Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು, ಪ್ಯೂರಿ ರೆಡಿ ಮಾಡಿ. ಇದನ್ನು ಚಮಚದಿಂದಲೇ ಮ್ಯಾಷ್ ಮಾಡಿದರೂ ಉತ್ತಮ. ಈಗ ಹಾಲು ಕಾಯಲು ಇಡಿ, ಅದು ಕುದಿಬಂದು ಅರ್ಧದಷ್ಟು ಆದ ಬಳಿಕ, ಅದಕ್ಕೆ ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಕೇಸರಿ ಹಾಲು, ಬಾದಾಮ್, ಪಿಸ್ತಾ, ಗೋಡಂಬಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ. ಈಗ ಚೆನ್ನಾಗಿ, ಕೈಯಾಡಿಸಿ. ಹಾಲಿನ ಮಿಶ್ರಣ ಸ್ವಲ್ಪ ದಪ್ಪವಾದ ಬಳಿಕ, ಗ್ಯಾಸ್ ಆಫ್ ಮಾಡಿ. ಅದು ತಣಿದ ಬಳಿಕ, ರೆಡಿ ಮಾಡಿಟ್ಟ ಸೀತಾಫಲದ ಪೇಸ್ಟ್ ಹಾಕಿ, ಮಿಕ್ಸ್ ಮಾಡಿ. ಇದನ್ನು ನಾಲ್ಕು ತಾಸು ಫ್ರಿಜ್‌ನಲ್ಲಿರಿಸಿದರೆ ಬಾಸುಂದಿ ರೆಡಿ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..