Sunday, September 8, 2024

Latest Posts

ರಾಗಿ ಬಳಸಿ ತಯಾರಿಸಬಹುದು ರುಚಿಕರ, ಟೇಸ್ಟಿ ಸೂಪ್..

- Advertisement -

Health Tips: ರಾಗಿ ಬಳಸಿ, ರಾಗಿ ಮುದ್ದೆ, ದೋಸೆ, ಇಡ್ಲಿ, ರೊಟ್ಟಿ, ಅಂಬಲಿ, ಮಾಲ್ಟ್‌ ತಯಾರಿಸುತ್ತೇವೆ. ಅದೇ ರೀತಿ, ಸೂಪ್ ಕೂಡ ತಯಾರಿಸಬಹುದು. ಇಂದು ನಾವು ರಾಗಿ ಬಳಸಿ, ಸೂಪ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ನಾಲ್ಕರಿಂದ 5 ಸಣ್ಣಗೆ ತುಂಡರಿಸಿದ ಬೀನ್ಸ್, ಕಾಲು ಕಪ್ ಬಟಾಣಿ, ಒಂದು ಕ್ಯಾರೆಟ್ , 1 ಈರುಳ್ಳಿ, ಒಂದು ಹಸಿಮೆಣಸಿನಕಾಯಿ, ಎರಡು ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, ಚಿಟಿಕೆ ಜೀರಿಗೆ, ಪೆಪ್ಪರ್ ಪುಡಿ, ಅರಿಶಿನ, 5 ಸ್ಪೂನ್ ರಾಗಿ, ಎರಡು ಸ್ಪೂನ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಲು ಇಡಿ. ಇದಕ್ಕೆ ಎಣ್ಣೆ, ಜೀರಿಗೆ, ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಬೀನ್ಸ್, ಕ್ಯಾರೆಟ್, ಬಟಾಣಿ ಹಾಕಿ ಹುರಿಯಿರಿ. ಕೊನೆಗೆ ಶುಂಠಿ ಹಾಕಿ ಕೊಂಚ ಹುರಿಯಿರಿ.

ಬಳಿಕ ಉಪ್ಪು, ಅರಿಶಿನ, ಪೆಪ್ಪರ್ ಪುಡಿ, ಸೇರಿಸಿ. ಈಗ ಇದು ಬೇಯುವವರೆಗೂ, ಒಂದು ಗ್ಲಾಸ್‌ನಲ್ಲಿ ರಾಗಿಹಿಟ್ಟು ಮತ್ತು ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಾಡುವಾಗ, ಹಿಟ್ಟು ಗಂಟಾಗಬಾರದು. ಇದನ್ನು ಹುರಿದ ಸಾಮಗ್ರಿಗೆ ಹಾಕಿ, ಅವಶ್ಯಕತೆ ಇದ್ದರೆ, ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಸೂಪ್ ಹದಕ್ಕೆ ಬಂದ ಬಳಿಕ ಗ್ಯಾಸ್ ಆಫ್ ಮಾಡಿದ್ರೆ, ರಾಗಿ ಸೂಪ್ ರೆಡಿ.

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

ಪೆಪ್ಪರ್ ಪನೀರ್ ರೆಸಿಪಿ..

- Advertisement -

Latest Posts

Don't Miss