Sunday, April 20, 2025

Latest Posts

ಕಾಂಗ್ರೆಸ್ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಈ ಮಾತಂಧರ ಕೈಗಿಟ್ಟು ನಿದ್ದೆ ಹೋಗಿದೆ: ಪ್ರೀತಂಗೌಡ

- Advertisement -

Political news: ಬೆಂಗಳೂರಿನಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಮುಸ್ಲಿಂ ಯುವಕ, ಕಾರ್ ನಿಲ್ಲಿಸಿ, ಅಲ್ಲಾಹು ಅಕ್ಬರ್ ಎಂದು ಕೂಗಬೇಕು ಎಂದು ಹೇಳಿದ ವೀಡಿಯೋ ಸಖತ್ ವೈರಲ್ ಆಗಿದೆ. ಈ ಬಗ್ಗೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿ ಎಂಥ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ಕೂಡ ಆಕ್ರೋಶ ಹೊರಹಾಕಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶ್ರೀರಾಮನವಮಿಯಂದು ರಾಮನ ಹೆಸರನ್ನು ಹೇಳಲೂ ಕೂಡ ಅಂಜುವ ವಾತಾವರಣ ನಿರ್ಮಾಣ ಮಾಡಿದೆ ಕಾಂಗ್ರೆಸ್ ಸರ್ಕಾರ. ಪ್ರತಿದಿನವೂ ಹಿಂದೂಗಳು ಜೀವ ಕೈಲಿ ಹಿಡಿದು ಓಡಾಡುವ ಸ್ಥಿತಿಯಿದೆ. ರಾಮನವಮಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಹಿಂದೂಗಳಿಗೆ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ಮತಾಂಧ ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ ಶ್ರೀರಾಮನ ಹೆಸರೆತ್ತದಂತೆ ಬೆದರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಈ ಮಾತಂಧರ ಕೈಗಿಟ್ಟು ನಿದ್ದೆ ಹೋಗಿದೆ. ರಾಜ್ಯದಲ್ಲಿ ಸರ್ಕಾರವೇನಾದರೂ ಬದುಕಿದ್ದರೆ ಈ ಕೂಡಲೇ ಮತಾಂಧರ ಹೆಡೆಮುರಿಕಟ್ಟಿ ಸಮಾಜಕ್ಕೆ ಸುರಕ್ಷತೆಯ ಸಂದೇಶ ನೀಡಲಿ.

ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..

- Advertisement -

Latest Posts

Don't Miss