ಬೆಂಗಳೂರು: ದೋಸ್ತಿಗಳಿಗೆ ತಲೆನೋವಾಗಿರೋ ಅತೃಪ್ತರನ್ನು ಹೇಗಾದ್ರೂ ಮಾಡಿ ಮಟ್ಟ ಹಾಕಲು ಹಪಹಪಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇದೀಗ ಎಸಿಬಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ.
ದೋಸ್ತಿಗಳ ಸಲಹೆ, ಮನವೊಲಿಕೆಯನ್ನು ಧಿಕ್ಕರಿಸಿ ಮುಂಬೈನಿಂದ ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ಸಲ್ಲಿಸಿ ಪುನಃ ಮುಂಬೈ ಸೇರಿರುವ ಶಾಸಕರಲ್ಲಿ 4 ಮಂದಿ ಮೇಲೆ ಸರ್ಕಾರ ಎಸಿಬಿ ಅಸ್ತ್ರ ಪ್ರಯೋಗಿಸಲು ರೆಡಿಯಾಗಿದೆ. ಈ ನಿಟ್ಟನಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿರೋ ನಾಯಕರು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ, ಯಶವಂತಪುರ ಕ್ಷೇತ್ರದ ಎಸ್.ಟಿ ಸೋಮಶೇಖರ್,ಕೆ.ಆರ್ ಪುರಂ ಕ್ಷೇತ್ರದ ಬೈರತಿ ಬಸವರಾಜ್ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯರನ್ನು ಟಾರ್ಗೆಟ್ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಕಚೇರಿಯಿಂದಲೇ ಈ ಎಲ್ಲಾ ನಾಲ್ವರು ಶಾಸಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು ಎಸಿಬಿಯಲ್ಲಿ ಇವರೆಲ್ಲರ ಬಗ್ಗೆ ದಾಖಲಾಗಿರುವ ದೂರುಗಳನ್ನು ಹುಡುಕಿ ತೆಗೆದು ಅದನ್ನು ಆಧರಿಸಿ ಕ್ರಮ ಜರುಗಿಸಲು ತಂತ್ರ ಹೆಣೆದಿದ್ದಾರೆ. ಇನ್ನು ಎಸಿಬಿ ನಡೆಸುವ ಈ ಕಾರ್ಯ ಚಟುವಟಿಗಳ ಕುರಿತುಂತೆ ಹೇಮಂತ್ ನಿಂಬಾಳ್ಕರ್ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ರೆಬೆಲ್ ಗಳಿಗೆ ಬಿಗ್ ಶಾಕ್…! ಮಿಸ್ ಮಾಡದೇ ಈ ವಿಡಿಯೋ ನೋಡಿ