Recipe: ಚಪಾತಿ, ರೊಟ್ಟಿ ಮಾಡಿದಾಗ, ನಾರ್ಮಲ್ ಆಗಿ ನಾವು ಮನೆಯಲ್ಲಿ ಸಿಂಪಲ್ ಪಲ್ಯ, ಅಥವಾ ಚಟ್ನಿ, ಚಟ್ನಿಪುಡಿ ಜೊತೆ ತಿನ್ನುತ್ತೇವೆ. ಆದರೆ ನೀವು ಚಪಾತಿ ಜೊತೆ ಧಾಬಾ ಸ್ಟೈಲ್ ಆಲೂ ಗೋಬಿ ರೆಡಿ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಇಂದು ನಾವು ಧಾಬಾ ಸ್ಟೈಲ್ ಆಲೂ ಗೋಬಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಎರಡು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. 1 ಆಲೂಗಡ್ಡೆಯನ್ನು 12 ಪೀಸ್‌ಗಳಲ್ಲಿ ಕತ್ತರಿಸಿ, ಬಳಿಕ ಬೇಯಿಸಿ. ಈಗ ಪ್ಯಾನ್ ಬಿಸಿ ಮಾಡಿ, 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ, ಇದಕ್ಕೆ 250 ಗ್ರಾಂ ಹೂಕೋಸು, ಬೇಯಿಸಿದ ಆಲೂಗಡ್ಡೆ, ಕೊಂಚ ಅರಿಶಿನ ಹಾಕಿ ಹುರಿಯಿರಿ. ಬಳಿಕ, ಈ ಮಿಶ್ರಣವನ್ನು ಬೌಲ್‌ಗೆ ಹಾಕಿ. ಈಗ ಅದೇ ಪ್ಯಾನ್‌ಗೆ ಮತ್ತೆರಡು ಸ್ಪೂನ್ ಎಣ್ಣೆ ಮತ್ತು ತುಪ್ಪ ಹಾಕಿ. ಇದಕ್ಕೆ ಜೀರಿಗೆ, ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆ, ಹಸಿಮೆಣಸಿನಕಾಯಿ, ಸಣ್ಣ ತುಂಡುಗಳಾಗಿ ಮಾಡಿದ ಶುಂಠಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ಈಗ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಟೊಮೆಟೋ ಸೇರಿಸಿ ಮತ್ತಷ್ಟು ಹುರಿಯಿರಿ. 1 ಸ್ಪೂನ್ ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಕಸೂರಿ ಮೇಥಿ, ಸಕ್ಕರೆ, ಉಪ್ಪು ಇವಿಷ್ಟನ್ನು ಮಿಕ್ಸ್ ಮಾಡಿ. ಇದಕ್ಕೆ ಈಗಾಗಲೇ ಹುರಿದಿಟ್ಟುಕೊಂಡ ಆಲೂ ಗೋಬಿ, ನೀರು ಸೇರಿಸಿ, 5 ನಿಮಿಷ ಕುದಿಸಿದರೆ ಆಲೂ ಗೋಬಿ ರೆಡಿ. ಇದಕ್ಕೆ ಮೇಲಿನಿಂದ ಕೊತ್ತೊಂಬರಿ ಸೊಪ್ಪು ಗಾರ್ನಿಶ್ ಮಾಡಿ.