Thursday, July 25, 2024

Latest Posts

ನಮ್ಮನ್ನ ನಾವು ನಂಬಬೇಕು, ನಮ್ಮನ್ನ ನಾವು ಕಾಪಾಡ್ಕೋಬೇಕು ಅಂದಿದ್ಯಾಕೆ ಡಾಲಿ..!

- Advertisement -

ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್‌ನಲ್ಲಿರೋ ಕುದುರೆ, ಹೆಡ್‌ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್‌ಗೆ ಬಂದಿದ್ರೆ ಶಿವಣ್ಣ ಜೊತೆ ನಟಿಸ್ತಿರೋ ಬೈರಾಗಿ ಕೂಡ ಬಿಡುಗಡೆಗೆ ಹತ್ತಿರ ಇದೆ. ಕೈತುಂಬಾ ಸಿನಿಮಾಗಳಿವೆ ಈಗ ಧನಂಜಯ್ ಯಶಸ್ವೀ ನಟ. ಹಾಗಂತ ಬರೀ ಸಕ್ಸಸ್ ಹಿಂದೆ ಹೋಗಿಲ್ಲ ಧನಂಜಯ್ ಸಾಮಾಜಿಕ ಕಳಕಳಿಯಲ್ಲೂ ಸಮಾಜದ ಜೊತೆಗಿದ್ದಾರೆ. ಕಾರ್ ಬೈಕ್ ಓಡಿಸುವಾಗ ನಮ್ಮ ಜಾಗರೂಕತೆ ನಮಗಿರಬೇಕು. ನಮ್ಮನ್ನು ನಾವು ನಂಬಬೇಕು, ನಮ್ಮ ಗಾಡಿಯನ್ನೋ ಅದರ ಎಂಜಿನ್ನನ್ನೋ, ಕೆಪಾಸಿಟಿಯನ್ನೋ ನಂಬಿದ್ರೆ ಕೆಟ್ವಿ ಅಂತ ಯುವಕರಿಗೆ ಬುದ್ಧಿಮಾತು ಹೇಳಿದ್ದಾರೆ ಧನಂಜಯ್. ಧನಂಜಯ್ ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಾಟಕ ಟ್ರಾಫಿಕ್ ಪೊಲೀಸ್ ಜೊತೆ ಕೈಜೋಡಿಸಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಂತ ಕಿವಿಮಾತು ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಈ ಜಾಗೃತಿ ಯೋಜನೆಗಳಲ್ಲಿ ಪಾಲ್ಗೊಳ್ಳುವ ನಟರು ಯಾವುದೇ ಸಂಭಾವನೆ ಪಡೆಯದೇ ಕೈ ಜೋಡಿಸೋದು ಸಾಮಾನ್ಯ. ಇದನ್ನು ರಾಜ್‌ಕುಮಾರ್ ದಿನಗಳಿಂದಲೂ ಪುನೀತ್‌ರಾಜ್‌ಕುಮಾರ್, ದರ್ಶನ್ ಸೇರಿದಂತೆ ಬಹುತೇಕ ಸ್ಟಾರ್ ನಟರು ಮಾಡಿಕೊಂಡು ಬಂದಿದ್ದಾರೆ, ಈಗ ಧನಂಜಯ್ ಬಡವ ರಾಸ್ಕಲ್, ರತ್ನನ್‌ಪರಪಂಚ, ಪುಷ್ಪ ಸೇರಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಧನಂಜಯ್ ಸಾಮಾಜಿಕ ಕಾಳಜಿ ನಿರಂತರವಾಗಿರಲಿ ಅನ್ನೋದು ನಮ್ಮ ಆಶಯ

- Advertisement -

Latest Posts

Don't Miss