ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 1

Spiritual: ಲೋಕ ಕಲ್ಯಾಣಕ್ಕಾಗಿ ಶ್ರೀವಿಷ್ಣು 24 ಅವತಾರಗಳನ್ನು ತಾಳಿದ್ದು, ಒಂದೊಂದು ಅವತಾರದಲ್ಲೂ ರಕ್ಕಸರ ವಧೆ ಮಾಡಿ, ಶ್ರೀವಿಷ್ಣು ಲೋಕ ಕಲ್ಯಾಣ ಮಾಡಿದ್ದಾನೆ. ಇಂದು ನಾವು ಶ್ರೀವಿಷ್ಣುವಿನ 24 ಅವತಾರಗಳಲ್ಲಿ, 4 ಅವತಾರಗಳ ಬಗ್ಗೆ ವಿವರಣೆ ನೀಡಲಿದ್ದೇವೆ.

ಮೊದಲನೇಯ ಅವತಾರ ಆದಿ ಪುರುಷ. ಆದಿ ಎಂದರೆ, ಈ ಲೋಕ ಸೃಷ್ಟಿಯಾದಾಗ ಆ ಲೋಕವನ್ನು ತನ್ನ ತಲೆಯ ಮೇಲೆ ಇರಿಸಿಕೊಂಡ ಆದಿಶೇಷನ ದೇವ, ನಾರಾಯಣ. ನಾರಾಯಣ ಈ ಬ್ರಹ್ಮಾಂಡ ರಚನೆಯಾಗಲು ಮೂಲ ಕಾರಣೀಕರ್ತನೆಂದು ಹೇಳಾಗುತ್ತದೆ. ಹಾಗಾಗಿ ಇವನನ್ನು ಆದಿಪುರುಷ ಅಂತ ಕರೆಯುತ್ತಾರೆ.

ಎರಡನೇಯ ಅವತಾರ ಸನಕಾದಿ ಮುನಿ. ಬ್ರಹ್ಮನ ತಪಸ್ಸಿಗೆ ಮೆಚ್ಚಿ ಶ್ರೀವಿಷ್ಣು ಈ ಅವತಾರವನ್ನು ತಾಳಿದ ಎನ್ನಲಾಗಿದೆ. ಸನಕಾದಿ ಮುನಿ ಎಂದರೆ, ನಾಲ್ಕು ಮಕ್ಕಳ ಅವತಾರ. ಸನಕ, ಸನಂದನ, ಸನಾತನ, ಸನತ್ಕುಮಾರ. ಈ ನಾಲ್ವರನ್ನು ಸನಕಾದಿ ಮುನಿ ಎನ್ನುತ್ತಾರೆ.

ಮೂರನೇಯ ಅವತಾರ ವರಾಹ ಅವತಾರ. ರಾಕ್ಷಸ ಹಿರಣ್ಯಾಕ್ಷ ಭೂಮಿಯನ್ನು ತೆಗೆದುಕೊಂಡು ಹೋಗಿ, ಸಮುದ್ರದಲ್ಲಿ ಮುಚ್ಚಿಟ್ಟಾಗ, ಭೂತಾಯಿಯನ್ನು ರಕ್ಷಿಸಲು ಬರುವವನೇ ವರಾಹ. ಇದು ಶ್ರೀವಿಷ್ಣು ತಾಳಿದ ಹಂದಿಯ ಅವತಾರ. ಹಂದಿಯ ಮುಖ ಮತ್ತು ಮಾನವನ ದೇಹದ ರಚನೆಯೇ ವರಾಹ ಸ್ವಾಮಿ. ವರಾಹ ಸ್ವಾಮಿ, ಸಮುದ್ರಕ್ಕೆ ಹೋಗಿ, ಹಿರಣ್ಯಾಕ್ಷನಿಂದ ಭೂದೇವಿಯನ್ನು ರಕ್ಷಣೆ ಮಾಡಿದ. ಈತನನ್ನು, ಭೂವರಾಹಸ್ವಾಮಿ ಎಂದು ಕರೆಯಲಾಗಿದೆ.

ನಾಲ್ಕನೇಯ ಅವತಾರ ನಾರದ ಅವತಾರ. ಮಾನಸ ಪುತ್ರ ಎನ್ನಿಸಿಕೊಂಡ ನಾರದರು, ವಿಷ್ಣುವಿನ ಅಂಶವಾಗಿದ್ದಾರೆ. ಕಠಿಣ ತಪಸ್ಸು ಮಾಡಿ, ದೇವರ್ಷಿ ಎಂಬ ಬಿರುದು ಪಡೆದ ನಾರದರು ದೇವ-ದೇವತೆಗಳ ಸಂದೇಶವಾಹಕರು ಎನ್ನಿಸಿಕೊಂಡವರು.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

About The Author