Thursday, December 4, 2025

Latest Posts

ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ ..

- Advertisement -

ಮನುಷ್ಯನ ಜೀವನ ಅಂದಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಕೆಲ ಸಮಯ ಕಷ್ಟವಿದ್ದರೆ, ಮತ್ತೆ ಕೆಲ ಸಮಯ ಸುಖವಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಮಗೆ ಶುಭವಾಗುವ ಮೊದಲು ಅಥವಾ ಅಶುಭವಾಗುವ ಮೊದಲು ದೇವರು ಹಲವಾರು ಸೂಚನೆಗಳನ್ನ ಕೊಡ್ತಾನೆ ಎಂದು ಹೇಳಲಾಗಿದೆ. ಅದೇ ರೀತಿ ಕಾಗೆಗಳು ಕೂಡ ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಕೆಲ ಸೂಚನೆಗಳನ್ನು ನೀಡುತ್ತದೆ. ಹಾಗಾದ್ರೆ ಕಾಕ ಶಾಸ್ತ್ರದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ನೀವು ಮಾಡುವ ಈ 5 ತಪ್ಪುಗಳೇ ಕಾರಣ..

ನೀವು ಪ್ರವಾಸಕ್ಕೆ ಹೋಗುವ ಮುನ್ನ, ಅಥವಾ ಸಂದರ್ಶನಕ್ಕೆ ಹೋಗುವ ಮುನ್ನ, ಎಲ್ಲಾದರೂ ಹೊರಗಡೆ ಹೋಗುವ ಮುನ್ನ ನಿಮ್ಮೆದುರು ಕಾಗೆ ಬಂದು ಕೂಗಿದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಕಾಗೆ ಕೂಗುತ್ತ ನಿಮ್ಮ ಪಶ್ಚಿಮ ದಿಕ್ಕಿಗೆ ಹೋದರೆ, ನಿಮ್ಮ ಕೆಲಸ ಸಫಲವಾಗಲಿದೆ ಎಂದರ್ಥ.

ನೀವು ಹೊರಗೆ ಹೋಗುವಾಗ ಕಾಗೆ ತನ್ನ ಕೊಂಕಿನಿಂದ ನೆಲವನ್ನು ಕುಕ್ಕುವಂತೆ ಕಂಡರೆ, ನಿಮಗೆ ಲಕ್ಷ್ಮೀ ದೇವಿಯ ಕೃಪೆ ಉಂಟಾಗಲಿದೆ ಎಂದರ್ಥ. ಇನ್ನು ಬಾಯಲ್ಲಿ ಹಣ್ಣು, ಧಾನ್ಯ, ಮಣ್ಣು ತೆಗೆದುಕೊಂಡು ನಿಮ್ಮ ಮನೆಯಂಗಳದಲ್ಲಿ ಹಾಕಿದ್ರೆ, ನಿಮಗೆ ಅಚಾನಕ್ ಆಗಿ ಧನ ಪ್ರಾಪ್ತಿಯಾಗಲಿದೆ ಎಂದರ್ಥ.

ನೆಲ ಒರೆಸುವುದಕ್ಕೂ ಹಿಂದೂ ಧರ್ಮದಲ್ಲಿದೆ ಹಲವು ನಿಯಮ..

ನೀವು ಹಾಕಿದ ಆಹಾರವನ್ನು ಕಾಗೆ ಬಂದು ಸೇವಿಸಿದರೆ, ನಿಮ್ಮ ಭಾಗ್ಯದ ಬಾಗಿಲು ತೆಗೆಯಲಿದೆ ಎಂದರ್ಥ. ಇನ್ನು ಶ್ರಾದ್ಧದ ಸಮಯದಲ್ಲಿ ನೀವು ಹಾಕಿದ ನೈವೇದ್ಯವನ್ನು ಕಾಗೆ ಬಂದು ಸೇವಿಸಿದರೆ, ನಿಮ್ಮ ಪೂರ್ವಜರು ನಿಮಗೆ ಪೂರ್ತಿ ಆಶೀರ್ವಾದ ಕೊಟ್ಟಿದ್ದಾರೆಂದು ಅರ್ಥ.

ಕಾಗೆ ಮನೆ ಮೇಲೆ ನಿಂತು ಕೂಗಿದ್ರೆ, ಕೆಲವರು ಮನೆಗೆ ಅತಿಥಿಗಳು ಬರುತ್ತಾರೆಂದು ಹೇಳುತ್ತಾರೆ. ಇನ್ನು ಕೆಲವರು ಸಾವಿನ ಸುದ್ದಿ ಬರುತ್ತದೆ ಎಂದು ಹೇಳುತ್ತಾರೆ. ಇದು ಹಲವು ಬಾರಿ ನಡೆದ ಘಟನೆಗೂ ಸಾಕ್ಷಿಯಾಗಿದೆ.

- Advertisement -

Latest Posts

Don't Miss