ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 4

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 12 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ.

ಹದಿಮೂರನೇಯ ಅವತಾರ ಧನ್ವಂತರಿ ಅವತಾರ. ಧನ್ವಂತರಿ ಎಂದರೆ, ರೋಗ ರುಜಿನಗಳಿಂದ ಮುಕ್ತಿ ಕೊಡುವ ದೇವರು. ಸಮುದ್ರಮಂಥನದ ವೇಳೆ ಬರುವ ಉತ್ತಮ ವಸ್ತುಗಳಲ್ಲಿ ಧನ್ವಂತರಿ ದೇವ ಕೂಡ ಒಬ್ಬರು. ಇದು ಕೂಡ ಶ್ರೀವಿಷ್ಣುವಿನ ಅವತಾರವೇ. ಅನಾರೋಗ್ಯಕ್ಕೀಡಾದಾಗ ಹಲವರು ಧನ್ವಂತರಿ ದೇವಸ್ಥಾನಕ್ಕೆ ಹೋಗುತ್ತಾರೆ. ಧನ್ವಂತರಿ ಹೋಮ ಮಾಡಿಸುತ್ತಾರೆ.

ಹದಿನಾಲ್ಕನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮುಗಿದ ಬಳಿಕ ಅಮೃತ ಬರುತ್ತದೆ. ಆ ಅಮೃತವನ್ನು ಕುಡಿದು, ತಾವು ಚಿರಂಜೀವಿಗಳಾಗಬೇಕು ಎಂದು ರಾಕ್ಷಸರು ಬಯಸುತ್ತಾರೆ. ಆದರೆ ಈ ಅಮೃತ ಕೇವಲ ದೇವತೆಗಳಿಗಷ್ಟೇ ಸಿಗಬೇಕು ಎನ್ನುವ ಕಾರಣಕ್ಕೆ, ಶ್ರೀವಿಷ್ಣು ಮೋಹಿನಿಯ ರೂಪ ತಾಳುತ್ತಾನೆ. ಮತ್ತು ದೇವತೆಗಳಿಗಷ್ಟೇ ಅಮೃತ ನೀಡುತ್ತಾನೆ. ರಾಹುಕೇತು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತವನ್ನು ಸೇವಿಸುತ್ತಾರೆ. ಆಗ ತಡಮಾಡದ ಮೋಹಿನಿ, ಅವರ ರುಂಡ ಮುಂಡ ಬೇರೆ ಬೇರೆ ಮಾಡುತ್ತಾಳೆ.

ಹದಿನೈದನೇಯ ಅವತಾರ ನರಸಿಂಹ ಅವತಾರ. ಹಿರಣ್ಯಕಶ್ಯಪನ ವಧೆಗಾಗಿಯೇ ಶ್ರೀವಿಷ್ಣು ನರಸಿಂಹ ಅವತಾರ ತಾಳಿದ್ದ. ಹಿರಣ್ಯ ಕಶ್ಯಪವಿನ ಮಗ, ಪ್ರಹ್ಲಾದ ವಿಷ್ಣುವಿನ ಪರಮ ಭಕ್ತನಾಗಿದ್ದ. ಆದರೆ ತಂದೆ ಹಿರಣ್ಯ ವಿಷ್ಣುವಿನ ದ್ವೇಷಿಯಾಗಿದ್ದ. ಹಾಗಾಗಿ ತನ್ನ ರಾಜ್ಯದ ಜನರೆಲ್ಲ, ತನ್ನನ್ನೇ ಪೂಜಿಸಬೇಕು ಹೊರತು, ವಿಷ್ಣುವನ್ನ ಯಾರೂ ಪೂಜಿಸಬಾರದು. ಹಾಗೇನಾದರೂ ವಿಷ್ಣುವನ್ನು ಪೂಜಿಸಿದ್ದಲ್ಲಿ, ಅಂಥವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಘೋಷಿಸಿದ್ದ.

