Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ಅವಲಕ್ಕಿ ಚಿವಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಒಂದು ಬಾಣಲಿಯಲ್ಲಿ ಕರಿಯಲು ಎಣ್ಣೆ ಹಾಕಿ, ಬಿಸಿ ಮಾಡಿ. ಅದು ಕಾದ ಬಳಿಕ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಅದಕ್ಕೆ ಹಾಕಿ, ಕರಿಯಿರಿ. ಅವಲಕ್ಕಿಯ ಬಣ್ಣ ಬ್ರೌನ್ ಆಗುವುದರೊಳಗೆ, ಅದನ್ನು ಎಣ್ಣೆಯಿಂದ ಹೊರತೆಗೆಯಿರಿ. ಈಗ ಒಂದು ಪ್ಯಾನ್‌ನಲ್ಲಿ ಕೊಂಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹಸಿ ಮೆಣಸಿನಕಾಯಿ, ಗೋಡಂಬಿ, ಶೇಂಗಾ, ಹುರಿಗಡಲೆ, ಕರಿಬೇವು, ಜೀರಿಗೆ ಎಲ್ಲವನ್ನೂ ಹಾಕಿ ಹುರಿದುಕೊಳ್ಳಿ.
ಒಂದು ಮಿಕ್ಸಿಂಗ್ ಬೌಲ್‌ಗೆ ಕರಿದ ಅವಲಕ್ಕಿ, ಹುರಿದುಕೊಂಡ ಮಿಶ್ರಣ, ಉಪ್ಪು, ಖಾರದಪುಡಿ, ಅರಿಶನ ಪುಡಿ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಅವಲಕ್ಕಿ ಚಿವಡಾ ರೆಡಿ.
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?
ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..
ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

