Monday, December 23, 2024

Latest Posts

D Boss Dharshan : ಕುದುರೆ ಸವಾರರಿಗೆ  ಡಿ ಬಾಸ್ ಕಿವಿ ಮಾತು..!

- Advertisement -

Film News : ಹೇಳಿ ಕೇಳಿ ದರ್ಶನ್ ಪ್ರಾಣಿ  ಪ್ರೇಮಿ. ಅಷ್ಟೇ  ಅಲ್ಲ ಕರ್ನಾಟಕ  ಅರಣ್ಯ ಇಲಾಖೆ   ರಾಯಭಾರಿ ಕೂಡಾ ಹೌದು. ಇದೀಗ ದಚ್ಚು ಕುದುರೆ ಸವಾರರಿಗೊಂದು   ಕಿವಿ ಮಾತನ್ನು ಹೇಳಿದ್ದಾರೆ. ಹಾಗಿದ್ರೆ ದಚ್ಚು ಈ ಕಿವಿ ಮಾತು ಯಾಕೆ ಹೇಳಿದ್ರು…ಏನು ಆ ಸಲಹೆ ಹೇಳ್ತೀವಿ ಈ ಸ್ಟೋರಿಯಲ್ಲಿ.

ದರ್ಶನ್ ಪ್ರಾಣಿ ಪಕ್ಷಿಗಳನ್ನು ಶೋಕಿಗಾಗಿ ಸಾಕುವವರಲ್ಲ. ಪ್ರಾಣಿ ಪಕ್ಷಿಗಳ ಪಾಲನೆಯಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ತಿಳಿದುಕೊಳ್ಳುತ್ತಲೇ ಇರುತ್ತಾರೆ. ಯಾವುದೇ ಊರಿಗೆ ಹೋದರೂ ಅಲ್ಲಿರುವ ವಿಶೇಷ ತಳಿಯ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ಪಡೆದು ಹೋಗಿ ನೋಡಿ ಬರುತ್ತಾರೆ. ಇದೀಗ ದರ್ಶನ್ ಕುದುರೆ ಸವಾರರಿಗೆ ಒಂದು ಕಿವಿಮಾತು ಹೇಳಿದ್ದಾರೆ.

ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿರುವ ದರ್ಶನ್ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗದುಕೊಳ್ಳುತ್ತಾರೆ. ಇನ್ನು ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಕೂಡ ಹೌದು. ಇತ್ತೀಚೆಗೆ ಬೆಂಗಳೂರಿನ ಬಿಜಿಎಸ್ ಹಾರ್ಸ್ ರೈಡಿಂಗ್ ಸ್ಕೂಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಲ್ಲಿ ಕುದುರೆ  ಸವಾರರಿಗೆ ಒಂದು  ಸಲಹೆ ನೀಡಿದ್ದಾರೆ.

ಒಳ್ಳೆ ಕುದುರೆ ಸವಾರ ಬಾಕ್ಸಾಫೀಸ್ ಸುಲ್ತಾನ್. ಇನ್ನು ಬಿಜಿಎಸ್ ಹಾರ್ಸ್ ರೈಡಿಂಗ್ ಸ್ಕೂಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಕುದುರೆಗಳ ಬಗ್ಗೆ ಮಕ್ಕಳಿಗೆ ಒಂದಷ್ಟು ಮಾಹಿತಿ ನೀಡಿದರು. ಕನ್ನಡದಲ್ಲೇ ಮಾತು ಆರಂಭಿಸಿದ ದರ್ಶನ್ ಇಲ್ಲಿ ದೆಹಲಿಯಿಂದ ಬೆಂಗಳೂರಿನವರೆಗೆ ಎಲ್ಲಾ ಮಕ್ಕಳು ಇದ್ದಾರೆ. ಹಾಗಾಗಿ ನನಗೆ ಗೊತ್ತಿರುವ ಹರಕು ಮುರಕು ಇಂಗ್ಲೀಷ್‌ನಲ್ಲೇ ಮಾತನಾಡುತ್ತೇನೆ ಎಂದು ಮಾತು ಆರಂಭಿಸಿದರು ದಚ್ಚು.

ನಾನು ಸ್ವಲ್ಪ ಪ್ರಾಣಿ ಪ್ರೇಮಿ. ಹೆಚ್ಚೇನು ಅಲ್ಲ. ನನಗೆ ಕುದುರೆಗಳ ಬಗ್ಗೆ ಸ್ವಲ್ಪ ಗೊತ್ತು. ನನ್ನ ಫಾರ್ಮ್‌ ಹೌಸ್‌ನಲ್ಲಿ 15 ಕುದುರೆಗಳಿವೆ. ನಾನು ಎಲ್ಲಾ ಮಕ್ಕಳಿಗೂ ಹೇಳುವುದು ಒಂದೇ. ಕುದುರೆ ಪ್ರಾಣಿಯಲ್ಲ, ದಯವಿಟ್ಟು ಅದನ್ನು ಪ್ರಾಣಿ ಎಂದುಕೊಳ್ಳಬೇಡಿ, ನಿಮ್ಮಲ್ಲಿ ಒಬ್ಬರಾಗಿ ಅದನ್ನು ನೋಡಿ. ನಿಮ್ಮ ಸಹೋದರ, ಸಹೋದರಿ ರೀತಿ ಕಾಣಬೇಕು ಎಂದು ದರ್ಶನ್ ಕಿವಿಮಾತು ಹೇಳಿದರು.

