ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 2

Spiritual: ಮೊದಲ ಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀವಿಷ್ಣುವಿನ 4 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಇನ್ನೂ 4 ಅವತಾರಗಳ ಬಗ್ಗೆ ತಿಳಿಯೋಣ..

ಐದನೇಯ ಅವತಾರ ನರ ಮತ್ತು ನಾರಾಯಣ ಅವತಾರ. ಸೃಷ್ಟಿಯ ಆರಂಭದಲ್ಲಿ ಧರ್ಮಸ್ಥಾಪನೆ ಮಾಡಲು, ಶ್ರೀವಿಷ್ಣು ನರ ನಾರಾಯಣನ ರೂಪ ತಾಳಿದರು ಎಂದು ಹೇಳಲಾಗುತ್ತದೆ. ಇವರು ಅವಳ ಋಷಿಮುನಿಗಳಾಗಿದ್ದು, ತಮ್ಮ ಧ್ಯಾನದ ಮೂಲಕವೇ, ಪಾಶುಪಥಾಸ್ತ್ರವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದರು.

ಆರನೇಯ ಅವತಾರ ಕಪಿಲ ಋಷಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನೇ ಕಪಿಲ ಋಷಿ. ಪ್ರಮುಖ 12 ಆಚಾರ್ಯರಲ್ಲಿ ಕಪಿಲ ಮುನಿಗಳೂ ಒಬ್ಬರಾಗಿದ್ದಾರೆ. ಇವರ ಕೋಪ ಯಾವ ಮಟ್ಟಿಗೆ ಇತ್ತೆಂದರೆ, ಮಹಾಭಾರತ ಯುದ್ಧದ ವೇಳೆ ಸಾಗರ ರಾಜನ 8 ಸಾವಿರ ಗಂಡು ಮಕ್ಕಳು ಭಸ್ಮವಾಗಿದ್ದರು.

ಏಳನೇಯ ಅವತಾರ ದತ್ತಾತ್ರೇಯ ಅವತಾರ. ಮೂರು ಪುಟ್ಟ ಮಕ್ಕಳ ಅವತಾರವಾಗಿರುವ ದತ್ತಾತ್ರೇಯ ಅವತಾರವೂ ಶ್ರೀವಿಷ್ಣುವಿನ ಅವತಾರವೆಂದು ಹೇಳಲಾಗಿದೆ. ಈ ಬಗ್ಗೆ ಪುಟ್ಟ ಕಥೆ ಇದೆ. ಒಮ್ಮೆ ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಗೆ ತಮ್ಮ ಪಾತಿವೃತ್ಯದ ಬಗ್ಗೆ ಗರ್ವ ಉಂಟಾಗುತ್ತದೆ. ಆಗ ನಾರದರು, ಅತ್ರಿ ಮುನಿಯ ಪತ್ನಿ ಅನುಸೂಯಾಳ ಬಗ್ಗೆ ಹೇಳಿ, ಆಕೆಯ ಪಾತಿವೃತ್ಯ ಎಲ್ಲರ ಪಾತಿವೃತ್ಯಕ್ಕಿಂತ ಪವಿತ್ರವಾಗಿದೆ ಎನ್ನುತ್ತಾರೆ.

ಆಗ ಅನುಸೂಯಾಳ ಪತಿಯ ಮೇಲಿನ ವೃತವನ್ನು ತಾವೂ ನೋಡಬೇಕು ಎಂದು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ, ಶಿವ, ವಿಷ್ಣು ಮತ್ತು ಬ್ರಹ್ಮನ ಬಳಿ ಹೀಗೆಂದರು. ನೀವು ಮೂವರು ಅನುಸೂಯಾಳ ಬಳಿ ಹೋಗಿ, ಆಕೆಯ ಕೈಯಿಂದ ಊಟ ಮಾಡಬೇಕು. ಅದು ಕೂಡ ಬೆತ್ತಲೆಯಾಗಿ ಎನ್ನುತ್ತಾರೆ. ಇದಕ್ಕೆ ಒಪ್ಪಿದ ಶಿವ, ಬ್ರಹ್ಮ ಮತ್ತು ವಿಷ್ಣು ಅನುಸೂಯಾಳ ಬಳಿ ಹೋಗಿ, ಇದೇ ಕೋರಿಕೆ ಇಡುತ್ತಾರೆ. ಆಗ ಇದಕ್ಕೆ ಒಪ್ಪಿನ ಅನುಸೂಯೆ, ಆ ತ್ರಿಮೂರ್ತಿಗಳನ್ನು ಪುಟ್ಟ ಮಕ್ಕಳಾಗಿ ಪರಿವರ್ತಿಸಿ, ಆಕೆಯ ಸ್ತನ ಪಾನ ಮಾಡಿಸುತ್ತಾಳೆ. ಇದನ್ನು ಕಂಡ ಲಕ್ಷ್ಮೀ, ಸರಸ್ವತಿ, ಪಾರ್ವತಿಗೆ ಅವರ ತಪ್ಪು ಅರಿವಾಗುತ್ತದೆ. ಆಗ ಅವರು ನಮ್ಮ ಪತಿಯರನ್ನು ಮರಳಿ ಕೊಡಿ ಎಂದು ಬೇಡುತ್ತಾರೆ. ಸ್ತನಪಾನದ ಬಳಿಕ ತ್ರಿಮೂರ್ತಿಗಳು ಒದಲಿನ ರೂಪಕ್ಕೆ ಬರುತ್ತಾರೆ.

ಎಂಟನೇಯ ಅವತಾರ ಯಜ್ಞ ಅವತಾರ. ಕೆಲವು ಕಡೆ ಇಂದ್ರನನ್ನು ಯಜ್ಞ ಎಂದು ಉಲ್ಲೇಖಿಸಲಾಗಿದೆ. ಇನ್ನು ಕೆಲವು ಕಡೆ ಸ್ವಯಂ ಭೂ ಮತ್ತು ಶತ್ರುಭಾರ ಮಗಳಾದ ಆಕುತಿ, ಪ್ರಜಾಪತಿಯನ್ನು ವಿವಾಹವಾಗಿ, ಪಡೆದ ಮಗನೇ ಯಜ್ಞ ಎನ್ನಲಾಗಿದೆ. ಅವನು ದಕ್ಷಿಣಾಳನ್ನು ವಿವಾಹವಾಗಿ 12 ತೇಜಸ್ವಿ ಪುತ್ರರನ್ನು ಪಡೆಯುತ್ತಾನೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

About The Author