Thursday, September 19, 2024

Latest Posts

ಕ್ರಿಸ್ಪಿ ವೆಜ್ ನಗ್ಗೇಟ್ಸ್ ರೆಸಿಪಿ..

- Advertisement -

ಸಂಜೆ ಏನಾದ್ರೂ ಸ್ನ್ಯಾಕ್ಸ್ ಮಾಡಿ ತಿನ್ನಬೇಕು ಅನ್ನಿಸಿದಾಗ, ನೀವು ಕ್ರಿಸ್ಪಿ ವೆಜ್ ನಗ್ಗೇಟ್ಸ್ ಮಾಡಿ ಸವಿಯಬಹುದು. ಹಾಗಾದ್ರೆ ಇದನ್ನ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..

ಬೇಕಾಗುವ ಸಾಮಗ್ರಿ: 4 ಬೇಯಿಸಿದ ಆಲೂಗಡ್ಡೆ, ಒಂದು ಕಪ್ ತುರಿದ ಕ್ಯಾರೆಟ್, ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಇದನ್ನು ಬಿಟ್ಟು ನಿಮಗೆ ಬೇಕಾದ ತರಕಾರಿ ಬಳಸಬಹುದು. ಇದರೊಂದಿಗೆ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನ ಪೇಸ್ಟ್, ಅರ್ಧ ಕಪ್ ಬ್ರೆಂಡ್ ಕ್ರಂಬ್ಸ್ ಅಥವಾ ಅವಲಕ್ಕಿ ಪುಡಿ, ಅರ್ಧ ಕಪ್ ಕಾರ್ನ್ ಫ್ಲೋರ್, ಅರ್ಧ ಕಪ್ ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಆಲೂಗಡ್ಡೆ, ಕ್ಯಾರೆಟ್ ತುರಿ, ಕ್ಯಾಪ್ಸಿಕಂ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಸ್ಪೂನ್ ಅವಲಕ್ಕಿ ಪುಡಿ, ಉಪ್ಪು ಇದನ್ನೆಲ್ಲ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ನಗ್ಗೇಟ್ಸ್ ಶೇಪ್ ಮಾಡಿಟ್ಟುಕೊಳ್ಳಿ. ಈಗ ಬ್ಯಾಟರ್‌ ರೆಡಿ ಮಾಡಿಕೊಳ್ಳಬೇಕು. ಮೈದಾ ಮತ್ತು ಕಾರ್ನ್‌ಫ್ಲೋರ್ ಮತ್ತು ಕೊಂಚ ಉಪ್ಪು ಮಿಕ್ಸ್ ಮಾಡಿದ್ರೆ ಬ್ಯಾಟರ್ ರೆಡಿ.

ಹಿಂಗಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?

ಈಗ ನಗ್ಗೇಟ್ಸನ್ನ ಈ ಬ್ಯಾಟರ್‌ನಲ್ಲಿ ಅದ್ದಿ, ಉಳಿದ ಬ್ರೆಡ್ ಕ್ರಂಬ್ಸ್ ಅಥವಾ ಅವಲಕ್ಕಿ ಪುಡಿಯಲ್ಲಿ ಮಿಕ್ಸ್ ಮಾಡಿ, ಮಂದ ಉರಿಯಲ್ಲಿ ಬಿಸಿಯಾದ ಎಣ್ಣೆಯಲ್ಲಿ ಈ ನಗ್ಗೇಟ್ಸ್ ಕರಿಯಬೇಕು. ಗೋಲ್ಡನ್ ಬ್ರೌನ್ ಆದ ಮೇಲೆ ನಗ್ಗೇಟ್ಸ್ ರೆಡಿ. ಇದನ್ನು ಟೋಮೆಟೋ ಸಾಸ್ ಜೊತೆ ಸವಿಯಬಹುದು.

- Advertisement -

Latest Posts

Don't Miss