ಕುದುರೆ ಏರುವ ಮುನ್ನ ಅದಕ್ಕೆ ಏನಾದರೂ ಟ್ರೀಟ್ ನೀಡಿ. ಟ್ರೀಟ್ ಅಂದರೆ ಏನು? ಏನಾದರೂ ಸಿಹಿ ನೀಡಿ. ಸಕ್ಕರೆ ಪದಾರ್ಥ. ಅಂತದ್ದೇನಾದರೂ ಕೊಟ್ಟು ಕುದುರೆ ಏರಿ ಸವಾರಿ ಮಾಡಿ. ಒಂದು ವಿಷಯ ಹೇಳುತ್ತೇನೆ. ಕುದುರೆ ಸಾಮಾನ್ಯ ಪ್ರಾಣಿ ಅಲ್ಲ. ಕಾರಿನ ರೀತಿಯಲ್ಲೇ ಕುದುರೆ ವೇಗ ಇರುತ್ತದೆ. ನೀವು ಒಳ್ಳೆ ಸವಾರರಾಗಿದ್ದರೆ, ನೀವು ಕಾರು ಏರಿದಾಗಲೂ 10ರಿಂದ 15ನಿಮಿಷ ಅದಕ್ಕೆ ಬೇಕು ಆ ಕಾರಿಗೆ ಅಡ್ಜೆಸ್ಟ್ ಆಗಲು ಅದೇ ರೀತಿ ಕುದುರೆ ಕೂಡ. ಕೆಲ ತುಂಟ ಕುದುರೆಗಳಿರುತ್ತವೆ ಕುದುರೆಗಳಲ್ಲಿ 2 ತರಹದ ಕುದುರೆಗಳಿರುತ್ತವೆ. ಒಂದು ಸಾಮಾನ್ಯ ಕುದುರೆ. ಹೆಚ್ಚು ವೇಗವಾಗಿ ಇರಲ್ಲ. ಆದರೆ ಕೆಲವು ಬಹಳ ತುಂಟ ಕುದುರೆಗಳಿರುತ್ತವೆ, ನಿಮಗೆ ಕೊಂಚ ಸಮಸ್ಯೆ ಕೊಡಬಹುದು. ಆಗ ಅವುಗಳ ಮೈದಡವಿದರೆ ನಿಮ್ಮ ಹೃದಯಕ್ಕೆ ಹತ್ತಿರವಾಗುತ್ತದೆ. ಹಾಗಾಗಿ ಕುದುರೆಗಳನ್ನು ನಿಮ್ಮ ಸಹೋದರ, ಸಹೋದರಿ ತರ ನೋಡಿ, ಎಂದೂ ಪ್ರಾಣಿ ತರ ನೋಡಬೇಡಿ, ಇಷ್ಟನ್ನು ಹೇಳಲು ಇಷ್ಟಪಡುತ್ತೇನೆ. ಧನ್ಯವಾದ” ಎಂದು ಹೇಳಿದರು.

ಸದ್ಯ ದರ್ಶನ್ ‘ಕಾಟೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ನಾಲ್ಕೈದು ದಿನಗಳ ಕಾಲ ಸ್ನೇಹಿತರ ಜೊತೆ ಬ್ರಿಟನ್ ಪ್ರವಾಸ ಕೈಗೊಂಡಿದ್ದರು. ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಆಗಿರುವ ಚಾಲೆಂಜಿಂಗ್ ಸ್ಟಾರ್ ಶೂಬಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Dharshan : ಡಿ ಬಾಸ್ ಸಿನಿ ರಂಗಕ್ಕೆ 26 ವರ್ಷಗಳ ಸಂಭ್ರಮ…! ಸಂಭ್ರಮಕ್ಕೆ ಅಭಿಮಾನಿಗಳ ವಿಭಿನ್ನ ಪ್ರಯತ್ನ..!

Goldenstar Ganesh: ಗಣೇಶನಿಗೆ ವಿಘ್ನ ತಂದಿಟ್ಟ ಕಟ್ಟಡ ಕಾಮಗಾರಿ

Bollywood: ‘ಕಾಲ್ ಮಿ ಬೇ’ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ಗುರ್ಫತೇ ಪಿರ್ಜಾದಾ ಅವರೊಂದಿಗೆ ವೀರ್ ದಾಸ್

- Advertisement -

Latest Posts

Don't Miss