ಸಕ್ಕರೆ ಹಾಕದೇ ಮಾಡಬಹುದು ಖರ್ಜೂರ ಮತ್ತು ನಟ್ಸ್ ಲಡ್ಡು..

ಸಿಹಿ ತಿಂಡಿ ಅಂದ್ರೆ ಹಲವರು ಇಷ್ಟಪಡುತ್ತಾರೆ. ಅದರಲ್ಲೂ ಲಾಡು ಅಂದ್ರೆ ತುಂಬಾ ಜನರಿಗಿಷ್ಟ. ಆದರೆ ಸಕ್ಕರೆ ತಿಂದರೆ, ಎಲ್ಲಿ ಮಧುಮೇಹ ಬರತ್ತೋ, ಅಥವಾ ದಪ್ಪಗಾಗಿಬಿಡ್ತೀವೋ ಅನ್ನೋ ಆತಂಕ ಇರತ್ತೆ. ಅಂಥವರಿಗಾಗಿ ನಾವಿಂದು ಖರ್ಜೂರ ಮತ್ತು ನಟ್ಸ್ ಬೆರೆಸಿ, ಸಕ್ಕರೆ ಬಳಸದೇ ಯಾವ ರೀತಿ ಸ್ವಾದಿಷ್ಟ ಲಾಡು ತಯಾರಿಸಬೇಕು ಅನ್ನೋದನ್ನ ಹೇಳಿಕೊಡಲಿದ್ದೇವೆ.

ಬೇಕಾಗುವ ಸಾಮಗ್ರಿ: ತುಪ್ಪ, ಕಾಲು ಕಪ್ ಅಂಟು(ಗಮ್), ಅರ್ಧ ಕಪ್ ಕಾಜು, ಬಾದಾಮಿ, ದ್ರಾಕ್ಷಿ, ಹಸಿ ಖರ್ಜೂರ, ಪಿಸ್ತಾ, 10 ವಾಲ್ನಟ್, 1 ಸ್ಪೂನ್ ಗಸಗಸೆ.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಅದಕ್ಕೆ ಅಂಟು ಹಾಕಿ ಹುರಿದುಕೊಳ್ಳಿ. ಅಂಟು ಸಂಡಿಗೆಯ ರೀತಿಯಾದಾಗ, ಅದನ್ನು ತೆಗೆದು ಒಂದು ಬೌಲ್‌ಗೆ ಹಾಕಿ. ಬಳಿಕ ಅದೇ ಪ್ಯಾನ್‌ಗೆ ಮತ್ತಷ್ಟು ತುಪ್ಪ ಹಾಕಿ, ಕಾಜು, ಬಾದಾಮಿ, ಪಿಸ್ತಾ, ವಾಲ್ನಟ್ , ದ್ರಾಕ್ಷಿ, ಖರ್ಜೂರವನ್ನು ಸಪರೇಟ್ ಆಗಿ ಹುರಿದುಕೊಳ್ಳಿ.

ಗಸಗಸೆಯನ್ನೂ ಹುರಿದುಕೊಳ್ಳಿ. ಈ ಎಲ್ಲ ಸಾಮಗ್ರಿ ತಣ್ಣಗಾದ ಬಳಿಕ, ಖರ್ಜೂರ, ಗಸಗಸೆ ಬಿಟ್ಟು ಉಳಿದೆಲ್ಲ ಸಾಮಗ್ರಿಯನ್ನೂ ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ. ಈಗ ಖರ್ಜೂರವನ್ನು ಮಿಕ್ಸಿ ಜಾರ್‌ಗೆ ಹಾಕಿ ಗಟ್ಟಿಯಾಗಿರುವಂತೆ ಪೇಸ್ಟ್ ಮಾಡಿ. ಬಳಿಕ ಈ ಖರ್ಜೂರದ ಪೇಸ್ಟ್, ಡ್ರೈಫ್ರೂಟ್ಸ್ ಮಿಶ್ರಣ ಜೊತೆಗೆ ಹುರಿದಿಟ್ಟುಕೊಂಡ ಗಸಗಸೆಯನ್ನು ಸೇರಿಸಿ ಲಾಡು ತಯಾರಿಸಿ.

ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

About The Author