Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ರಸಮಲಾಯಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ದಪ್ಪ ತಳದ ಪಾತ್ರೆಗೆ 1 ಲೀಟರ್ ಹಾಲು ಮತ್ತು ಕೊಂಚ ನೀರು ಹಾಕಿ, ಚೆನ್ನಾಗಿ ಬಿಸಿ ಮಾಡಿ. ಬಳಿಕ ನಿಂಬೆರಸ ಅಥವಾ ವಿನೇಗರ್ ಹಾಕಿ, ಆ ಹಾಲು ಒಡಯುವಂತೆ ಮಾಡಿ. ಒಡೆದ ಹಾಲನ್ನು ಕಾಟನ್ ಬಟ್ಟೆಯಲ್ಲಿ ಸುತ್ತಿ, ಅದರ ನೀರೆಲ್ಲಾ ಆರುವ ಹಾಗೆ, ಅದರ ಮೇಲೆ ಭಾರವಾದ ವಸ್ತುವನ್ನಿಡಿ. ಈಗ ಒಡೆದ ಹಾಲು ಪನೀರ್ ಆಗಿರುತ್ತದೆ. ಇದನ್ನು ಚೆನ್ನಾಗಿ ನಾದಿ, ಸಾಫ್ಟ್ ಹಿಟ್ಟಿನ ರೀತಿ ಮಾಡಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಉಂಡೆಯಾಕಾರ ಮಾಡಿಕೊಳ್ಳಿ.
ಈಗ ತೆಳುವಾದ ಸಕ್ಕರೆ ಪಾಕ ಮಾಡಿ, ಅದರಲ್ಲಿ ಈ ಉಂಡೆಗಳನ್ನು, ಮಂದ ಉರಿಯಲ್ಲಿ ಕೊಂಚವೇ ಹೊತ್ತು ಕಾಯಿಸಿ. ಆದರೆ ಈ ಉಂಡೆಗಳು ಒಡೆಯಬಾರದು. ಈಗ ಇನ್ನೊಂದು ಪ್ಯಾನ್‌ಗೆ ಕಾಯಿಸಿದ ಹಾಲು, ಸಕ್ಕರೆ, ಕೊಂಚ ನೆನೆಸಿಟ್ಟ ಕೇಸರಿ, ಕುಡ್ಡಿ ತರಿ ತರಿಯಾಗಿ ಪುಡಿ ಮಾಡಿದ ಬಾದಾಮಿ, ಪಿಸ್ತಾವನ್ನು ಸೇರಿಸಿ, ಹಾಲು ತಯಾರಿಸಿ. ಈ ಹಾಲಿನ ಮಿಶ್ರಣ ತಣ್ಣಗಾದ ಮೇಲೆ ಈಗಾಗಲೇ ತಯಾರಿಸಿದ ರಸಗುಲ್ಲಾವನ್ನು ಇದಕ್ಕೆ ಸೇರಿಸಿ, 1 ತಾಸು ಹಾಗೆ ಇರಿಸಿ. ಬಳಿಕ ಫ್ರಿಜ್‌ನಲ್ಲಿರಿಸಿ. ಈಗ ರಸಮಲಾಯಿ ರೆಡಿ. ನಿಮಗೆ ಬೇಕಾಗಿದ್ದಲ್ಲಿ, ಇದಕ್ಕೆ ನೀವು ಏಲಕ್ಕಿ ಪುಡಿ ಸೇರಿಸಿಕೊಳ್ಳಬಹುದು.
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?
ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..
ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..