Friday, September 20, 2024

Latest Posts

ಈ ಮೂರು ಕಾರಣಗಳಿಂದಾಗಿ ಹೆಣ್ಣು ಮಕ್ಕಳಲ್ಲಿ ಡಿಪ್ರೆಶನ್ ಕಂಡುಬರುತ್ತದೆ.

- Advertisement -

Health Tips: ಮೊದಲೆಲ್ಲ ಡಿಪ್ರೆಶನ್ ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಕಷ್ಟದ ದಿನ ಕಂಡಿರುತ್ತಿದ್ದರು. ಪತಿಯ ಮನೆಗೆ ಬಂದ ಬಳಿಕವೂ, ಅವರಿಗೆ ಅಷ್ಟು ಕಷ್ಟ ಎಂದೆನ್ನಿಸುತ್ತಿರಲಿಲ್ಲ. ಅಲ್ಲದೇ, ಅಂದಿನ ಕಾಲದಲ್ಲಿ ಬಾಣಂತನ ಅನ್ನೋದು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹಾಗಾದ್ರೆ ಇಂದಿನ ಹೆಣ್ಣು ಮಕ್ಕಳು ಡಿಪ್ರೆಶನ್‌ಗೆ ಹೋಗೋಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಇಂದಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಹಲವರು ಡಿಪ್ರೆಶನ್‌ನಿಂದದ ಬಳಲುತ್ತಿದ್ದಾರೆ. ಅದರಲ್ಲೂ ಪಿಸಿಓಎಸ್‌ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ, ಹಲವರು ಡಿಪ್ರೆಶನ್‌ಗೆ ಒಳಗಾಗುತ್ತಿದ್ದಾರೆ. ಬಾಣಂತಿಯರು ಡಿಪ್ರೆಶನ್‌ಗೆ ಒಳಗಾಗುತ್ತಿದ್ದಾರೆ. ಮುಟ್ಟು ನಿಲ್ಲುವ ಹೊತ್ತಿಗೆ ಮಹಿಳೆಯರು ಡಿಪ್ರೆಶನ್‌ಗೆ ಒಳಗಾಗುತ್ತಿದ್ದಾರೆ. ಈ ರೀತಿ ಹೆಣ್ಮು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡಿಪ್ರೆಶನ್‌ಗೆ ಒಳಗಗಾಗುತ್ತಿದ್ದಾರೆ.

ನಿಮ್ಮ ಮನೆಯ ಹೆಣ್ಣು ಮಕ್ಕಳು ಹೆಚ್ಚು ಮಾತನಾಡದೇ, ನಗದೇ, ಯಾವುದರ ಮೇಲೂ ಗಮನ ಹರಿಸದೇ, ಮೌನವಾಗಿ ಕೋಣೆಯೊಳಗೆ ಕುಳಿತುಕೊಳ್ಳುತ್ತಿದ್ದಾರೆ ಎಂದರೆ, ಅವರು ಡಿಪ್ರೆಶನ್‌ಗೆ ಒಳಗಾಗಿದ್ದಾರೆ ಎಂದರ್ಥ. ಹೀಗಿದ್ದಾಗ, ಅವರನ್ನು ಮಾತನಾಡಿಸಿ. ಅವರನ್ನು ನಗಿಸಲು ಪ್ರಯತ್ನಿಸಿ. ಅವರೊಂದಿಗೆ ಕುಳಿತು ಹರಟೆ ಹೊಡೆಯಿರಿ. ಯಾವುದೂ ಪ್ರಯೋಜನವಾಗದಿದ್ದಲ್ಲಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ. ಏಕೆಂದರೆ ಎಷ್ಟೋ ಜನ ಡಿಪ್ರೆಶನ್‌ಗೆ ಒಳಗಾಗಿ ಸೂಸೈ*ಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss