Davanagere News: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ತಾಲೂಕಿನಲ್ಲಿ ಕೆಲ ಕೆರೆಕಟ್ಟೆ ಗಳಲ್ಲಿ ನೀರು ತುಂಬಿದ್ದು ರೈತರ ಮುಖದಲ್ಲಿ ಸಂತಸ ತಂದಿದೆ . ತಾಲೂಕಿನಲ್ಲಿ ಕೆಲ ವರ್ಷಗಳಿಂದ ಮಳೆ ಕೊರತೆ ಮತ್ತು ಬೋರ್ವೆಲ್ ಗಳ ನೀರು ಹೋಗಿದ್ದು ಈಗ ನೆನ್ನೆ ಸುರಿದ ಮಳೆಯಿಂದ ಎಲ್ಲಾ ಕೆರೆಗಳು ಹಳ್ಳ ಕೊಳ್ಳಗಳು ಬರ್ತಿಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಾಗಿ ಹೋದ ಬೋರ್ವೆಲ್ ಗಳಲ್ಲಿ ನೀರು ಬರಬಹುದು ಎಂಬ ಸಂತಸ ರೈತರಲ್ಲೇ ತಂದಿದೆ. ಅದಲ್ಲದೆ ಗಿಡಮರ ಜಾನುವಾರುಗಳಿಗೆ ಕುಡಿಯಲು ನೀರು ಮತ್ತು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಕೃತಿಕ ಮಳೆ ರೈತರ ಮೊಗದಲ್ಲಿ ಈ ವರ್ಷದ ಉತ್ತಮ ಬೆಳೆಯ ಮುನ್ಸೂಚನೆ ನೀಡಿದೆ. ಕಳೆದ ಸುಮಾರು ವರ್ಷಗಳಿಂದ ನೀರೇ ಕಾಣದ ಹುಚ್ಚವನಹಳ್ಳಿ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು ಸುತ್ತಮುತ್ತಲಿನ ರೈತರಿಗೆ ಸಂತಸ ತಂದಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಅಲ್ಪ ಪ್ರಮಾಣದಲ್ಲಿ ಕೆರೆಗೆ ನೀರು ಬಂದಿದ್ದು ಬಿಟ್ಟರೆ ಈ ವರ್ಷದ ಕೃತಿಕ ಮಳೆ ನಮಗೆ ಸಂತಸವನ್ನು ತಂದಿದೆ. ಕೆರೆಯ ಬರ್ತಿಯಾದ ಹಿನ್ನೆಲೆ ಜಾನುವಾರು ಅಂತರ್ಜಲ ಜನ ಜೀವನ ಮತ್ತು ಮುಂದಿನ ಉತ್ತಮ ಬೆಳೆ ಸೂಚನೆಯಾಗಿದೆ. ನೆನ್ನೆ ಸುರಿದ ಮಳೆ ನನ್ನ ಜೀವನದಲ್ಲಿಯೇ ಕಂಡಿಲ್ಲ ಈ ಮಳೆ ಸಂತೋಷವನ್ನು ತಂದಿದೆ.
Anjali Case: ಅಂಜಲಿ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಅಮಾನತು
G.Parameshwar Press Meet: ಹೆಚ್ಡಿಕೆ ಫೋನ್ ಟ್ರ್ಯಾಪ್ ಆರೋಪಕ್ಕೆ ತಿರುಗೇಟು ನೀಡಿದ ಗೃಹಸಚಿವರು
ಹುಬ್ಬಳ್ಳಿಯ ಕೊ* ಕೇಸ್: ನೇಹಾ ಮತ್ತು ಅಂಜಲಿ ಮನೆಗೆ ಭೇಟಿ ನೀಡಿದ ಗೃಹಸಚಿವ ಜಿ.ಪರಮೇಶ್ವರ್