Monday, April 14, 2025

Latest Posts

ಡೆಲ್ಲಿ ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ಸ್ ಗೆ ಎಂಟ್ರಿ

- Advertisement -

www.karnatakatv.net : ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ( ಅಕ್ಟೋಬರ್ 10 ) ipl ಕ್ವಾಲಿಫೈಯರ್ 1ಮ್ಯಾಚ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಗಳು ಮುಖಾಮುಖಿಯಾಗಿದ್ದವು .ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ 4 ವಿಕೇಟ್‌ಗಳ ಜಯವನ್ನು ಗಳಿಸಿದೆ. ಸಿ ಎಸ್ ಕೆ ಯ ಇದು 9 ನೇ ಫೈನಲ್ ಮ್ಯಾಚ್ ಆಗಿದ್ದು , ಅಂತಿಮ ಓವರ್ ನಲ್ಲಿ ಧೋನಿಫೋರ್ ,ಸಿಕ್ಸರ್ ಬಾರಿಸಿ ಸಿ ಎಸ್ ಕೆ ಅನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಇದರಿಂದ ಸಿ ಎಸ್‌ ಕೆ ಫೈನ್‌ಲ್ ಅನ್ನು ಪ್ರವೇಶಿಸಿದೆ.

ಮ್ಯಾಚ್‌ನಲ್ಲಿ ಟಾಸ್‌ಸೋತು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ , ಶಿಖರ್‌ಧವನ್ 7,ಪೃಥ್ವಿ ಶಾ 60(34), ರಿಷಭ್ ಪಂತ್ 51 (35) ,ಶ್ರೇಯಸ್ ಅಯ್ಯರ್ 1, ಶಿಮ್ರಾನ್ ಹೆಟ್ಮೆಯರ್ 37 (24) ,ಅಕ್ಸರ್ ಪಟೇಲ್ 10 ರನೊಂದಿಗೆ 20 ಓವರ್ ಗೆ 5 ವಿಕೆಟ್ ಕಳೆದು 172 ರನ್ ಗಳಿಸಿತು. ಜೋಶ್ ಹ್ಯಾಝಲ್ವುಡ್ 2, ರವೀಂದ್ರ ಜಡೇಜ 1 , ಮೋಯಿನ್ ಅಲಿ 1 , ಡ್ವೇನ್ ಬ್ರಾವೋ 1ವಿಕೇಟ್ ಅನ್ನ ಪಡೆದರು .

173 ರನ್‌ಗಳ ಗುರಿ ಬೆನ್ನಟ್ಟಿದ್ದ ಸಿ ಎಸ್ ಕೆ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ತೊರಿಸಿತು , ರುತುರಾಜ್ ಗಾಯಕ್‌ವಾಡ್ 70 ,ಫಾಫ್ ಡು ಪ್ಲೆಸಿಸ್ 1, ಮೋಯಿನ್ ಅಲಿ 16 , ರಾಬಿನ್ ಉತ್ತಪ್ಪ 63, ಅಂಬಾಟಿ ರಾಯುಡು 1, ಎಂಸ್ ಧೋನಿ 18 . ಶಾರ್ದುಲ್ ಠಾಕುರ್ 0 ರನ್ ನೊಂದಿಗೆ 19.4 ಓವರ್ ಗಳಲ್ಲಿ 6 ವಿಕೇಟ್ ಕಳೆದು 173 ರನ್ ಗಳಿಸಿ ಗೆಲುವಿನ ನಗು ಬೀರಿತು .
ಡೆಲ್ಲಿ ಇನ್ನಿಂಗ್ಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಜೋಶ್ ಹ್ಯಾಝುಲ್ವುಡ್ 2, ರವೀಂದ್ರ ಜಡೇಜ 1, ಮೋಯಿನ್ ಅಲಿ 1ಡ್ವೇನ್ ಬ್ರಾವೊ 1 ವಿಕೆಟ್ ಪಡೆದರು. ಚೆನ್ನೈ ಇನ್ನಿಂಗ್ಸ್ ನಲ್ಲಿ ಡೆಲ್ಲಿ ಪಂದ್ಯದ ಟಾಮ್ ಕರನ್ 3 , ಅನ್ರಿಕ್ ನಾರ್ಕಿಯಾ 1, ಆವೇಶ್ ಖಾನ್ 1 ವಿಕೇಟ್ ಪಡೆದರು . ಇದರಲ್ಲಿ ರುತುರಾಜ್ ಗಾಯಕ್ವಾಡ್ ರವರು ಪಂದ್ಯದಲ್ಲಿ ಶ್ರೇಷ್ಟರೆನಿಸಿದರು.
ಸಂಪತ್ ಶೈವ, ನ್ಯೂಸ್ ಡೆಸ್ಕ್ , ಕರ್ನಾಟಕ ಟಿವಿ

- Advertisement -

Latest Posts

Don't Miss