ಯುವತಿ ಮೇಲೆ ಯುವಕರಿಂದ ಅತ್ಯಾಚಾರ: ಗೋಕುಲ್ ಠಾಣೆಯಲ್ಲಿ ದೂರು ದಾಖಲು…!

www.karnatakatv.net: ಹುಬ್ಬಳ್ಳಿ: ಅಪ್ರಾಪ್ತಿಯೊಂದಿಗೆ ಪರಿಚಯಸ್ಥ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿರುವ ಘಟನೆ  ಅಕ್ಷಯ ಕಾಲೋನಿಯ ಚೇತನ ಕಾಲೇಜು  ಬಳಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೆ.20 ರಂದು  ಹೆಗ್ಗೇರಿಯ ಕೇಶವ ಸಿರಿವಾರ ಹಾಗೂ ಸಾಗರ ಇಂಗಳಹಳ್ಳಿ ಎಂಬ ಯುವಕರು ಪರಿಚಯಸ್ಥ ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಗೋಕುಲ್ ರೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌ಈ ಸಂಬಂಧ ಇಬ್ಬರು ಯುವಕರ ವಿರುದ್ದ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author