Sports News: ಕ್ರಿಕೇಟಿಗ ದಿನೇಶ್ ಕಾರ್ತಿಕ್ ನಿವೃತ್ತಿ ತೆಗೆದುಕೊಳ್ಳುತ್ತಾರೆಂದು ಸುದ್ದಿಯಾಗಿತ್ತು. ಇದೀಗ ಅವರೇ ನಿವೃತ್ತಿ ಖಚಿತ ಪಡಿಸಿದ್ದು, ಈ ಐಪಿಎಲ್ ಪಂದ್ಯ ಅವರ ಕೊನೆಯ ಪಂದ್ಯವೆಂದು ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಆರ್‌ಸಿಬಿ ಮತ್ತು ಸಿಎಸ್‌ಕೆ ಮ್ಯಾಚ್ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್‌ಗೆ, ಇದು ಚೆಪಾಕ್‌ನಲ್ಲಿ ನಿಮ್ಮ ಕೊನೆಯ ಆಟವೇ ಎಂದು ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ್ದ ಕಾರ್ತಿಕ್, ಚೆಪಾಕ್‌ನಲ್ಲಿ ಮತ್ತೊಂದು ಆಟವಾಡುವ ನಿರೀಕ್ಷೆ ಇದೆ. ನಮ್ಮ ತಂಡ ಗೆದ್ದು ಮುಂದುವರೆದಲ್ಲಿ, ಇನ್ನೊಂದು ಆಟವಾಡಲಿದ್ದೇನೆ. ಇಲ್ಲವಾದಲ್ಲಿ ಇದು ನನ್ನ ಕೊನೆಯ ಆಟವೆಂದಿದ್ದಾರೆ. ಈ ಮೂಲಕ ಕ್ರಿಕೇಟ್ ಜೀವನದ ನಿವೃತ್ತಿಯ ಬಗ್ಗೆ ದಿನೇಶ್ ಸ್ಪಷ್ಟನೆ ನೀಡಿದ್ದಾರೆ.
ಆದರೆ ಕ್ರಿಕೇಟ್ ನಿಂದ ದೂರ ಉಳಿಯಲು ಇಚ್ಛಿಸದ ದಿನೇಶ್ ಕಾರ್ತಿಕ್, ಕ್ರಿಕೇಟ್ ಆಡುವುದನ್ನು ಬಿಟ್ಟರೂ, ಕಾಮೆಂಟರಿ ಮಾಡಿಕೊಂಡು ಇರಬೇಕೆಂದು ನಿಶ್ಚಯಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಐಪಿಎಲ್ ಶುರುವಾದಾಗಿನಿಂದ, 6 ತಂಡದಲ್ಲಿ ಕಾರ್ಯನಿರ್ವಹಿಸಿದ್ದಲ್ಲದೇ, ಕೊಲ್ಕತ್ತಾ ಟೀಂನ ನಾಯಕನಾಗಿದ್ದರು.
ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಪ್ರೀತಂಗೌಡ ಟೀಂ ಸಜ್ಜು: ಪ್ರಚಾರಕ್ಕಿಳಿದ ಬಿಜೆಪಿ ಟಿಕೇಟ್ ಆಕಾಂಕ್ಷಿ

