Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲಿ ಸಮುದ್ರ ಮಂಥನಕ್ಕಾಗಿ ದೇವತೆಗಳು, ದಾನವರೊಂದಿಗೆ ಸಂಧಾನ ಮಾಡಿಕೊಳ್ಳುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ದಾನವರು ದೇವತೆಗಳು ಸೇರಿ ಹೇಗೆ ಸಮುದ್ರ ಮಂಥನ ಮಾಡುತ್ತಾರೆ. ಬಳಿಕ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸಮುದ್ರ ಮಂಥನ ಮಾಡುವುದಕ್ಕೆ ದೇವತೆಗಳು, ದಾನವರೊಂದಿಗೆ ಸಂಧಾನ ಮಾಡಿಕೊಳ್ಳುತ್ತಾರೆ. ಬಳಿಕ ವಿಷ್ಣುವಿನ ಆಕಾಶವಾಣಿ ಕೇಳುತ್ತದೆ. ದಾನವರೇ ಮತ್ತು ದೇವತೆಗಳೇ, ಸಮುದ್ರ ಮಂಥನಕ್ಕಾಗಿ ನೀವು ಸಿದ್ಧರಾಗಿ. ಕ್ಷೀರಸಾಗರದಲ್ಲಿ, ಮಂದ್ರಾಚಲ ಪರ್ವತವನ್ನು ಕಲಶವನ್ನಾಗಿ, ಮತ್ತು ವಾಸುಕಿಯನ್ನು ಹಗ್ಗವಾಗಿ ಬಳಸಿಕೊಳ್ಳಿ. ಇದರಿಂದ ಸಮುದ್ರ ಮಂಥನ ಮಾಡಿ ಎನ್ನುತ್ತಾನೆ.
ದೇವತೆಗಳು ದಾನವರೆಲ್ಲ ಸೇರಿ, ಸಮುದ್ರ ಮಂಥನಕ್ಕೆ ಸಜ್ಜಾಗುತ್ತಾರೆ. ಚಂದ್ರದೇವ, ಕಾಮಧೇನು, ಕಲ್ಪವೃಕ್ಷ, ಪಾರಿಜಾತ, ಮಾವಿನ ಮರ, ಸಂತಾನದ ವೃಕ್ಷ, ರತ್ನ ಕೌಸ್ತುಭ ಪ್ರಕಟವಾಯಿತು. ಉಚ್ಛೈಶ್ರವ, ಮದಿರೆ, ಭಾಂಗ, ಬೆಳ್ಳುಳ್ಳಿ, ಗಜ್ಜರಿ ಇವೆಲ್ಲವೂ ಪ್ರಕಟವಾದವು. ಇಂದ್ರನ ಐರಾವತವೂ ಉದ್ಭವವಾಯಿತು. ಕೊನೆಗೆ ಲಕ್ಷ್ಮೀ ದೇವಿ ಪ್ರಕಟವಾದಳು.
ಬಳಿಕ ವಿಷ್ಣುವಿನೊಂದಿಗೆ ಲಕ್ಷ್ಮೀಯ ವಿವಾಹವಾಯಿತು. ವಿಷ್ಣು ಮೋಹಿನಿಯ ರೂಪದಲ್ಲಿ ಬಂದು ದೇವತೆಗಳಿಗೆ ಅಮೃತ ಸಿಗುವಂತೆ ಮಾಡಿ, ಸ್ವರ್ಗ ಲೋಕ, ಇಂದ್ರನ ಪಾಲಾಗುವಂತೆ ಮಾಡಿದ.