Sunday, April 20, 2025

Latest Posts

ಸೌತೇಕಾಯಿ ಬಳಸಿ ನೀವು ಈ 4 ಫೇಸ್‌ಮಾಸ್ಕ್ ತಯಾರಿಸಬಹುದು..

- Advertisement -

ಸೌತೇಕಾಯಿ ತಿಂದ್ರೆ ನಮ್ಮ ತ್ವಚೆ, ಆರೋಗ್ಯಕ್ಕೆಲ್ಲ ಎಷ್ಟು ಉತ್ತಮವೋ, ಅಷ್ಟೇ ಅದರ ಫೇಸ್‌ಮಾಸ್ಕ್ ಬಳಸೋದ್ರಿಂದ ಇದೆ. ಕುಕುಂಬರ್ ಫೇಸ್‌ಮಾಸ್ಕ್ ಹಾಕೋದ್ರಿಂದ, ನಮ್ಮ ತ್ವಚೆ ಸಾಫ್ಟ್ ಆಗಿ, ಕ್ಲೀನ್ ಆಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದು ಹೇಳಿ ಮಾಡಿಸಿದ ಫೇಸ್‌ಮಾಸ್ಕ್. ಹಾಗಾದ್ರೆ 4 ಕುಕುಂಬರ್ ಫೇಸ್ ಮಾಸ್ಕ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಮೊದಲ ಫೇಸ್‌ಮಾಸ್ಕ್ ಕುಕುಂಬರ್- ಆಲೋ ಫೇಸ್‌ಮಾಸ್ಕ್. ಇದಕ್ಕೆ ನೀವು ಅರ್ಧ ಸೌತೇಕಾಯಿ ಮತ್ತು ಎರಡು ಸ್ಪೂನ್ ಆ್ಯಲೋವೆರಾ ಮಿಕ್ಸ್ ಮಾಡಿ, ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ, ಅದು ಒಣಗಿನ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ವೇಳೆ ಯಾವುದೇ ಸೋಪ್, ಜೆಲ್ ಬಳಸಬೇಡಿ. ವಾರಕ್ಕೆರಡು ಬಾರಿ ಈ ಫೇಸ್‌ಮಾಸ್ಕ್ ಬಳಸಿದ್ರೆ ಸಾಕು.. ಇನ್ನು ನೀವು ಮುಖ ತೊಳೆದ ಬಳಿಕ, ಮುಖದ ಮೇಲಿನ ನೀರು ತಾನೇ ಆರಲಿ. ನೀವು ಟವೆಲ್ ಬಳಸದಿರಿ.

ಎರಡನೇಯ ಫೇಸ್‌ಮಾಸ್ಕ್ ಡ್ರೈ ಸ್ಕಿನ್ ಇದ್ದವರಿಗೆ. ಅರ್ಧ ಸೌತೇಕಾಯಿಯನ್ನು ಸಣ್ಣಗೆ ಕಟ್ ಮಾಡಿ, ಅದಕ್ಕೆ 3 ಸ್ಪೂನ್ ಮೊಸರು ಹಾಕಿ, ಪೇಸ್ಟ್ ತಯಾರಿಸಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ, ಅದು ಒಣಗಿನ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

ಮೂರನೇಯ ಫೇಸ್‌ಮಾಸ್ಕ್ ಮುಖದ ಮೇಲೆ ಮೊಡವೆ ಕಲೆ ಇರುವವರಿಗೆ. ಅರ್ಧ ಸೌತೇಕಾಯಿಯನ್ನು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ 4 ಸ್ಪೂನ್ ಅಕ್ಕಿ ಹಿಟ್ಟು, 4ಸ್ಪೂನ್ ರೋಸ್ ವಾಟರ್ ಮಿಕ್ಸ್ ಮಾಡಿ. ಇದನ್ನು ಫೇಸ್ ಮಾಸ್ಕ್ ಹಾಕಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ನಾಲ್ಕನೇಯ ಫೇಸ್‌ಮಾಸ್ಕ್ ಕುಕುಂಬರ್- ಓಟ್ಮೀಲ್‌ ಫೇಸ್‌ಮಾಸ್ಕ್. ಅರ್ಧ ಸೌತೇಕಾಯಿ ಮತ್ತು ಎರಡು ಸ್ಪೂನ್ ಓಟ್‌ಮೀಲ್ ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ತಯಾರಿಸಿ. ಇದಕ್ಕೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ, ಫೇಸ್‌ಮಾಸ್ಕ್ ಹಾಕಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿ, ಅದು ಒಣಗಿನ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಆಯ್ಲಿ ಫೇಸ್ ಇದ್ದವರಿಗೆ ಇದು ಉತ್ತಮ ಫೇಸ್‌ಮಾಸ್ಕ್.

- Advertisement -

Latest Posts

Don't Miss