Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೊದಲ ಎರಡು ಭಾಗದಲ್ಲಿ, ಶ್ರೀವಿಷ್ಣುವಿನ 8 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಶ್ರೀವಿಷ್ಣುವಿನ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ.
ಒಂಭತ್ತನೇಯ ಅವತಾರ ರಿಷಭ ಅವತಾರ. ಜೈನ ಧರ್ಮದ ಸಂಸ್ಥಾಪಕರೇ ರಿಷಭ. ಮಹಾರಾಜ ನಾಭಿ ತನ್ನ ಪತ್ನಿಯ ಜೊತೆ ಸೇರಿ ಯಜ್ಞ ಮಾಡಿ ಪಡೆದ ಪುತ್ರನೇ ರಿಷಭ. ಇವರು ವಿಷ್ಣುವಿನ ಒಂಭತ್ತನೇಯ ಅವತಾರ.
ಹತ್ತನೇಯ ಅವತಾರ ಪ್ರಥುವಿನ ಅವತಾರ. ಭೂಮಿಯ ಮೇಲೆ ಅವತರಿಸಿದ ಮೊದಲ ಪವಿತ್ರ ರಾಜನೇ ಪ್ರಥು. ಹಾಗಾಗಿ ಇವನನ್ನು ಆದಿರಾಜ ಎಂದು ಕರೆಯುತ್ತಾರೆ. ಇವನು ಜನಿಸಿದಾಗಲೇ, ಇವನ ಕೈಯಲ್ಲಿ ಕಮಲ ಮತ್ತು ಶ್ರೀಚಕ್ರದ ಚಿಹ್ನೆ ಇತ್ತು. ಈತ ರಾಜನಾಗಿದ್ದಾಗ. ಉತ್ತಮ ಮಳೆ ಬೆಳೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ಇತ್ತು ಎಂದು ಹೇಳುತ್ತಾರೆ.
ಹನ್ನೊಂದನೇಯ ಅವತಾರ ಮತ್ಸ್ಯಾವತಾರ. ಈ ಲೋಕವನ್ನು ಪ್ರಳಯದಿಂದ ಕಾಪಾಡಲು ಶ್ರೀವಿಷ್ಣು ಮತ್ಯಾವತಾರದ ರೂಪ ತಾಳಿದನೆಂಬ ನಂಬಿಕೆ ಇದೆ. ಅರ್ಧ ಮೀನಿನ ದೇಹ ಮತ್ತು ಅರ್ಧ ಮನುಷ್ಯನ ದೇಹವೇ ಮತ್ಸ್ಯಾವತಾರ. ರಾಜ ಸತ್ಯವೃತ ಸಮುದ್ರಕ್ಕೆ ಜಲಾಂಜಲಿ ಬಿಡುವ ವೇಳೆ, ಅವನ ಕೈಗೆ ಪುಟ್ಟ ಮೀನೊಂದು ಸಿಕ್ಕಿತು. ಇನ್ನೇನು ಅದನ್ನು ಸಮುದ್ರಕ್ಕೆ ಬಿಡಬೇಕು ಎನ್ನುವಷ್ಟರಲ್ಲಿ, ಆ ಮೀನು ದಯವಿಟ್ಟು ನನ್ನನ್ನು ಸಮುದ್ರಕ್ಕೆ ಬಿಡಬೇಡಿ. ದೊಡ್ಡ ಮೀನುಗಳು ನನ್ನನ್ನು ತಿಂದು ಹಾಕುತ್ತದೆ ಎಂದು ಹೇಳುತ್ತದೆ. ಅದಕ್ಕೆ ಸತ್ಯವೃತ ಅದನ್ನು ತನ್ನ ಅರಮನೆಗೆ ಕೊಂಡೊಯ್ಯುತ್ತಾನೆ. ಅದು ಕ್ಷಣದಿಂದ ಕ್ಷಣಕ್ಕೆ ದೊಡ್ಡದಾಗುತ್ತಿತ್ತು. ಆಗ ಸತ್ಯವೃತನಿಗೆ ಇದರಲ್ಲೇನೋ ಶಕ್ತಿ ಇದೆ ಎಂದು ಗೊತ್ತಾಯಿತು. ಈ ವೇಳೆ ನಿನ್ನ ನಿಜರೂಪವೇನು ಎಂದು ಕೇಳುತ್ತಾನೆ ಸತ್ಯವೃತ. ಆಗ ವಿಷ್ಣು ಮತ್ಸ್ಯಾವತಾರ ತಾಳಿ, ನಾನು ಭೂಲೋಕವನ್ನು ಪ್ರಳಯದಿಂದ ಕಾಪಾಡಲು ಬಂದಿರುವೆ ಎಂದು ಹೇಳುತ್ತಾನೆ.
ಹನ್ನೆರಡನೇಯ ಅವತಾರ ಕೂರ್ಮಾವತಾರ. ಕೂರ್ಮ ಎಂದರೆ ಆಮೆ. ಶ್ರೀವಿಷ್ಣು ಆಮೆಯ ಅವತಾರ ತಾಳಿ, ಸಮುದ್ರ ಮಂಥನಕ್ಕೆ ಸಹಾಯ ಮಾಡುತ್ತಾನೆ. ದೇವತೆಗಳು ಮತ್ತು ದಾನವರು ಸೇರಿ, ಸಮುದ್ರ ಮಂಥನ ಮಾಡಬೇಕು. ಅಮೃತವನ್ನು ಪಡೆಯಬೇಕೆಂದು ಬಯಸಿದಾಗ, ಮಂದ್ರಾಚಲ ಪರ್ವತವನ್ನು ಸಮುದ್ರಕ್ಕೆ ತಂದಿಡಬೇಕಿತ್ತು. ಅದಕ್ಕೆ ಬೆನ್ನೆಲುಬಾಗಿ ನಿಂತವೇ ಕೂರ್ಮಾವತಾರದ ಶ್ರೀವಿಷ್ಣು.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..
ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..
ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ




