Sunday, September 8, 2024

Latest Posts

Deepavali Special: ಈ ಬಾರಿ ದೀಪಾವಳಿಗೆ ಈ ರೀತಿಯಾಗಿ ಮೈಸೂರ್ ಪಾಕ್ ಮಾಡಿ..

- Advertisement -

Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ಮನೆಯಲ್ಲೇ ಮೈಸೂರ್ ಪಾಕ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.

ಒಂದು ಕಪ್ ಸಕ್ಕರೆ , 1 ಕಪ್ ಕಡಲೆ ಹಿಟ್ಟು, 1ವರೆ ಕಪ್ ತುಪ್ಪ ಇವಿಷ್ಟು ಮೈಸೂರ್ ಪಾಕ್ ಮಾಡಲು ಬೇಕಾಗುವ ಸಾಮಗ್ರಿ. ಬಾಣಲೆಗೆ ಕೊಂಚ ತುಪ್ಪ ಹಾಕಿ, ತೆಳ್ಳಗಿನ ಸಕ್ಕರೆ ಪಾಕ ತಯಾರಿಸಿಕೊಳ್ಳಿ. ಬಳಿಕ ಇನ್ನೊಂದು ಪ್ಯಾನ್‌ಗೆ ಇನ್ನು ಸ್ವಲ್ಪ ತುಪ್ಪ ಹಾಕಿ, ಕಡಲೆ ಹಿಟ್ಟು ಘಮ ಬರುವವರೆಗೂ ಹುರಿದುಕೊಳ್ಳಿ. ಬಳಿಕ ಇದಕ್ಕೆ ಅಷ್ಟೂ ತುಪ್ಪ ಸೇರಿಸಿ, ಗಂಟು ಬಾರದ ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ರೆಡಿ ಮಾಡಿಟ್ಟುಕೊಂಡ ಸಕ್ಕರೆ ಪಾಕವನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಮೈಸೂರ್ ಪಾಕ್ ಹದಕ್ಕೆ ಬರುವವರೆಗೂ ಹೀಗೆ ಚೆನ್ನಾಗಿ ಕೈಯಾಡಿಸಿದ ಬಳಿಕ, ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಈಗ ಚೌಕಾಕಾರದಲ್ಲಿ ಕತ್ತರಿಸಿದರೆ, ಮೈಸೂರು ಪಾಕ್ ರೆಡಿ. ನಿಮಗೆ ಅವಶ್ಯಕತೆ ಇದ್ದಲ್ಲಿ, ನೀವು ಇದಕ್ಕೆ ಏಲಕ್ಕಿ ಪುಡಿ, ಡ್ರೈಫ್ರೂಟ್ಸ್ ಸೇರಿಸಿಕೊಳ್ಳಬಹುದು.

ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

ಶ್ರೀಮಂತಿಕೆ ಇದ್ದಾಗಲೂ ಇಂಥ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ಚಾಣಕ್ಯ..

ಶ್ರೇಷ್ಠರು ಮತ್ತು ಶ್ರೇಷ್ಠರಲ್ಲದವರು ಯಾರು..? ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ ನೋಡಿ..

- Advertisement -

Latest Posts

Don't Miss