಯ್ದುಕೊಳ್ತಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಮೋದಿ ಬಗ್ಗೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದ ಸಿದ್ದರಾಮಯ್ಯ-ಕುಮಾರಸ್ವಾಮಿ ಫಲಿತಾಂಶ ಬಂದ್ಮೇಲೆ ನಮ್ಮ ಸರ್ಕಾರ ಉಳಿಸ್ಕಂಡ್ರೆ ಸಾಕು ಅನ್ನೋ ರೀತಿ ಆಗಿದ್ದಾರೆ. ಮಂಡ್ಯದಲ್ಲಿ ಮಗ, ತುಮಕೂರಲ್ಲಿ ಅಪ್ಪ ಸೋತ ನಂತರ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡ್ತಾರೆನೋ ಅಂತ ಎಲ್ರೂ ಭಾವಿಸಿದ್ರು. ಯಾಕಂದ್ರೆ ಯಾವಾಗಲೂ ಅವರೇ ಹೇಳುವಂತೆ ಭಾವನಾತ್ಮಕ ಜೀವಿ ಅವ್ರು. ಆದ್ರೆ, ಫಲಿತಾಂಶದ ನಂತರ ಕ್ಯಾಬಿನೆಟ್ ಮೀಟಿಂಗ್ ಮಾಡಿ ಪ್ರೆಸ್ಮೀಟ್ ಗೆ ಬಂದು ತಾವು ಮಾತನಾಡದೆ, ಡಿಸಿಎಂ ಪರಮೇಶ್ವರ್ ಬಾಯಲ್ಲಿ ಚುನಾವಣೆ ನಡೆದಿರೋದು ಲೋಕಸಭೆಗೆ, ಇದು ಕೇಂದ್ರದಲ್ಲಿ ಯಾರು ಸರ್ಕಾರ ರಚಿಸಬೇಕು ಅಂತ. ಹೀಗಾಗಿ ರಾಜ್ಯ ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳಿಸುವ ಮೂಲಕ ಕುಮಾರಸ್ವಾಮಿ ನಾನು ರಾಜೀನಾಮೆ ನೀಡೋದಿಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ.

ಮೋದಿ ಜೊತೆ ಮತ್ತೆ ಕಣ್ಣಾಮುಚ್ಚಾಲೆ ಶುರು..!

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿ.ಪಿ ಯೋಗೀಶ್ವರ್ ಒಂದು ಮಾತನ್ನ ಹೇಳಿದ್ರು. ನಮ್ಮ ಹೈಕಮಾಂಡ್ ಓಕೆ ಅಂದ್ರೆ ರಾಜ್ಯ ಸಮ್ಮಿಶ್ರ ಸರ್ಕಾರ ಯಾವಾಗಲೋ ಬೀಳ್ತಿತ್ತು. ಆದ್ರೆ, ನಮ್ಮ ಹೈಕಮಾಂಡ್ ಗೆ ಜೆಡಿಎಸ್ ಮೇಲೆ ಪ್ರೀತಿ. ಲೋಕಸಭಾ ಫಲಿತಾಂಶದ ನಂತರ ಜೆಡಿಎಸ್ –ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದರೂ ಆಶ್ಚರ್ಯ ಪಡಬೇಕಿಲ್ಲ ಅನ್ನೋ ಮೂಲಕ ಜೆಡಿಎಸ್ ಅವಕಾಶವಾದಿತನ, ಅಧಿಕಾರದ ದಾಹವನ್ನ ಬಿಚ್ಚಿಟ್ಟಿದ್ದರು.

ಇನ್ನು ಜೆಡಿಎಸ್ ಕೂಡ ಯಾವ ರೀತಿ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತೆ ಅಂತ ರಾಜ್ಯದ ಜನರಿಗೆ ಗೊತ್ತಿರೋ ವಿಷಯವೇ. ಕಾಂಗ್ರೆಸ್ ವಿರುದ್ಧ ಜನ ವಿಧಾನಸಭೆಯಲ್ಲಿ ಅವರನ್ನ ತಿರಸ್ಕರಿಸಿ ಮತ ಚಲಾಯಿಸಿದ್ರು. ಕಾಂಗ್ರೆಸ್ ವಿರುದ್ಧವೇ ಜೆಡಿಎಸ್ ನ ಬಹುತೇಕ ಶಾಸಕರು ಗೆದ್ದು ಬಂದರೂ ಜೆಡಿಎಸ್ ನಾಯಕರು ಮಾತ್ರ ಜನರ ತೀರ್ಮಾನದ ವಿರುದ್ಧ ಕಾಂಗ್ರೆಸ್ ಜೊತೆಯೆ ಕೈಜೋಡಿಸಿ ತಮಗೆ ಬೇಕಾದಂತೆ ಜನರ ತೀರ್ಮಾನ ತಿದ್ದುಕೊಂಡಿದ್ರು. ಇದೀಗ ಮೋದಿ ಜೊತೆ ಮತ್ತೆ ಸಂಬಂಧ ಕುದುರಿಸಲು ಮುಂದಾಗಿರುವ ಲಕ್ಷಣ ಗೋಚರಿಸುತ್ತಿದೆ.

ಜೆಡಿಎಸ್ ಮೇಲೆ ಬಿಜೆಪಿಗಿಲ್ಲ ನಂಬಿಕೆ..!
ಎರಡ್ಮೂರು ಬಾರಿ ಮೋಸ ಹೋಗಿರುವ ಬಿಜೆಪಿ ಯಾವುದೇ ಕಾರಣಕ್ಕೂ ಜೆಡಿಎಸ್ ನಂಬೋದು ಬೇಡ ಅಂತ ನಿರ್ಧರಿಸಿದೆಯಂತೆ. ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಜೆಡಿಎಸ್ ಡಬಲ್ ಗೇಮ್ ಗಳು ಅರ್ಥ ಆಗಿದೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ನವರನ್ನ ಹತ್ತಿರವೂ ಸೇರಿಸಲ್ಲ ಅಂತ ರಾಜ್ಯದ ಬಹುತೇಕ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಅದೇನೇ ಆಗಲಿ, ರಾಜ್ಯದ ಹಿತ ದೃಷ್ಠಿಯಿಂದ ಕೇಂದ್ರ ಸರ್ಕಾರದ ಜೊತಯೆ ಉತ್ತಮ ಬಾಂಧವ್ಯ ಇರೋದು ಒಳ್ಳೆಯದೇ ಆದರೆ ಆ ಬಾಂಧವ್ಯ ರಾಜಕೀಯ ಮೇಲಾಟಗಳಿಗೆ ಬಳಕೆಯಾಗದಿದ್ದರೆ ಸಾಕು. ಯಾಕಂದ್ರೆ ಕರ್ನಾಟಕದ ಜನ ಈಗಾಗಲೇ ಈ ಎಲ್ಲಾ ಡ್ರಾಮಗಳನ್ನ ನೋಡಿ ಸಾಕು ಸಾಕಾಗಿ ಹೋಗಿದ್ದಾರೆ. ಮತ್ತೆ ಏನಾದರೂ ಉಲ್ಟಾ ಪಲ್ಟಾ ರಾಜಕಾರಣ ಶುರುವಾದ್ರೆ ದೆಹಲಿಯ ರೀತಿ ಮತ್ತೊಂದು ಹೊಸ ರಂಗದ ಕಡೆ ಜನ ವಾಲೋದು ಗ್ಯಾರಂಟಿ.

ಅಂಬಿಗೆ ವಿಶ್ ಮಾಡಿದ್ರೂ ಕೂಡ ಟ್ರಾಲ್ ಆಗ್ತಿದ್ದಾರೆ ನಿಖಿಲ್…! ಈ ವಿಡಿಯೋ ತಪ್ಪದೇ ನೋಡಿ

- Advertisement -

Latest Posts

Don't Miss