Monday, December 23, 2024

Latest Posts

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಾಮಿಡಿ ಕಿಂಗ್ ಕೋಮಲ್..!

- Advertisement -

ಸ್ಯಾಂಡಲ್ ವುಡ್ ಹಾಸ್ಯ ನಟ ಕೋಮಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಕಾಮಿಡಿ ಪಾತ್ರಗಳ ಮೂಲಕವೇ ಜನಮನ ಗೆದ್ದ ನಟ ಕೋಮಲ್, ಹಾಸ್ಯ ಭರಿತ ಪಾತ್ರಗಳು ಮಾತ್ರವಲ್ಲ ಸಿನಿಮಾ ನಾಯಕನಾಗಿಯೂ ಕೂಡ ಸಾಕಷ್ಟು ಮನ್ನಣೆ ಪಡೆದಿದ್ದಾರೆ.

ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರನ್ನ ರಂಜಿಸಿದ ನಟ. ಕೋಮಲ್ ಅಂದ್ರೆ ಹಾಸ್ಯ, ಹಾಸ್ಯ ಅಂದ್ರೆ ಕೋಮಲ್ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆದವರು ನಟ ಕೋಮಲ್. ಕೋಮಲ್ ತಮ್ಮ ಸಿನಿಮಾ ಜರ್ನಿ ಆರಂಭದಲ್ಲಿ ಹಲವು ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆನಂತರ ಕೋಮಲ್ ಹೀರೋ ಹಾಗಿ ಮಿಂಚಿದರು.

ಹಲವು ಬಗೆಯ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ಕೋಮಲ್ 2008ರ ‘ಮಿಸ್ಟರ್ ಗರಗಸ’ ಸಿನಿಮಾ ಮೂಲಕ ಹೀರೋ ಆದರು. ನಂತರ ‘ಗೋವಿಂದಾಯ ನಮಃ’, ‘ಪುಂಗಿದಾಸ’, ‘ಡೀಲ್ ರಾಜ’ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದಾರೆ.

ನಟ ಕೋಮಲ್ ಹೀರೊ ಆದರೂ ಕೂಡ ತಮ್ಮ ಕಾಮೆಡಿಯನ್ನ ಬಿಟ್ಟು ಕೊಟ್ಟಿರಲಿಲ್ಲ. ಆದರೆ ‘ಕೆಂಪೇಗೌಡ 2’ ಸಿನಿಮಾಗಾಗಿ ಬೇರೆ ರೀತಿಯ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಮಿಂಚಿದ್ದರು. ಇದೇ ಸಿನಿಮಾಗಾಗಿ ದೈಹಿಕವಾಗಿ ತಮ್ಮ ಲುಕ್ ಅನ್ನು ಬದಲಾಯಿಸಿಕೊಂಡಿದ್ದರು. ಆದರೆ ಈ ಸಿನಿಮಾ ಅವರಿಗೆ ಅಂದುಕೊಂಡ ಮಟ್ಟಿಗೆ ಯಶಸ್ಸು ತಂದುಕೊಡಲಿಲ್ಲ.

ಕಳೆದ ಕೆಲ ಸಮಯದಿಂದ ನಟ ಕೋಮಲ್ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಮತ್ತೆ ಯಾವಾಗ ತೆರೆಯ ಮೇಲೆ ಕಾಮಿಡಿಯ ರಸದೌತಳ ಬಡಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದು, ಆದಷ್ಟು ಬೇಗ ಅವರ ಮುಂದಿನ ಸಿನಿಮಾ ಸೆಟ್ಟೇರಲಿ.

- Advertisement -

Latest Posts

Don't Miss