Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸಬೇಕು ಅಂತ ಮಾತ್ರ ಹಲವರಿಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನಾವಿಂದು ಹಣ್ಣಿನ ಸೇವನೆ ಯಾವ ಸಮಯದಲ್ಲಿ ಮಾಡಬೇಕು ಅಂತಾ ಹೇಳಲಿದ್ದೇವೆ.
ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಅಂತಾ ಹೇಳಲಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದರೆ ನಿಮ್ಮ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಅಷ್ಟು ಸುಲಭವಾಗಿ ಬರುವುದಿಲ್ಲ. ಏಕೆಂದರೆ ಸೇವಿಸಿದ ಆಹಾರ, ಸರಿಯಾಗಿ ಜೀರ್ಣವಾದಾಗ, ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಆಗ ನಿಮ್ಮ ಆರೋಗ್ಯ, ಸೌಂದರ್ಯ ಎಲ್ಲವೂ ಉತ್ತಮವಾಗಿರುತ್ತದೆ.
ಇನ್ನು ರಾತ್ರಿ ಮಲಗುವ ಮುನ್ನ ಹಣ್ಣಿನ ಸೇವನೆ ಮಾಡಿದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದಲೇ ಜೀರ್ಣಕ್ರಿಯೆ ಸಮಸ್ಯೆ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಸೂರ್ಯನಿರುವ ಸಮಮಯದಲ್ಲಿ ನಾವು ತಂಪಾದ ಆಹಾರ ಸೇವನೆ ಮಾಡಿದರೆ, ಅದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಕೊನೆಯದಾಾಗಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ಸೇವನೆ ಮಾಡಿದಾಗ, ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ, ವೈದ್ಯರ ಬಳಿ ವಿಚಾರಿಸಿ ಬಳಿಕ ಹಣ್ಣಿನ ಸೇವನೆ ಮಾಡುವುದು ಉತ್ತಮ.