ಆದರೆ ಅವನ ಮಗನೇ, ಶ್ರೀವಿಷ್ಣುವಿನ ಭಕ್ತನೆಂದು ತಿಳಿದಾಗ, ಅವನನ್ನು ಬೆಟ್ಟದಿಂದ ದೂಡಲಾಯಿತು. ಪಟ್ಟದಾನೆ ಕಾಲಲ್ಲಿ ತುಳಿಸಲಾಯಿತು.  ಬೆಂಕಿಯ ಮೇಲೆ ಕೂರಿಸಲಾಯಿತು. ಎಲ್ಲ ಸಲವೂ ಧೃತಿಗೆಡದ ಪ್ರಹ್ಲಾದ, ಶ್ರೀವಿಷ್ಣುವಿನ ಜಪ ಮಾಡತೊಡಗಿದ ಮತ್ತು ಪ್ರಾಣಾಪಾಯದಿಂದ ಪಾರಾದ. ಕೊನೆಗೆ ನಿನ್ನ ವಿಷ್ಣು ಎಲ್ಲಿರುವ..? ಇಲ್ಲಿರುವನೇ..? ಇಲ್ಲಿರುವನೇ..? ಎಂದು ಹಿರಣ್ಯ ಕಶ್ಯಪ, ಮಗನಿಗೆ ಕೇಳಿದಾಗ, ನನ್ನ ನಾರಾಯಣ ಎಲ್ಲೆಡೆ ಇದ್ದಾನೆಂದು ಹೇಳುತ್ತಾನೆ. ಆಗ ಕಂಬ ಒಡೆದಾಗ, ಹೊರಬಂದ ನರಸಿಂಹ, ಹಿರಣ್ಯಕಶ್ಯಪುವಿನ ಎದೆ ಬಗೆದು, ಸಂಹಾರ ಮಾಡುತ್ತಾನೆ.

ಹದಿನಾರನೇಯ ಅವತಾರ ವಾಮನ ಅವತಾರ. ತ್ರಿಲೋಕದಲ್ಲಿ ಅಧಿಕಾರದ ಅಹಂನಿಂದ ಮೆರಯುತ್ತಿದ್ದ, ಬಲೀಂದ್ರನ ಸೊಕ್ಕು ಮುರಿಯಲು ಶ್ರೀವಿಷ್ಣು, ವಾಮನ ಅವತಾರವನ್ನು ತಾಳಿದ. ವಾಮನ ಎಂದರೆ, ಬಾಲಕನ ಅವತಾರ. ಬಲೀಂದ್ರ ಯಜ್ಞ ಮಾಡುತ್ತಿದ್ದಾಗ, ಯಾರು ಏನು ದಾನ ಕೇಳಿದರೂ ಕೊಡಬೇಕಿತ್ತು. ಹಾಗಾಗಿ ಇದೇ ವೇಳೆ ಬಂದ ವಾಮನ, ನನಗೆ 3 ಪಥ ಭೂಮಿ ಬೇಕು ಎಂದು ಕೇಳಿದ. ಇದಕ್ಕೆ ಒಪ್ಪಿದ ಬಲೀಂದ್ರ, 3 ಪಥ ಭೂಮಿ ಕೊಡಲು ಸಿದ್ಧನಾದ. ಆಗ ವಾಮನ ದೈತ್ಯ ರೂಪ ತಾಳಿ, 3 ಹೆಜ್ಜೆ ಇಟ್ಟು ಪಾತಾಳ, ಭೂಮಿ, ದೇವಲೋಕವನ್ನು ಆವರಿಸಿದ. ಮತ್ತು ಬಲೀಂದ್ರನ ಮೇಲೆ ಕಾಲಿಟ್ಟು, ಅವನನ್ನು ಭೂಮಿಯ ಒಳಗೆ ತಳ್ಳಿದ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

About The Author