Friday, December 27, 2024

Latest Posts

ಮಗುವಿನೊಂದಿಗೆ ಮಗುವಾಗಿ ಆಡಿದ ರಿಷಭ್ ಪಂಥ್- ವೀಡಿಯೋ ವೈರಲ್..

- Advertisement -

ಕ್ರಿಕೇಟಿಗ ರಿಷಭ್ ಪಂಥ್, ಐಪಿಎಲ್ ಮ್ಯಾಚ್ ಬ್ಯುಸಿಯ ನಡುವೆ, ಕೊಂಚ ಬ್ರೇಕ್ ತೆಗೆದುಕೊಂಡು ರಿಕಿ ಮಗನೊಂದಿಗೆ ಆಟವಾಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನ ಶೇರ್ ಮಾಡಿದ್ದಾರೆ ರಿಷಭ್. ರಿಕಿ ಪಾಂಟಿಂಗ್ ಮಗ ಫೆಚರ್‌ ಜೊತೆ ಪಂಥ್, ಬಿಡುವಿನ ವೇಳೆ ಹೊಟೇಲ್ ಒಂದರಲ್ಲಿ ಆಟವಾಡಿದ್ದಾರೆ.

ಸನ್‌ ರೈಸಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ್ದ, ಡೆಲ್ಲಿ ಕ್ಯಾಪಿಟಲ್ಸ್ ತಂಡದವರು ಹೊಟೇಲ್ ಒಂದರಲ್ಲಿ ಚಿಕ್ಕ ಪಾರ್ಟಿ ಮಾಡಿದ್ದರು. ಈ ವೇಳೆ ಫೆಚರ್‌ ಜೊತೆ ಪಂಥ್ ಆಟವಾಡಿದ ವೀಡಿಯೋವನ್ನ ಅಲ್ಲಿ ವೀಡಿಯೋ ಮಾಡಲಾಗಿದೆ. ಆ ವೀಡಿಯೋವನ್ನ ಎಡಿಟ್ ಮಾಡಿ, ಪಂಥ್ ತಮ್ಮ ಇನ್‌ಸ್ಟಾ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ನಮ್ಮ ರೆಸ್ಯೂಮೆನಲ್ಲಿ ಕಬ್ಬಡ್ಡಿ ಮತ್ತು ಕ್ಯಾಚ್ ಕ್ಯಾಚ್ ಆ್ಯಡ್ ಮಾಡಿದ್ದೇನೆಂದು ಟ್ಯಾಗ್ ಲೈನ್ ಹಾಕಿದ್ದಾರೆ.

ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ಓರ್ವ ಇಬ್ಬರು ಮಕ್ಕಳು ಎಂದು ಬರೆದರೆ, ಇನ್ನೊಬ್ಬ ಬೇಬಿ ಸಿಟ್ಟರ್ ಎಂದು ಬರೆದಿದ್ದಾನೆ. ಅಲ್ಲದೇ ಒಬ್ಬರು ಈ ಬಗ್ಗೆ ಕಾಮೆಂಟ್ ಹಾಕಿದ್ದು, ರಿಷಭ್ ಪಂಥ್ ಓರ್ವ ಒಳ್ಳೆ ತಂದೆಯಾಗೋದ್ರಲ್ಲಿ ನೋ ಡೌಟ್ ಎಂದಿದ್ದಾರೆ. ಇನ್ನು ಕೆಲವರು ಬೇಗ ಮದುವೆಯಾಗಿ ರಿಷಭ್ ಎಂದಿದ್ದಾರೆ.

ರಿಷಭ್ ಪಂಥ್ ಮಗುವಿನೊಟ್ಟಿಗೆ ಆಡಿದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ..

- Advertisement -

Latest Posts

Don't Miss