Tuesday, April 15, 2025

Latest Posts

ರಾಯಚೂರಿನಲ್ಲಿ ಕೊರೋನಾ ಕಾಟದ ನಡುವೆ ಡೆಂಘೀ ಭೂತದ ಹಾವಳಿ..!

- Advertisement -

ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾನವಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗ್ತಿದ್ದು, ಸೋಂಕಿಗೀಡಾದ ಮಕ್ಕಳ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ.

ಹೌದು, ಕೊರೋನಾ ನಡುವೆ ಸದ್ಯ ರಾಯಚೂರಲ್ಲಿ ಡೆಂಘೀ ಹಾವಳಿಯೆಬ್ಬಿಸಿದೆ. ಮಾನವಿ ಪಟ್ಟಣದಲ್ಲಿ ಇಂದು ಕೋನಾಪುರ 8  ವರ್ಷದ ಬಾಲಕಿ ಹಾಗೂ  ಜೈ ಬೀಮಾ ನಗರದ 18  ವರ್ಷದ ಯುವಕ  ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಇನ್ನು ಸೋಂಕಿನಿಂದ ಒಂದೇ ತಾಲೂಕಿನಲ್ಲಿ ಇಂದು ಇಬ್ಬರು ಮೃತಪಟ್ಟಿರೋದು ಜನರಲ್ಲಿ ಆತಂಕ ಮೂಡಿಸಿದೆ.

ಇನ್ನು ಜಿಲ್ಲೆಯಲ್ಲಿ ಡೆಂಘೀ ಸೋಂಕು ತಗುಲಿದ ಮಕ್ಕಳಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಹಾಸಿಗೆಯ ಅಭಾವವಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀಗೆ ನೀಡಲಾಗೋ ಔಷಧ ಖಾಲಿಯಾಗಿದೆ ಅಂತ ಹೇಳಲಾಗ್ತಿದೆ.ಈ ಎಲ್ಲಾ ಅಂಶಗಳನ್ನು ಗಮನಿಸುತ್ತಿದ್ರೆ,  ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ವಾ ಅನ್ನೋ ಅನುಮಾನ ಮೂಡುವಂತೆ ಮಾಡ್ತಿದೆ.

ಇನ್ನು ಜಿಲ್ಲೆಯಲ್ಲಿ ಹೆಚ್ಚಾಗ್ತಿರೋ ಡೆಂಘೀ ಪ್ರಕರಣಗಳು ಮತ್ತಷ್ಟು ಮಂದಿಯನ್ನು ಬಲಿ ಪಡೆಯೋ ಮೊದಲೇ ಜಿಲ್ಲಾಡಳಿತ ಈ ಸೋಂಕು ನಿಯಂತ್ರಿಸುವಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಅನಿಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss