Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ 10 ಶಿವನ ಅಂಶಗಳಲ್ಲಿ, 5 ಅಂಶಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, 5 ಅಂಶಗಳು ಯಾವುದು ಅಂತಾ ತಿಳಿಯೋಣ.
ಆರನೇಯ ಅವತಾರ ಅಶ್ವತ್ಥಾಮ. ಶಿವನನ್ನೇ ಮಗುವಾಗಿ ಪಡೆಯಬೇಕೆಂದು, ದ್ರೋಣಾಚಾರ್ಯರು ತಪಸ್ಸು ಮಾಡಿದರು. ಹಾಗಾಗಿ ಶಿವ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನಾಾಗಿ ಜನ್ಮ ಪಡೆದ. ಅಶ್ವತ್ಥಾಮ ಚಿರಂಜೀವಿ ಎನ್ನಿಸಿಕೊಂಡವನಾಗಿದ್ದ.
ಏಳನೇಯ ಅವತಾರ ದೂರ್ವಾಸ ಮುನಿ. ದೂರ್ವಾಸ ಮುನಿ ಎಂದರೆ, ಕೋಪಿಷ್ಠ ಮುನಿ ಎಂದೇ ಪ್ರಖ್ಯಾತಿ ಪಡೆದವರು. ಅತ್ರಿ ಮತ್ತು ಅನುಸೂಯಾರ ಪುತ್ರನೇ ದೂರ್ವಾಸ ಮುನಿ. ಇವರು ಶಿವನ ಅಂಶವಾಗಿ ಅನಸೂಯಾಳ ಗರ್ಭದಲ್ಲಿ ಜನಿಸಿದರು.
ಎಂಟನೇಯ ಅವತಾರ ಹನುಮಾನ್ ಅವತಾರ. ರಾಮನ ಭಕ್ತ ಹನುಮನು ಕೂಡ ಶಿವನ ಅವತಾರವೇ. ಅಂಜನಿ ಪುತ್ರನಿಗಾಗಿ ಶಿವನ ಪೂಜೆ ಮಾಡುತ್ತಿದ್ದಳು. ಹಾಗಾಗಿ ಶಿವನ ಅಂಶವೇ ಆಕೆಯ ಮಗನಾಗಿ ಹುಟ್ಟಿ ಬಂದ.
ಒಂಭತ್ತನೇಯ ಅವತಾರ ಕಿರಾತನ ಅವತಾರ. ಅರ್ಜುನನನ್ನು ಪರೀಕ್ಷಿಸಲು ಶಿವ ಕಿರಾತ ಅವತಾರ ಎತ್ತಿದ. ಅರ್ಜುನ ಶಿವನಿಂದ ದಿವ್ಯಾಸ್ತ್ರವನ್ನು ಪಡೆಯಲು ತಪಸ್ಸು ಮಾಡುತ್ತಿದ್ದ. ಆ ಸಮಯದಲ್ಲಿ ರಾಕ್ಷಸನೋರ್ವ ಹಂದಿಯ ರೂಪದಲ್ಲಿ ಬಂದು ಅರ್ಜುನನ ಮೇಲೆ ದಾಳಿ ಮಾಡಿದ, ಅವನನ್ನು ಕೊಲ್ಲಲು ಅರ್ಜುನ ಬಾಣ ಬಿಟ್ಟ. ಅದೇ ಸಮಯಕ್ಕೆ ಕಿರಾತನೋರ್ವ ಅದೇ ಹಂದಿಗೆ ಬಾಣ ಬಿಟ್ಟ. ಆಗ ಇಬ್ಬರ ನಡುವೆ ತಾನು ಹಂದಿಯನ್ನು ಕೊಂದಿದ್ದು ಎಂಬ ವಿಷಯಕ್ಕೆ ಯುದ್ಧವಾಗುತ್ತದೆ. ಆಗ ಕಿರಾತ ವೇಷದಲ್ಲಿದ್ದ ಶಿವ, ಅರ್ಜುನನ ಶಕ್ತಿಗೆ ಮೆಚ್ಚಿ ನಿಜರೂಪಕ್ಕೆ ಬಂದು, ದಿವ್ಯಾಸ್ತ್ರವನ್ನು ನೀಡುತ್ತಾನೆ.
ಹತ್ತನೇಯ ಅವತಾರ ಅರ್ಧ ನಾರೀಶ್ವರ. ಬ್ರಹ್ಮ ಇಡೀ ಲೋಕವನ್ನು ಸೃಷ್ಟಿಸಿದ. ಅಲ್ಲಿ ಪ್ರಾಣಿ, ಪಕ್ಷಿ, ಗಿಡ, ಮರ, ಹೆಣ್ಣು- ಗಂಡು ಎಲ್ಲರೂ ಇದ್ದರು. ಆದರೆ ಮೈಥುನಿ ಸೃಷ್ಟಿಯಾಗಬೇಕು ಎಂದು ಅಶರೀರವಾಣಿ ಕೇಳಿ ಬಂದಿತು. ಹಾಗಾಗಿ ಬ್ರಹ್ಮ ಶಿವನ ಸಹಾಯ ಕೇಳುತ್ತಾರೆ. ಆಗ ಶಿವ, ಶಿವ ಶಕ್ತಿಯ ರೂಪವಾಗಿ, ಅರ್ಧನಾರೀಶ್ವರನ ರೂಪ ತಾಳುತ್ತಾನೆ. ಬಳಿಕ ಲೋಕದಲ್ಲಿ ಮಂಗಳಮುಖಿಯರ ಸೃಷ್ಟಿಯಾಗುತ್ತದೆ.

