ತಿಪ್ಪೇರುದ್ರಸ್ವಾಮಿ ದೇವಾಲಯದ ದಾಸೋಹ ನಿರ್ಮಾಣದಲ್ಲಿ ಅವ್ಯವಹಾರ ಕ್ರಮಕ್ಕೆ ಆಗ್ರಹ

Chithradurga News: ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ದಾಸೋಹ ಭವನ ನಿರ್ಮಾಣದಲ್ಲಿ ವ್ಯವಹಾರಕ್ಕೆ ಕಾರಣವಾದವರಿಂದ 33 ಲಕ್ಷ ರೂ .ದಂಡ ವಸೂಲಿ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್ .ಉಮಾಪತಿ ಒತ್ತಾಯಿಸಿದ್ದಾರೆ .

ಉದ್ಯಾನವನಕ್ಕೆ ಮೀಸಲಾದ ಜಾಗವನ್ನು ದೇವಾಲಯಕ್ಕೆ 15 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇದೇ ಜಾಗದಲ್ಲಿ ದೇವಾಲಯದ ದಾಸೋಹ ಭವನ ನಿರ್ಮಾಣ ಕಾಮಗಾರಿ ಶೇಕಡ 50%ರಷ್ಟು ಮುಗಿದಿತ್ತು. ಈ ಸಂದರ್ಭದಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ (ಕೆ.ಎಂ. ತಿಪ್ಪೇಸ್ವಾಮಿ) ಜಮೀನಿನ ಮಾಲೀಕ ಜಿ.ಎಸ್. ಪ್ರಭುಸ್ವಾಮಿ ಹಾಗೂ ದೇವಾಲಯದ ಇಓ ಎಚ್ ಹಾಲಪ್ಪ ವಿರುದ್ಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಇದೆಲ್ಲದರ ಮಧ್ಯೆ ದಾಸೋಹ ಭವನ ನಿರ್ಮಾಣ ಗುತ್ತಿಗೆ ಪಡೆದ ವ್ಯಕ್ತಿ ಕಾಮಗಾರಿ ತಗಿತಗೊಂಡಿರುವುದರಿಂದ ನಷ್ಟವಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ನ್ಯಾಯಾಲಯದಲ್ಲಿ ರಾಜಿ ಏರ್ಪಟ್ಟಿದ್ದು ಗುತ್ತಿಗೆದಾರನಿಗೆ 33 ಲಕ್ಷ ರೂಪಾಯಿ. ದಂಡ ನೀಡಲು ಧಾರ್ಮಿಕ ದತ್ತಿ ಇಲಾಖೆ ಒಪ್ಪಿರುತ್ತದೆ . ಪ್ರತಿಭಕ್ತ ತನ್ನ ಶ್ರಮದ ದುಡಿಮೆಯ ಹಣವನ್ನು ದೇವಾಲಯದ ಅಭಿವೃದ್ಧಿಗೆ ಹಣ ನೀಡಿರುತ್ತಾರೆ. ಹಾಗಾಗಿ ದೇವಾಲಯದ ನಿಧಿಯಿಂದ ದಂಡವನ್ನು ಪಾವತಿ ಮಾಡಬಾರದು. ಅವ್ಯವಹಾರಕ್ಕೆ ಕಾರಣರಾದ ಹಾಗೂ ನ್ಯಾಯಾಲಯ ಆರೋಪಿಗಳು ಎಂದು ತೀರ್ಪು ನೀಡಿರುವ ವ್ಯಕ್ತಿಗಳಿಂದ ವಸೂಲಿ ಮಾಡಿ ದಂಡ ಪಾವತಿ ಮಾಡಬೇಕು.

ಅಕ್ರಮ ಯಶಗಿರುವ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಬೇಕು. ಭಕ್ತರು ನೀಡಿರುವ ಕಾಣಿಕೆಯಿಂದ ದಂಡಪಾವತಿಸುವುದು ಎಷ್ಟು ಸರಿ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್ ಉಮಾಪತಿ ಪ್ರಶ್ನಿಸಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರನ್ನು ದೇವಾಲಯ ಸಲಹಾ ಸಮಿತಿಗೆ ಪರಿಗಣಿಸಬಾರದು ಮತ್ತು ದೇವಾಲಯದ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

About The Author