Saturday, December 21, 2024

Latest Posts

ಕಫದೋಷ ಹೆಚ್ಚಾಗಲು ಈ ಆಹಾರ ಸೇವನೆಯೇ ಕಾರಣ..

- Advertisement -

Health: ಮನುಷ್ಯನ ಆರೋಗ್ಯ ಏರುಪೇರಾಗಲು ಕಾರಣ, ದೇಹದಲ್ಲಿ ವಾತ, ಪಿತ್ತ, ಮತ್ತು ಕಫದ ಪ್ರಮಾಣ ಏರುಪೇರಾಗುವುದು. ಕಫ ಹೆಚ್ಚಾದಾಗ ಒಂದು ಆರೋಗ್ಯ ಸಮಸ್ಯೆ, ಪಿತ್ತ ಹೆಚ್ಚಾದಾಗ ಇನ್ನೊಂದು ಆರೋಗ್ಯ ಸಮಸ್ಯೆ, ವಾತ ಹೆಚ್ಚಾದಾಗ ಮತ್ತೊಂದು ಆರೋಗ್ಯ ಸಮಸ್ಯೆ, ಹೀಗೆ ಒಂದೊಂದರ ಪ್ರಮಾಣ ಏರುಪೇರಾದಾಗ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಕಫದೋಷ ಹೆಚ್ಚಾಗಲು ಯಾವ ಆಹಾರ ಸೇವನೆ ಕಾರಣ ಅಂತಾ ತಿಳಿಯೋಣ ಬನ್ನಿ..

ನೀರಿನ ಅಂಶ ಹೆಚ್ಚಿರುವ ಆಹಾರ. ತಂಪಾದ ಆಹಾರ ಮತ್ತು ಭಾರವಾದ ಆಹಾರ. ಇಂಥ ಆಹಾರವನ್ನು ಸೇವಿಸುವುದರಿಂದ, ಕಫ ಹೆಚ್ಚಾಗುತ್ತದೆ. ಕಫವೆಂದರೆ, ಕೆಮ್ಮಿದಾಗ ಬರುವ ಕಫವೊಂದೇ ಅಲ್ಲ. ದೇಹದಲ್ಲಿ ಕಫ ಹೆಚ್ಚಾದಾಗ, ಮೂಗು ಕಟ್ಟಬಹುದು. ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ಇವೆಲ್ಲವೂ ಕಫದೋಷವೇ.

ಮೊದಲನೇಯ ಆಹಾರ ನೀರಿನ ಅಂಶ ಹೆಚ್ಚಿರುವ ಆಹಾರ. ಅಂದರೆ, ಸೌತೇಕಾಯಿ, ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲು, ಸೇಬು, ಇಂಥ ಆಹಾರ ಹೆಚ್ಚು ಸೇವಿಸುವುದರಿಂದ ಕಫದೋಷ ಉಂಟಾಗುತ್ತದೆ. ಹಾಲು ಸೇವಿಸಿದರೂ ಕಫವಾಗುತ್ತದೆ. ಆದರೆ ಹಾಲಿನೊಂದಿಗೆ, ಅರಿಶಿನ, ಮಸಾಲೆ ಪದಾರ್ಥಗಳನ್ನು ಹಾಕಿ, ಗೋಲ್ಡನ್ ಮಿಲ್ಕ್ ಮಾಡಿ, ಕುಡಿದರೆ, ಕಫ ದೋಷ ನಿವಾರಣೆಯಾಗುತ್ತದೆ.

ತಂಪಾದ ಆಹಾರವೆಂದರೆ, ಬಾಳೆಹಣ್ಣು, ಚಿಕ್ಕು, ಬೆಣ್ಣೆ, ಐಸ್‌ಕ್ರೀಮ್, ಫ್ರಿಜ್‌ನಲ್ಲಿ ಇಟ್ಟಿರುವ ಆಹಾರ, ನಿಂಬೆ ಶರ್ಬತ್, ಮೊಸರು, ಇವೆಲ್ಲವೂ ತಂಪು ಆಹಾರ. ಬಾಳೆಹಣ್ಣು, ಮೊಸರು ಇವನ್ನೆಲ್ಲ ರಾತ್ರಿ ಹೊತ್ತು ತಿನ್ನಲೇಬಾರದು. ಯಾಕಂದ್ರೆ ರಾತ್ರಿ ಹೊತ್ತು ತಂಪು ಆಹಾರ ತಿನ್ನುವುದರಿಂದ, ಕಫ ಹೆಚ್ಚಾಗುತ್ತದೆ.

ಕೊನೆಯದಾಗಿ ಭಾರವಾದ ಆಹಾರ. ಅಂದರೆ, ಮೈದಾ, ಸಕ್ಕರೆ, ಬಿಳಿ ಅಕ್ಕಿ, ಕರಿದ ತಿಂಡಿ, ಮಸಾಲೆಯುಕ್ತ ಪದಾರ್ಥ, ಇಂಥವುಗಳನ್ನು ಭಾರವಾದ ಆಹಾರವೆನ್ನುತ್ತಾರೆ. ಇವುಗಳ ಸೇವನೆಯಿಂದಲೂ, ದೇಹದಲ್ಲಿ ಕಫ ದೋಷ ಉಂಟಾಗುತ್ತದೆ. ಇಂಥ ಆಹಾರದ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮವಾಗಿದೆ.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..

- Advertisement -

Latest Posts

Don't Miss