Wednesday, December 11, 2024

Latest Posts

ಬಿಜೆಪಿ ಲೀಡರ್ಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ- ವೀಡಿಯೋ ವೈರಲ್..

- Advertisement -

ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕ ಅಂಬೇಕರ್, ಶರದ್ ಪವಾರ್ ವಿರುದ್ಧ ಕಾಮೆಂಟ್ ಹಾಕಿದ ಕಾರಣಕ್ಕೆ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿ ಆಫೀಸಿಗೆ ಬಂದ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು, ವಿನಾಯಕರನ್ನ ಮುತ್ತಿಗೆ ಹಾಕಿದ್ದಾರೆ. ನಮ್ಮ ಲೀಡರ್ ಶರದ್ ಪವಾರ್ ಬಗ್ಗೆ ಕಾಮೆಂಟ್ ಮಾಡೋಕ್ಕೆ ಎಷ್ಟು ಧೈರ್ಯ ಅಂತಾ ಕೇಳಿದ್ದಾರೆ.

ವಿನಾಯಕ ಅದಕ್ಕೆ ಸಮಝಾಯಿಷಿ ಕೊಡೋಕ್ಕೆ ಹೋದಾಗ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಓರ್ವ ವಿನಾಯಕ ಕಪಾಳಕ್ಕೆ ಹೊಡೆದಿದ್ದಾನೆ. ಈ ದೃಶ್ಯವನ್ನ ಅಲ್ಲೇ ಇದ್ದ ಸ್ಥಳೀಯರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೋರ್ವ ಬಿಜೆಪಿ ಲೀಡರ್‌ ಈ ವೀಡಿಯೋವನ್ನ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿದ್ದು, ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕ ಅಂಬೇಕರ್ ಮೇಲೆ ಕಾಂಗ್ರೆಸ್ ಪುಂಡರು ದಾಳಿ ಮಾಡಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಮೊನ್ನೆ ತಾನೇ ಮರಾಠಿ ನಟಿ ಕೇತಕಿ ಚಿತಾಲೆ ಮತ್ತು ಕಾರ್ತಿಕ್ ಎಂಬ ವಿದ್ಯಾರ್ಥಿ ಶರದ್ ಪವಾರ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ, ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.

- Advertisement -

Latest Posts

Don't Miss